ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಯಿಸಿ, ಶವವನ್ನ ಕಸದಂತೆ ಚರಂಡಿಗೆ ಹಾಕಿದ ತುಮಕೂರು ಮಹಿಳೆ
ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿತ್ತು. ಅಲ್ಲದೆ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು, ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತುಮಕೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪತ್ನಿಯೇ ಪತಿಯನ್ನು ಹತ್ಯೆ ಮಾಡಿದ ಘಟನೆ ತುಮಕೂರಿನ ಬಡ್ಡಿಹಳ್ಳಿಯಲ್ಲಿ ನಡೆದಿದೆ. ಪತಿ ನಾರಾಯಣ(52) ಹತ್ಯೆಗೈದ ಪತ್ನಿ ಅನ್ನಪೂರ್ಣ, ಶವವನ್ನು ಚರಂಡಿಗೆ ಎಸೆದಿದ್ದಾಳೆ. ಸದ್ಯ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ ಬಳಿಯ ಟೋಲ್ನಲ್ಲಿ ಪತಿ ನಾರಾಯಣ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿ ಪ್ರತಿದಿನ ಜಗಳವಾಗುತ್ತಿತ್ತು. ಕಳೆದ 8 ವರ್ಷಗಳಿಂದ ಪ್ರತಿನಿತ್ಯ ಜಗಳವಾಗುತ್ತಿತ್ತು. ಅಲ್ಲದೆ ಅನ್ನಪೂರ್ಣಗೆ ಅಕ್ರಮ ಸಂಬಂಧ ಇತ್ತು, ಇದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೆಲಮಂಗಲ: ಪತಿ, ಪತ್ನಿಯ ಮಧ್ಯೆ ಗಲಾಟೆ; ಪತಿಯ ಮೇಲೆ ಹಲ್ಲೆ ಮಾವ-ಬಾಮೈದ ಸೇರಿ ಅಳಿಯನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಇಸ್ಲಾಂಪುರದ ಇದಾಯತ್ ಉಲ್ಲಾ ಖಾನ್ (30) ಹಲ್ಲೆಗೊಳಗಾದ ವ್ಯಕ್ತಿ. ಸದ್ಯ ಇಸ್ಲಾಂಪುರದ ಇದಾಯತ್ ಉಲ್ಲಾ ಖಾನ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಂದೇ ಗ್ರಾಮದ ದಂಪತಿಗಳು ಹತ್ತು ವರ್ಷದ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಸರಿಯಾಗಿ ಕುಟುಂಬ ನಿರ್ವಹಣೆ ಮಾಡಿರಲಿಲ್ಲ. ಆಗಾಗ್ಗೆ ಕುಟುಂಬದಲ್ಲಿ ಪತಿ-ಪತ್ನಿಯರ ನಡುವೆ ಗಲಾಟೆ, ಬಡಿದಾಟ ನಡೆದಿತ್ತು. ಹೀಗಾಗಿ ಪತ್ನಿ ಉನ್ನಿಸ ಪೋಷಕರಿಗೆ ಪತಿ ವಿರುದ್ಧ ದೂರಿದ್ದಾಳೆ. ಮಗಳ ದೂರಿನ್ವಯ ಪೋಷಕರ ನಡುವೆ ವಾಗ್ವಾದ ನಡೆದಿದ್ದು, ಮಾವ ಅನ್ಸರ್, ಬಾಮೈದ ಆಸ್ಕರ್ ಪಾಶ, ಹಲ್ಲೆ ನಡೆಸಿರುವ ಅರೋಪ ಕೇಳಿ ಬಂದಿದೆ. ಸದ್ಯ ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Crime: ರೇಪಿಸ್ಟ್ ಎಂದು ರೇಗಿಸಿದ ಕಾರಣಕ್ಕೆ ಕೊಲೆ; ಅಣ್ಣ, ತಮ್ಮ ಸೇರಿದಂತೆ ಮೂವರು ಆರೋಪಿಗಳ ಬಂಧನ
Crime News: ಹುಡುಗಿಗೆ ಮೆಸೇಜ್ ಕಳಿಸಿದ್ದಕ್ಕೆ ಕೇರಳದ ಯುವಕನ ಕತ್ತು ಹಿಸುಕಿ ಕೊಲೆ
Published On - 11:11 am, Mon, 13 September 21