ಧಾರವಾಡ: ಕಬ್ಬಿನ ಹೊಲದಲ್ಲಿ ಬೆಂಕಿ ತಗುಲಿ ಧಗಧಗನೆ ಉರಿದ ಲಾರಿ

ಧಾರವಾಡ: ಕಬ್ಬಿನ ಹೊಲದಲ್ಲಿ ಬೆಂಕಿ ತಗುಲಿ ಧಗಧಗನೆ ಉರಿದ ಲಾರಿ
ಕಬ್ಬಿನ ಹೊಲದಲ್ಲಿ ಲಾರಿಗೆ ಬೆಂಕಿ ತಗುಲಿದೆ

ಬೆಂಕಿ ಪಕ್ಕದ ಮೂರು ಎಕರೆಯಲ್ಲಿದ್ದ ಕಬ್ಬು ಬೆಳೆಗೆ ತಗುಲಿದ ಪರಿಣಾಮ ಕಬ್ಬು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

TV9kannada Web Team

| Edited By: sandhya thejappa

Jan 31, 2022 | 11:15 AM

ಧಾರವಾಡ: ಕಬ್ಬಿನ ಹೊಲದಲ್ಲಿ ಲಾರಿಗೆ (Lorry) ಬೆಂಕಿ (Fire) ತಗುಲಿ ಲಾರಿ ಧಗಧಗನೆ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ. ದ್ಯಾಮಣ್ಣ ಗುಡಿಗಾಳ ಎನ್ನುವವರ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಲಾರಿ ಸ್ಟಾರ್ಟ್ ಮಾಡುವಾಗ ಬೆಂಕಿಯ ಕಿಡಿ ಕೆಳಗೆ ಬಿದ್ದಿದೆ. ಕಿಡಿ ಕಬ್ಬಿನ ಹೊಲಕ್ಕೆ ತಗುಲಿದೆ. ಬಳಿಕ ಬೆಂಕಿ ಲಾರಿಗೂ ತಗುಲಿ ಧಗಧಗನೆ ಉರಿದಿದೆ. ಬೆಂಕಿ ಕ್ಷಣ ಮಾತ್ರದಲ್ಲಿ ಸಂಪೂರ್ಣ ಲಾರಿಗೆ ವ್ಯಾಪಿಸಿ ಸುಟ್ಟು ಕರಕಲಾಗಿದೆ.

ಬೆಂಕಿ ಪಕ್ಕದ ಮೂರು ಎಕರೆಯಲ್ಲಿದ್ದ ಕಬ್ಬು ಬೆಳೆಗೆ ತಗುಲಿದ ಪರಿಣಾಮ ಕಬ್ಬು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

50 ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ: ಈ ಹಿಂದೆ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಮಡ್ಲಿ ಗ್ರಾಮದಲ್ಲಿ ಶಾರ್ಟ್ ​ಸರ್ಕ್ಯೂಟ್​ನಿಂದ 50 ಎಕರೆ ಕಬ್ಬು ಬೆಳೆ ಸುಟ್ಟು ಕರಕಲಾಗಿತ್ತು. ಗ್ರಾಮದ ಹದಿನಾರು ರೈತರಿಗೆ ಸೇರಿದ 50 ಎಕರೆ ಕಬ್ಬು ನಾಶವಾಗಿದೆ. ಜಮೀನು ಬಳಿ ಶಾರ್ಟ್ ​ಸರ್ಕ್ಯೂಟ್​ನಿಂದಾಗಿ(short circuit) ಅಗ್ನಿ ಅವಘಡ ಸಂಭವಿಸಿದ್ದು, 50 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಕಬ್ಬು(sugarcane) ನಾಶವಾಗಿದೆ. ಸದ್ಯ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ (Fire) ನಂದಿಸಿದ್ದರು. ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

‘ಸಿನಿಮಾ ರಿಲೀಸ್​ ಡೇಟ್​ ಹತ್ತಿರ ಆದಾಗ ನಟಿಯರ ಬಟ್ಟೆ ಚಿಕ್ಕದಾಗತ್ತೆ’: ಈ ಟೀಕೆಗೆ ದೀಪಿಕಾ ತಿರುಗೇಟು ಏನು?

9ನೇ ತರಗತಿ ಹುಡುಗನಿಂದ ಹೋಯ್ತು 4 ಮಹಿಳೆಯರ ಪ್ರಾಣ; ಕಣ್ಣುಜ್ಜಲು ಹೋಗಿ ಫೂಟ್​ಪಾತ್​​ಗೆ ಕಾರು ​ಹತ್ತಿಸಿದ ಹುಡುಗ

Follow us on

Related Stories

Most Read Stories

Click on your DTH Provider to Add TV9 Kannada