CA Success Story: ಸಿಎ ಪರೀಕ್ಷೆಯಲ್ಲಿ 800ಕ್ಕೆ 614 ಅಂಕ ಗಳಿಸಿ ದೇಶಕ್ಕೇ ಮೊದಲ ಸ್ಥಾನ ಪಡೆದ ನಂದಿನಿ; ಈಕೆಯ ಅಣ್ಣನೂ 18ನೇ ರ‍್ಯಾಂಕ್

ICAI CA Result 2021 Toppers: ಅತ್ಯಂತ ಕಠಿಣ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವ ನಂದಿನಿ ಅಗರ್ವಾಲ್ ಮತ್ತು 18ನೇ ಸ್ಥಾನ ಪಡೆದಿರುವ ಸಚಿನ್ ಅಗರ್ವಾಲ್ ಎಂಬ ತಂಗಿ-ಅಣ್ಣನ ಜೋಡಿಗೆ ನಾವೂ ಶುಭಕೋರೋಣ ಅಲ್ಲವೇ?

CA Success Story: ಸಿಎ ಪರೀಕ್ಷೆಯಲ್ಲಿ 800ಕ್ಕೆ 614 ಅಂಕ ಗಳಿಸಿ ದೇಶಕ್ಕೇ ಮೊದಲ ಸ್ಥಾನ ಪಡೆದ ನಂದಿನಿ; ಈಕೆಯ ಅಣ್ಣನೂ 18ನೇ ರ‍್ಯಾಂಕ್
ನಂದಿನಿ ಅಗರ್ವಾಲ್ ಮತ್ತು ಸಚಿನ್ ಅಗರ್ವಾಲ್
Follow us
TV9 Web
| Updated By: guruganesh bhat

Updated on:Sep 13, 2021 | 11:46 PM

ಇಂದು ಸಿಎ ಅಂತಿಮ ಪರೀಕ್ಷೆಯ (ICAI CA Result 2021) ಫಲಿತಾಂಶ ಬಿಡುಗಡೆಗೊಂಡಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಒಟ್ಟು 83,606 ಅಭ್ಯರ್ಥಿಗಳಲ್ಲಿ ಮಧ್ಯಪ್ರದೇಶದ ನಂದಿನಿ ಅಗರ್ವಾಲ್ ಎಂಬ ಹೆಣ್ಣುಮಗಳು 800ಕ್ಕೆ 614 ಅಂಕ ಗಳಿಸಿ ಮೊದಲ ಸ್ಥಾನ ಗಳಿಸಿದ್ದಾಳೆ. ಈಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್ 18ನೇ ಸ್ಥಾನ ಗಳಿಸಿಕೊಂಡಿದ್ದಾನೆ. ಈಮೂಲಕ ತಂಗಿ-ಅಣ್ಣನ ಜೋಡಿ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಸಿಎ ಹೊಸ ಸಿಲೇಬಸ್​ನಲ್ಲಿ ತಂಗಿ-ಅಣ್ಣನ ಜೋಡಿ ಸಾಧನೆ ಮಾಡಿದೆ. ನಂದಿನಿ ಮತ್ತು ಸಚಿನ್ ಇಬ್ಬರೂ 2017ರಲ್ಲಿ ದ್ವಿತೀಯ ಪಿಯು ತೇರ್ಗಡೆಯಾಗಿದ್ದರು. ಅರೇ! ಇದೇನಿದು? 2 ವರ್ಷ ಅಂತರವಿರುವ ಅಣ್ಣ ಮತ್ತು ತಂಗಿ ಹೇಗೆ ಒಟ್ಟಿಗೆ ದ್ವಿತಿಯ ಪಿಯು ಪರೀಕ್ಷೆ ಬರೆದಿದ್ದರು ಎಂಬ ಯೋಚನೆ ಬಂತಾ? ಮತ್ತೇನಿಲ್ಲ, ನಂದಿನಿ ಅಗರ್ವಾಲ್, ಬಾಲ್ಯದಲ್ಲಿ 2 ತರಗತಿಗಳನ್ನು ಓದದೇ ನೆರವಾಗಿ ಅಣ್ಣನ ಕ್ಲಾಸಿಗೇ ಸೇರಿಕೊಂಡಿದ್ದಳು. ಮುಂದೆ ಅಣ್ಣ ತಂಗಿ ಒಟ್ಟಿಗೇ ಓದಿ ಜತೆಜತೆಗೇ ಸಿಎ ಪಾಸ್ ಮಾಡಿದ್ದಾರೆ.

ಐಪಿಸಿಸಿ ಮತ್ತು ಸಿಎ ಎರಡೂ ಪರೀಕ್ಷೆಗಳಿಗೆ ನಾನು ಮತ್ತು ನನ್ನಣ್ಣ ಒಟ್ಟಿಗೆ ಓದಿಕೊಳ್ಳುತ್ತಿದ್ದೆವು. ಯಾವುದಾದರೂ ಪ್ರಶ್ನೆ ಪತ್ರಿಕೆ ಬಿಡಿಸಿದರೆ ನನ್ನ ಉತ್ತರಗಳನ್ನು ಅಣ್ಣ ಚೆಕ್ ಮಾಡುತ್ತಿದ್ದ. ನಾನು ಅಣ್ಣನ ಉತ್ತರ ಪತ್ರಿಕೆಯನ್ನು ನೋಡುತ್ತಿದ್ದೆ. ಎಂದಾದರೂ ನಾನು ಭರವಸೆ ಕಳೆದುಕೊಂಡೆ ಅನಿಸಿದರೆ ನನ್ನ ಅಣ್ಣ ಹೆಗಲಾಗಿ ಧೈರ್ಯ ತುಂಬುತ್ತಿದ್ದ ಎಂದು PwC ಎಂಬ ಸಂಸ್ಥೆಯಲ್ಲಿ ಆರ್ಟಿಕಲ್​ಶಿಪ್ ಮಾಡುತ್ತಿರುವ ನಂದಿನಿ ಅಗರ್ವಾಲ್ ತಮ್ಮ ಓದಿನ ದಿನಗಳನ್ನು ನೆನೆಯುತ್ತಾರೆ.

