ನಿಶ್ಚಿತಾರ್ಥದ ನಂತರ ಚಿನ್ನಾಭರಣಗಳೊಂದಿಗೆ ಯುವತಿ ಪರಾರಿ; ಮೂಗಿನ ಮೇಲೆ ಬೆರಳಿಡುವಂತಹ ಸಿನಿಮೀಯ ಕೌಟುಂಬಿಕ ಕಥೆ!
ಯಶೋಧಾ ಅವರ (ಮೂಲತಃ ಹಜರತ್) ಅಕ್ಕನ ಮಗ ಅಕ್ಬರ್ ಜತೆ ವರ್ಷಾ ಪರಾರಿಯಾಗಿದ್ದಾಳೆ ಎಂಬ ಆರೋಪವೇ ಈಗ ಕೇಳಿಬಂದಿರುವುದು.
ಮಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣದೊಂದಿಗೆ ಪರಾರಿಯಾದ ಪ್ರಕರಣಕ್ಕೆ ರೋಚಕ ತಿರುವು ದೊರೆತಿದೆ. ನಿಶ್ಚಿತಾರ್ಥ ಮಾಡಿಕೊಂಡು ಚಿನ್ನಾಭರಣಗಳೊಂದಿಗೆ ನಾಪತ್ತೆಯಾದ ಪ್ರಕರಣ ಈಗ ಸಿನಿಮೀಯ ರೀತಿಯಲ್ಲಿ ಕೌಟುಂಬಿಕ ಹಿನ್ನೆಲೆಯ ಆಯಾಮವೊಂದನ್ನು ಪಡೆದುಕೊಂಡಿದ್ದು, ಪೊಲೀಸರೇ ಮೂಗಿನ ಮೇಲೆ ಬೆರಳಿಡುವಂತಾಗಿದೆ.
ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಗದಗ ಮೂಲದ ದಂಪತಿಯ 21 ವರ್ಷದ ಪುತ್ರಿ ವರ್ಷಾ (ಹೆಸರು ಬದಲಿಸಲಾಗಿದೆ) ನಿಶ್ಚಿತಾರ್ಥದ ಮಾಡಿಕೊಂಡು ಚಿನ್ನಾಭರಣಗಳೊಂದಿಗೆ ಪರಾರಿಯಾದ ಯುವತಿ. ಈಕೆ 90 ಹಣವನ್ನು ಅಕ್ಬರ್ ಎಂಬಾತನ ಹೆಸರಿಗೆ ವರ್ಗಾಯಿಸಿ ನಾಪತ್ತೆಯಾಗಿದ್ದಾಳೆ ಎಂಬ ದೂರು ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 1 ಲಕ್ಷ ಬೆಲೆಬಾಳುವ ಒಂದು ಚಿನ್ನದ ಸರ, 50 ಸಾವಿರ ರೂ ಬೆಲೆಬಾಳುವ ಉಂಗುರ, ಕಿವಿಯೋಲೆ ಮತ್ತು ಬೆಳ್ಳಿ ಕಾಲು ಗೆಜ್ಜೆ ತೆಗೆದುಕೊಂಡು ಈಕೆ ಪರಾರಿಯಾಗಿದ್ದಳು. ಆದರೆ ಈ ಪ್ರಕರಣದ ಹಿಂದೆ ಕುಟುಂಬದ ಹಳೆಯ ಕಥೆಯೊಂದು ಇರುವುದು ಇದೀಗ ಬಹಿರಂಗಗೊಂಡಿದೆ.
22 ವರ್ಷಗಳ ಹಿಂದೆ ವೀರೇಶ್ ಎಂಬಾತನ ಜತೆ ಹಜರತ್ ಎಂಬಾಕೆ ಮದುವೆಯಾಗಿದ್ದಳು. ಈ ಅಂತರ್ ಧರ್ಮೀಯ ಮದುವೆಯ ನಂತರ ಹಜರತ್ ತನ್ನ ಹೆಸರನ್ನು ಯಶೋದಾ ಎಂದು ಬದಲಿಸಿಕೊಂಡಿದ್ದಳು. ಈ ಜೋಡಿಯ ಮಗಳೇ ವರ್ಷಾ. ಇತ್ತೀಚಿಗಷ್ಟೇ ವೀರೇಶ್-ಯಶೋಧಾ ಮಗಳು 21 ವರ್ಷದ ರೇಷ್ಮಾಗೆ ನಿಶ್ಚಿತಾರ್ಥವಾಗಿತ್ತು. ಆದರೆ ವರ್ಷಾ ನಿಶ್ಚಿತಾರ್ಥದ ನಂತರ ನಾಪತ್ತೆಯಾಗಿದ್ದಳು. ಯಶೋಧಾ ಅವರ (ಮೂಲತಃ ಹಜರತ್) ಅಕ್ಕನ ಮಗ ಅಕ್ಬರ್ ಜತೆ ವರ್ಷಾ ಪರಾರಿಯಾಗಿದ್ದಾಳೆ ಎಂಬ ಆರೋಪವೇ ಈಗ ಕೇಳಿಬಂದಿರುವುದು. ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈಗಾಗಲೇ ವರ್ಷಾ ನಾಪತ್ತೆಯಾದ ಕುರಿತು ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ತಿಳಿದುಬಂದಿರುವ ಕೌಟುಂಬಿಕ ಹಿನ್ನೆಲೆಯ ಆಯಾಮದಲ್ಲೂ ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಪರಾಧ ಸುದ್ದಿಗಳು: ಬೆಂಗಳೂರಿನಲ್ಲಿ ಹೆಚ್ಚಿದ ಪೆಟ್ರೋಲ್ ಕಳ್ಳರ ಹಾವಳಿ
Crime Update: ಪರಿಹಾರ ಧನಕ್ಕೆ ಲಂಚ, ಬೋರ್ವೆಲ್ ವೈರ್ ಕಳ್ಳತನ, ಆತ್ಮಹತ್ಯೆ, ಕಳ್ಳರ ಬಂಧನ
(Mangalore girl fled with jewellery after her engagement case turns cinematic family story)
Published On - 5:44 pm, Thu, 9 September 21