AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICAI CA Result 2021: ಇಂದು ಸಿಎ ಫೌಂಡೇಶನ್​ ಮತ್ತು ಫೈನಲ್​ ಪರೀಕ್ಷೆಗಳ ಫಲಿತಾಂಶ ಪ್ರಕಟ ಸಾಧ್ಯತೆ; ಆನ್​ಲೈನ್​ ಮೂಲಕ ನೋಡುವ ವಿಧಾನ ಹೀಗಿದೆ

ಅಭ್ಯರ್ಥಿಗಳು icaiexam.icai.org ವೆಬ್​ಸೈಟ್​ನಲ್ಲಿ ತಮ್ಮ ಇ-ಮೇಲ್​ ಐಡಿ ಮೂಲಕ ರಿಜಿಸ್ಟರ್​ ಆಗಿಯೂ ಫಲಿತಾಂಶ ಪಡೆಯಬಹುದು ಎಂದು ಐಸಿಎಐ ತಿಳಿಸಿದೆ.

ICAI CA Result 2021: ಇಂದು ಸಿಎ ಫೌಂಡೇಶನ್​ ಮತ್ತು ಫೈನಲ್​ ಪರೀಕ್ಷೆಗಳ ಫಲಿತಾಂಶ ಪ್ರಕಟ ಸಾಧ್ಯತೆ; ಆನ್​ಲೈನ್​ ಮೂಲಕ ನೋಡುವ ವಿಧಾನ ಹೀಗಿದೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 13, 2021 | 12:09 PM

Share

ದೆಹಲಿ: ಚಾರ್ಟರ್ಡ್ ಅಕೌಂಟಂಟ್ಸ್​ ಆಫ್​ ಇಂಡಿಯಾ ಇನ್​ಸ್ಟಿಟ್ಯೂಶನ್​  (ICAI) ಇಂದು ಸಿಎ ಫೌಂಡೇಶನ್ ಮತ್ತು ಫೈನಲ್​ ಪರೀಕ್ಷೆಗಳ (ICAI CA Foundation and Final Exams Result) ಫಲಿತಾಂಶವನ್ನು ಇಂದು ಸಂಜೆ (ಸೆಪ್ಟೆಂಬರ್​ 13) ಅಥವಾ ಸೆಪ್ಟೆಂಬರ್​ 14 (ನಾಳೆ) ಘೋಷಣೆ ಮಾಡುವ ಸಾಧ್ಯತೆ ಇದೆ. ಸಿಎ ಫೌಂಡೇಶನ್​ ಮತ್ತು ಫೈನಲ್​ ಪರೀಕ್ಷೆಗಳು ಜುಲೈ 2021ರಲ್ಲಿ ನಡೆದಿದ್ದವು.  ಇದೀಗ ಹಳೇ ಮತ್ತು ಹೊಸ ವರ್ಷನ್​ ಕೋರ್ಸ್​ ಎರಡೂ ವಿಭಾಗದವರ ಫಲಿತಾಂಶವೂ ಒಟ್ಟಿಗೇ ಬರಲಿದೆ.

ಐಸಿಎಐ ಸಿಎ ಫೌಂಡೇಶನ್ ಮತ್ತು ಫೈನಲ್​ ಪರೀಕ್ಷೆಗಳನ್ನು ಬರೆದಿರುವವರು ತಮ್ಮ ಫಲಿತಾಂಶವನ್ನು ಸಂಸ್ಥೆಯ ವೆಬ್​​ಸೈಟ್​ಗಳಾದ icaiexam.icai.org, caresults.icai.org and icai.nic.in ಮೂಲಕ ಪಡೆಯಬಹುದು. ಈ ವೆಬ್​ಸೈಟ್​ಗಳಿಗೆ ಹೋಗಿ ಅಲ್ಲಿ ರೋಲ್​ನಂಬರ್​, ನೋಂದಣಿ ಸಂಖ್ಯೆ ಅಥವಾ ಪಿನ್​ ನಂಬರ್​ಗಳನ್ನು ಒದಗಿಸಿದರೆ ಆನ್​ಲೈನ್​ ಮೂಲಕವೇ ಫಲಿತಾಂಶ ನೋಡಬಹುದಾಗಿದೆ.