ಕೊವಿಡ್ ಪ್ಯಾಂಡಮಿಕ್ ಬಂತು. ಈ ಸಮಯ ಓದಿಗಾಗಿ ಇನ್ನಷ್ಟು ಸಮಯವನ್ನು ಮೀಸಲಿಡಲು ನಮಗೆ ಅವಕಾಶ ಮಾಡಿಕೊಟ್ಟಿತು. ಲಾಕ್​ಡೌನ್​ನಲ್ಲಿ ಮನೆಯಲ್ಲಿ ಎಷ್ಟು ಕಿತಾಪತಿ ಮಾಡಿದ್ದೆವೊ, ಅದಕ್ಕಿಂತ ಹೆಚ್ಚು ಅಧ್ಯಯನ ನಡೆಸಿದ್ದೇವೆ. ತಂಗಿ ನಂದಿನಿ ತುಂಬಾ ಒಳ್ಳೆಯ ಅಂಕ ಪಡೆಯುತ್ತಾಳೆ ಎಂಬ ಭರವಸೆ ನನಗಿತ್ತು ಎನ್ನುತ್ತಲೇ ಸಚಿನ್ ಆಗರ್ವಾಲ್ ಮುಗುಳ್ನಕ್ಕರು. ಸದ್ಯ ಅವರು ಗುರುಗ್ರಾಮ ಮೂಲದ One Poiny Advisors ಎಂಬ ಸಂಸ್ಥೆಯಲ್ಲಿ ಆರ್ಟಿಕಲ್​ಶಿಪ್ ಮಾಡುತ್ತಿದ್ದಾರೆ.

ಈ ಸಾಧಕ ಅಣ್ಣ ತಂಗಿಯ ತಂದೆ ನರೇಶ್ ಚಂದ್ರ ಟ್ಯಾಕ್ಸ್ ಪ್ರಾಕ್ಟಿಸಿಯರ್ ಆಗಿ ಕೆಲಸ ಮಾಡುತ್ತಾರೆ. ತಾಯಿ ಡಿಂಪಲ್ ಗುಪ್ತಾ ಗೃಹಿಣಿ. ತಂದೆ ತಾಯಂದಿರ ಪ್ರೋತ್ಸಾಹ ಮತ್ತು ಭರವಸೆಯಿಂದಲೆ ನಾವು ಯಶ ಕಂಡಿದ್ದೇವೆ ಎನ್ನಲು ನಂದಿನಿ ಮತ್ತು ಸಚಿನ್ ಇಬ್ಬರೂ ಮರೆಯುವುದಿಲ್ಲ. ‘ಹುಡುಗಿಯರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮನಸು ಮಾಡುವುದು ಕಡಿಮೆ. ಅದರಲ್ಲೂ ಒಂದೆರಡು ಬಾರಿ ಅಂತಹ ಪರೀಕ್ಷೆಗಳಲ್ಲಿ ವಿಫಲರಾದರೆ ಮನೆಯಲ್ಲಿ ಮತ್ತೆ ಪರೀಕ್ಷೆ ಬರೆಯುವುದು ಬೇಡ ಎನ್ನುವ ಸಾಧ್ಯತೆಗಳೇ ಇವೆ. ಹುಡುಗಿಯರ ಕನಸಿಗೆ ಪೋಷಕರು ರೆಕ್ಕೆಯಾಗಿ ಕಾಯಬೇಕು ಎನ್ನುತ್ತಾರೆ ನಂದಿನಿ ಅಗರ್ವಾಲ್.

ಅತ್ಯಂತ ಕಠಿಣ ಸಿಎ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆದಿರುವ ನಂದಿನಿ ಅಗರ್ವಾಲ್ ಮತ್ತು 18ನೇ ಸ್ಥಾನ ಪಡೆದಿರುವ ಸಚಿನ್ ಅಗರ್ವಾಲ್ ಎಂಬ ತಂಗಿ-ಅಣ್ಣನ ಜೋಡಿಗೆ ನಾವೂ ಶುಭಕೋರೋಣ ಅಲ್ಲವೇ?

ಇದನ್ನೂ ಓದಿ: 

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್​ಗೆ ದೇಶದಲ್ಲೇ ಅಗ್ರಸ್ಥಾನ; ಕರ್ನಾಟಕದ ಹಲವು ಶೈಕ್ಷಣಿಕ ಸಂಸ್ಥೆಗಳ ಸಾಧನೆ

ಸ್ವರ್ಣ ಸಾಧಕಿಯರಿವರು: ಬಸ್ಸೇ ಬಾರದ ಊರಿಂದ ಬಂದಾಕೆಗೆ 20, ಗಡಿ ಜಿಲ್ಲೆಯ ಅನ್ನದಾತನ ಮಗಳಿಗೆ 10 ಚಿನ್ನದ ಪದಕ

(ICAI CA Result 2021 topper Nandini Agarwal first rank and her brother Sachin Agarwal 18th rank sister and brother duo)

Published On - 9:24 pm, Mon, 13 September 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್