ಪ್ರಸಕ್ತ ಸಾಲಿನಿಂದ ಐಟಿಐಗೆ 6 ಹೊಸ ಕೋರ್ಸ್ ಸೇರ್ಪಡೆ: ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ

ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಐಟಿಐಗಳ ಉನ್ನತೀಕರಣ ಕಾರ್ಯಕ್ರಮ ನಡೆದಿದೆ. ಹೀಗಾಗಿ 6 ಹೊಸ ಕೋರ್ಸ್ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ.

ಪ್ರಸಕ್ತ ಸಾಲಿನಿಂದ ಐಟಿಐಗೆ 6 ಹೊಸ ಕೋರ್ಸ್ ಸೇರ್ಪಡೆ: ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ
ಅಶ್ವತ್ಥ್ ನಾರಾಯಣ

ಬೆಂಗಳೂರು: ಪ್ರಸಕ್ತ ಸಾಲಿನಿಂದ ಐಟಿಐಗೆ 6 ಹೊಸ ಕೋರ್ಸ್ ಸೇರ್ಪಡೆ ಮಾಡಲಾಗಿದೆ. ಇದಕ್ಕೆ ರಾಜ್ಯ ವೃತ್ತಿ ಶಿಕ್ಷಣ ಪರಿಷತ್ ಅನುಮೋದನೆ ನೀಡಿದೆ. ಪ್ರಸಕ್ತ ಸಾಲಿನಿಂದ ಹೊಸ ಕೋರ್ಸ್‌ಗೆ ಸೇರಲು ಅವಕಾಶ ನೀಡಲಾಗುವ ಬಗ್ಗೆ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಟಾಟಾ ಕಂಪನಿಯ ಸಹಯೋಗದಲ್ಲಿ ರಾಜ್ಯದ 150 ಐಟಿಐಗಳ ಉನ್ನತೀಕರಣ ಕಾರ್ಯಕ್ರಮ ನಡೆದಿದೆ. ಹೀಗಾಗಿ 6 ಹೊಸ ಕೋರ್ಸ್ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ.

ಎಲ್ಲಾ 150 ಐಟಿಐಗಳಿಗೆ ಈ ನಿರ್ಣಯ ಅನ್ವಯವಾಗಲಿದೆ. 2 ವರ್ಷದ ಕೋರ್ಸ್‌ಗಳಾದ ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್, ಬೇಸಿಕ್ಸ್ ಆಫ್ ಡಿಸೈನ್ ಮತ್ತು ವರ್ಚುಯಲ್ ವೆರಿಫಿಕೇಷನ್, 1 ವರ್ಷದ ಕೋರ್ಸ್‌ಗಳಾದ ಅಡ್ವಾನ್ಸ್ಡ್ ಮ್ಯಾನುಫ್ಯಾಕ್ಚರಿಂಗ್, ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್, ಇಂಡಸ್ಟ್ರಿಯಲ್ ರೊಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರ್, ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ ಕೋರ್ಸ್​ಗಳು ಆರಂಭವಾಗಲಿದೆ.

ಬ್ಯಾಟರಿ ಎಲೆಕ್ಟ್ರಿಕ್ ವೆಹಿಕಲ್ (2 ವರ್ಷ), ಬೇಸಿಕ್ಸ್ ಆಫ್ ಡಿಸೈನ್ ಅಂಡ್ ವರ್ಚ್ಯುಯಲ್ ವೆರಿಫಿಕೇಷನ್ (2 ವರ್ಷ), ಅಡ್ವಾನ್ಸ್ಡ್ ಮ್ಯಾನ್ಯುಫ್ಯಾಕ್ಚರಿಂಗ್ (1 ವರ್ಷ), ಆರ್ಟಿಸಾನ್ ಯೂಸಿಂಗ್ ಅಡ್ವಾನ್ಸ್ಡ್ ಟೂಲ್ಸ್ (1 ವರ್ಷ), ಇಂಡಸ್ಟ್ರಿಯಲ್ ರೊಬೊಟಿಕ್ಸ್ ಅಂಡ್ ಡಿಜಿಟಲ್ ಮ್ಯಾನ್ಯುಫ್ಯಾಕ್ಚರ್ (1 ವರ್ಷ), ಮ್ಯಾನ್ಯುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಆಟೊಮೇಷನ್ (1 ವರ್ಷ), ಈ 6 ಸಂಯೋಜನೆಗಳು ಐಟಿಐಗೆ ಸೇರ್ಪಡೆ ಆಗಿದೆ.

ಇದನ್ನೂ ಓದಿ: ‘ಪಿಎಚ್​ಡಿ, ಸ್ನಾತಕೋತ್ತರ ಪದವಿಗಳಿಗೆಲ್ಲ ಅಫ್ಘಾನ್​ನಲ್ಲಿ ಇನ್ನು ಬೆಲೆಯಿಲ್ಲ..ನಾವೆಲ್ಲ ಅದನ್ನು ಕಲಿಯದೆ ಸಾಧನೆ ಮಾಡಿದ್ದೇವೆ‘- ತಾಲಿಬಾನ್ ಶಿಕ್ಷಣ ಸಚಿವ

ಇದನ್ನೂ ಓದಿ: ಬೋಟಿನಲ್ಲಿ ಪಾಠ ಶಾಲೆ; ವರ್ಷಕ್ಕೆ 6 ತಿಂಗಳು ಪ್ರವಾಹದಲ್ಲಿ ಮುಳುಗುವ ಪ್ರದೇಶದಲ್ಲಿ ಯುವಕರಿಂದ ‘ಶಿಕ್ಷಣದ ನಾವೆಗೆ’ ಚಾಲನೆ

Click on your DTH Provider to Add TV9 Kannada