ಸಿಎ (CA) ಫಲಿತಾಂಶ ನೋಡುವ ವಿಧಾನ ಇಲ್ಲಿದೆ.. 1.ಮೊದಲು icaiexam.icai.org,  caresults.icai.org ಅಥವಾ icai.nic.in-ಈ ಮೂರರಲ್ಲಿ ಯಾವುದಾದರೂ ವೆಬ್​ಸೈಟ್​ಗೆ ಭೇಟಿ ಕೊಡಿ 2.ಹೋಮ್​ ಪೇಜ್​​ನಲ್ಲಿ ಪರೀಕ್ಷೆ ಫಲಿತಾಂಶ ಸಂಬಂಧ ಲಿಂಕ್​ ಕೊಡಲಾಗಿದ್ದು, ಅದರ ಮೇಲೆ ಕ್ಲಿಕ್​ ಮಾಡಿ. 3. ನಿಮ್ಮ ಮಾಹಿತಿಗಳನ್ನು ಹಾಕಿ ಲಾಗಿನ್​ ಆಗಿ. 4. ಸ್ಕ್ರೀನ್​ ಮೇಲೆ ನಿಮ್ಮ ಅಂಕಪಟ್ಟಿ ಕಾಣಿಸುತ್ತದೆ. ಅದನ್ನು ಡೌನ್​ಲೋಡ್ ಮಾಡಿಕೊಳ್ಳಿ

ಈ ವಿಧಾನ ಹೊರತುಪಡಿಸಿದರೆ ಅಭ್ಯರ್ಥಿಗಳು icaiexam.icai.org ವೆಬ್​ಸೈಟ್​ನಲ್ಲಿ ತಮ್ಮ ಇ-ಮೇಲ್​ ಐಡಿ ಮೂಲಕ ರಿಜಿಸ್ಟರ್​ ಆಗಿಯೂ ಫಲಿತಾಂಶ ಪಡೆಯಬಹುದು. ಪ್ರಸ್ತುತ ವೆಬ್​ಸೈಟ್​​ನಲ್ಲಿ ರಿಜಿಸ್ಟರ್​ ಮಾಡಿಕೊಂಡರೆ ಅತ್ತ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ನಿಮ್ಮ ಮೇಲ್​ಗೆ ನಿಮ್ಮ ಅಂಕ ಬರುತ್ತದೆ. ಸಿಎ ಫೌಂಡೇಶನ್​ ಪರೀಕ್ಷೆ ಬರೆದವರು ಮತ್ತು ಅಂತಿಮ ಪರೀಕ್ಷೆ ಬರೆದವರು ಎರಡೂ ವಿಭಾಗದವರೂ ಈ ವಿಧಾನ ಅನುಸರಿಸಬಹುದಾಗಿದೆ ಎಂದು ಐಸಿಎಐ ತಿಳಿಸಿದೆ.

ಇದನ್ನೂ ಓದಿ: IPL 2021: ಹೋಟೆಲ್ ರೂಮ್​ನಲ್ಲೇ ಅಭ್ಯಾಸ ಆರಂಭಿಸಿದ ಸನ್​ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್

ಗಂಡನ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಸಾಯಿಸಿ, ಶವವನ್ನ ಕಸದಂತೆ ಚರಂಡಿಗೆ ಹಾಕಿದ ತುಮಕೂರು ಮಹಿಳೆ

Follow Us
TV9 Web
TV9 Web

TV9 Kannada

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಮುಡಾ ಹಗರಣ: ಸೈಟ್​​ ಖರೀದಿಸಿದವರಲ್ಲಿ ಹೆಚ್ಚಿದ ಆತಂಕ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