AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್​ಗೆ ದೇಶದಲ್ಲೇ ಅಗ್ರಸ್ಥಾನ; ಕರ್ನಾಟಕದ ಹಲವು ಶೈಕ್ಷಣಿಕ ಸಂಸ್ಥೆಗಳ ಸಾಧನೆ

NIRF Ranking 2021: ನಿಮ್ಹಾನ್ಸ್, ಮಣಿಪಾಲ್ ಕಾಲೇಜ್ ಆಫ್‌ ಡೆಂಟಲ್ ಸೈನ್ಸ್‌, ಕಾನೂನು ಶಿಕ್ಷಣ ವಿಭಾಗದಲ್ಲಿ ಬೆಂಗಳೂರಿನ NLSIUಗೆ ದೇಶದಲ್ಲಿಯೇ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳೆಂಬ ಮಾನ್ಯತೆ ದೊರೆತಿದೆ.

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್​ಗೆ ದೇಶದಲ್ಲೇ ಅಗ್ರಸ್ಥಾನ; ಕರ್ನಾಟಕದ ಹಲವು ಶೈಕ್ಷಣಿಕ ಸಂಸ್ಥೆಗಳ ಸಾಧನೆ
ಐಐಎಸ್​ಸಿ ಬೆಂಗಳೂರು
TV9 Web
| Updated By: guruganesh bhat|

Updated on:Sep 09, 2021 | 4:49 PM

Share

ದೆಹಲಿ: 2021ನೇ ಸಾಲಿನ ದೇಶದ ಶಿಕ್ಷಣ ಸಂಸ್ಥೆಗಳ ರ್ಯಾಂಕಿಂಗ್ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯಿಂದ ಬಿಡುಗಡೆ ಬಿಡುಗಡೆಗೊಂಡಿದ್ದು, ಸಂಶೋಧನಾ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಂಬರ್ 1 ಸ್ಥಾನ ಪಡೆದುಕೊಂಡಿದೆ. ಅತ್ಯುತ್ತಮ ಸಂಶೋಧನಾ ವಿಶ್ವವಿದ್ಯಾಲಯಗಳ ಪೈಕಿ ಐಐಟಿ ಮದ್ರಾಸ್, ಐಐಟಿ ಬಾಂಬೇ, ಐಐಟಿ ದೆಹಲಿ, ಐಐಟಿ ಖರಗ್​ಪುರ ನಂತದ ಸ್ಥಾನದಲ್ಲಿವೆ. ಒಟ್ಟು 10 ವಿಭಾಗಗಳಲ್ಲಿ ದೇಶದ ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟ ಆಧಾರದಲ್ಲಿ ಱಂಕಿಂಗ್ ನೀಡಲಾಗಿದೆ. ಹೀಗೆ ವಿಭಾಗವಾರು ಅಲ್ಲದೆಯೂ ಬೆಂಗಳೂರು ಐಐಎಸ್​ಸಿ 2ನೇ ಸ್ಥಾನದಲ್ಲಿದೆ. ಐಐಎಂ ಬೆಂಗಳೂರಿಗೆ ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ಎರಡನೇ ಸ್ಥಾನ ದೊರೆತಿದೆ. ಮೆಡಿಸಿನ್ ವಿಭಾಗದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ. ಕಾನೂನು ಶಿಕ್ಷಣ ವಿಭಾಗದಲ್ಲಿ ಬೆಂಗಳೂರಿನ NLSIUಗೆ ದೇಶದಲ್ಲಿಯೇ ಮೊದಲನೇ ಸ್ಥಾನ ದೊರೆತಿದೆ. ಉಡುಪಿಯ ಮಣಿಪಾಲ್ ಕಾಲೇಜ್ ಆಫ್‌ ಡೆಂಟಲ್ ಸೈನ್ಸ್‌ ಅಗ್ರ ಡೆಂಟಲ್ ಕಾಲೇಜುಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ: 

Dengue Symptoms: ನಿಮ್ಮ ಜ್ವರ ಡೆಂಗ್ಯೂ ಜ್ವರವಾ ಎಂದು ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಉಪಯುಕ್ತ ಮಾಹಿತಿ

Kidney Problem: ಮೂತ್ರಪಿಂಡದ ಸಮಸ್ಯೆಯ ಲಕ್ಷಣ ಮತ್ತು ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ತಿಳಿಯಿರಿ

(NIRF Ranking 2021 IISC Bengaluru named best research institutes in India)

Published On - 4:39 pm, Thu, 9 September 21