9ನೇ ತರಗತಿ ಹುಡುಗನಿಂದ ಹೋಯ್ತು 4 ಮಹಿಳೆಯರ ಪ್ರಾಣ; ಕಣ್ಣುಜ್ಜಲು ಹೋಗಿ ಫೂಟ್​ಪಾತ್​​ಗೆ ಕಾರು ​ಹತ್ತಿಸಿದ ಹುಡುಗ

ಸದ್ಯ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.  ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಸರಿಯಾಗಿ ದಾರಿ ಕಾಣುತ್ತಿರಲಿಲ್ಲ.

9ನೇ ತರಗತಿ ಹುಡುಗನಿಂದ ಹೋಯ್ತು 4 ಮಹಿಳೆಯರ ಪ್ರಾಣ; ಕಣ್ಣುಜ್ಜಲು ಹೋಗಿ ಫೂಟ್​ಪಾತ್​​ಗೆ ಕಾರು ​ಹತ್ತಿಸಿದ ಹುಡುಗ
ಕಾರು ಅಪಘಾತದ ಚಿತ್ರ
Follow us
| Updated By: Lakshmi Hegde

Updated on:Jan 31, 2022 | 10:06 AM

ಫೂಟ್​ಪಾತ್​ ಮೇಲೆ ಕುಳಿತಿದ್ದ ನಾಲ್ವರು ಮಹಿಳೆಯರ ಪ್ರಾಣ ಅಪ್ರಾಪ್ತನಿಂದಾಗಿ ಹೋಗಿದೆ. ಅತ್ಯಂತ ವೇಗವಾಗಿ ಕಾರು ಚಾಲನೆ ಮಾಡಿದ ಬಾಲಕ, ವಾಹನವನ್ನು ಫೂಟ್​ಪಾತ್​ ಮೇಲೆ ಹರಿಸಿ, ಅಲ್ಲಿ ಕುಳಿತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆ ತೆಲಂಗಾಣದ (Telangana) ಕರೀಮ್​​ನಗರ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾಗಿ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.  

ಕಾರಿನಲ್ಲಿ ಒಟ್ಟು ಮೂವರು ಅಪ್ರಾಪ್ತರು ಇದ್ದರು. ಅದರಲ್ಲಿ ಒಬ್ಬಾತ ಕಾರು ಡ್ರೈವ್​​ ಮಾಡುತ್ತಿದ್ದ. ಆದರೆ ನಿಯಂತ್ರಣ ತಪ್ಪಿದ ಕಾರಣ ಫೂಟ್​ಪಾತ್​ ಮೇಲೆ ಹರಿಯಿತು. ಅಲ್ಲಿ ಕುಳಿತಿದ್ದ ನಾಲ್ವರು ಮಹಿಳೆಯರ ಪ್ರಾಣ ಹೋಗಿದೆ. ಸದ್ಯ ಕಾರಿನಲ್ಲಿದ್ದ ಮೂವರು ಅಪ್ರಾಪ್ತರ ವಿರುದ್ಧ ಐಪಿಎಸ್​ ಸೆಕ್ಷನ್​ 304ರಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ಕಾರು ಡ್ರೈವ್​ ಮಾಡುತ್ತಿದ್ದ ಬಾಲಕನ ತಂದೆ ವಿರುದ್ಧವೂ ಕೇಸ್​ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ನಾಲ್ವರನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.  ಮುಂಜಾನೆ 6.50ರ ಹೊತ್ತಿಗೆ ಘಟನೆ ನಡೆದಿದೆ. ಆ ಪ್ರದೇಶದಲ್ಲಿ ದಟ್ಟವಾದ ಮಂಜು ಇತ್ತು. ಸರಿಯಾಗಿ ದಾರಿ ಕಾಣುತ್ತಿರಲಿಲ್ಲ. ಈ ಮಧ್ಯೆ ಬಾಲಕ ತನ್ನ ಕಣ್ಣನ್ನು ಉಜ್ಜಿಕೊಳ್ಳಲು ಸ್ಟೀರಿಂಗ್​​ನಿಂದ ಕೈ ತೆಗೆದಾದ ನಿಯಂತ್ರಣ ಕಳೆದುಕೊಂಡಿದ್ದಾನೆ. ಆಗ ಕಾರು ಡಿವೈಡರ್​​ಗೆ ಡಿಕ್ಕಿ ಹೊಡೆದು, ಅಲ್ಲೇ ಫೂಟ್​ಪಾತ್​​ನ ತಾತ್ಕಾಲಿಕ ಗುಡಿಸಲಿನಲ್ಲಿದ್ದ ಮಹಿಳೆಯರಿಗೆ ಡಿಕ್ಕಿಯಾಗಿದೆ.  14 ವರ್ಷದ ಹುಡುಗಿ ಸೇರಿ 27-32 ವರ್ಷದೊಳಗಿನ ನಾಲ್ವರು ಮೃತಪಟ್ಟಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡ್ರೈವಿಂಗ್​​ಗೆ ಕುಳಿತಿದ್ದ ಬಾಲಕ ಸ್ಟೀರಿಂಗ್​ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಲ್ಲದೆ, ಬ್ರೇಕ್​ ಬದಲಿಗೆ ಆಕ್ಸಿಲರೇಟರ್​ ಪ್ರೆಸ್​ ಮಾಡಿದ್ದು, ದೊಡ್ಡ ಎಡವಟ್ಟಿಗೆ ಕಾರಣವಾಯಿತು ಎಂದಿದ್ದಾರೆ. ಈ ಬಾಲಕರೆಲ್ಲ 9ನೇ ತರಗತಿಯವರಾಗಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಕಾರು ಅಲ್ಲೇ ಬಿಟ್ಟು, ಎಲ್ಲರೂ ಓಡಿಹೋಗಿದ್ದರು. ನಂತರ ಅವರನ್ನು ಹಿಡಿಯಲಾಯಿತು ಎಂದೂ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಿರ್ಬಂಧಿತ ಬದುಕಿಗೆ ಕಡೆಗೂ ಸಿಕ್ತು ಬಿಗ್ ರಿಲೀಫ್; ಕೆಲವೆಡೆ ಆಕ್ರೋಶ, ಶಾಲೆಗಳತ್ತ ವಿದ್ಯಾರ್ಥಿಗಳು

Published On - 8:55 am, Mon, 31 January 22

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್