AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಬಂಧಿತ ಬದುಕಿಗೆ ಕಡೆಗೂ ಸಿಕ್ತು ಬಿಗ್ ರಿಲೀಫ್; ಕೆಲವೆಡೆ ಆಕ್ರೋಶ, ಶಾಲೆಗಳತ್ತ ವಿದ್ಯಾರ್ಥಿಗಳು

ಮತ್ತೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮತ್ತೆ ಶಾಲೆಗಳು ಆರಂಭಗೊಳ್ಳಲಿದೆ. ಕೊರೊನಾ ಮೂರನೇ ಅಲೆಯ ಹಾವಳಿಗೆ ಬೆಂಗಳೂರಿನಲ್ಲಿ ಶಾಲೆ ಬಂದ್ ಮಾಡಲಾಗಿತ್ತು. ಸದ್ಯ ನಾಲ್ಕು ವಾರಗಳ ಬಳಿಕ ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಂಡಿವೆ.

ನಿರ್ಬಂಧಿತ ಬದುಕಿಗೆ ಕಡೆಗೂ ಸಿಕ್ತು ಬಿಗ್ ರಿಲೀಫ್; ಕೆಲವೆಡೆ ಆಕ್ರೋಶ, ಶಾಲೆಗಳತ್ತ ವಿದ್ಯಾರ್ಥಿಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jan 31, 2022 | 9:08 AM

ಬೆಂಗಳೂರು: ರಾಜ್ಯದಲ್ಲಿ ನೈಟ್ ಕರ್ಫ್ಯೂ ರದ್ದಾದ ಹಿನ್ನೆಲೆ ನಾರ್ಮಲ್ ಲೈಫ್ ಕಂಡು ಬರುತ್ತಿದೆ. ಇನ್ನು, ಬಹುತೇಕ ವಲಯಗಳಿಗೆ ಫುಲ್ ಪರ್ಮಿಷನ್ ನೀಡಿದ್ರೂ ಕೆಲವೊಂದಿಷ್ಟು ಉದ್ಯಮಕ್ಕೆ ರಿಲೀಫ್ ನೀಡಿಲ್ಲ. ಥಿಯೇಟರ್, ಈಜುಕೊಳ, ಮದುವೆಗಳಿಗೆ ನಿರ್ಬಂಧ ಮುಂದುವರಿದಿದೆ. ಹೀಗಾಗಿ, ಚಿತ್ರೋದ್ಯಮ, ಈಜುಕೊಳ ಮಾಲೀಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.ಎಲ್ಲ ಉದ್ಯಮಗಳಿಗೆ ರಿಲೀಫ್ ನೀಡಿದ್ರೂ ಚಿತ್ರೋದ್ಯಮ, ಜಿಮ್, ಸ್ವಿಮ್ಮಿಂಗ್ ಪೂಲ್ಗೆ ಫುಲ್ ಪರ್ಮಿಷನ್ ಸಿಕ್ಕಿಲ್ಲ. ಸರ್ಕಾರದ ಈ ನಿರ್ಧಾರ ಮಾಲೀಕರನ್ನು ಬಡಿದೆಬ್ಬಿಸಿದೆ. ಅದ್ರಲ್ಲೂ ಸಿನಿಮಾಗೆ ಹೌಸ್ಫುಲ್ಗೆ ಅವಕಾಶ ನೀಡದೇ ಇರೋದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ರನ್ನು ಸಿಡಿದೇಳುವಂತೆ ಮಾಡಿದೆ.

ಚೌಲ್ಟ್ರಿಗೆ ಫ್ರೀಡಂ ಕೊಡದಿದ್ರೆ ಕೋರ್ಟ್ ಮೊರೆ ಕಲ್ಯಾಣ ಮಂಟಪದವ್ರದ್ದು ಇದೇ ಗೋಳು. ಸರ್ಕಾರ 200 ಜನರಿಗೆ ಅನುಮತಿ ಕೊಟ್ಟಿರೋದು ಸರಿಯಲ್ಲ. ಹೀಗಾಗಿ ಇವತ್ತು ಸಿಎಂ ಬೊಮ್ಮಾಯಿ ಅವ್ರನ್ನ ಭೇಟಿ ಮಾಡಿ ಮನವಿ ಮಾಡುತ್ತೇವೆ. ಒಂದ್ವೇಳೆ ನಮ್ಮ ಮನವಿಗೆ ಸ್ಪಂದಿಸದಿದ್ರೆ ಕೋರ್ಟ್ ಮೆಟ್ಟಿಲೇರುತ್ತವೆ. ನಮಗೆ ಮಿನಿಮಮ್ 50 ರಷ್ಟು ಅವಕಾಶ ನೀಡಿ ಅಂತ, ಮ್ಯಾರೇಜ್ ಹಾಲ್ಸ್ ಸಂಘದ ಅಧ್ಯಕ್ಷ ರಮೇಶ್ ರೆಡ್ಡಿ ಕಿಡಿಕಾರಿದ್ರು. ಈ ಸಂಬಂಧ ಇಂದು ಬೆಳಗ್ಗೆ 11ಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಭೇಟಿಯಾಗಲಿದ್ದಾರೆ.

‘ಈಜುಕೊಳಗಳಿಗೂ ಶೇ.100 ರಷ್ಟು ಅವಕಾಶ ನೀಡಿ’ ಈಜುಕೊಳಗಳಲ್ಲೂ ಶೇಕಡಾ 100 ರಷ್ಟು ಅವಕಾಶ ನೀಡಿ ಅಂತ ಸ್ವಿಮ್ಮಿಂಗ್ ಪೂಲ್ ಮಾಲೀಕರು ಸರ್ಕಾರಕ್ಕೆ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಬ್ಯುಸಿನೆಸ್ ಸಮಯದಲ್ಲಿ ಹೀಗೆ ಮಾಡೋದು ಸರಿಯಲ್ಲ. ಕೊವಿಡ್ ನಿಯಮ ಪಾಲಿಸಿ ಈಜುಕೊಳ ನಿರ್ವಹಣೆ ಮಾಡುತ್ತೇವೆ ಅಂತಿದ್ದಾರೆ. ಇನ್ನೂ ಜಿಮ್‌ಗಳಿಗೂ ಸರ್ಕಾರ ರಿಲೀಫ್ ನೀಡಿಲ್ಲ. ಹೀಗಾಗಿ ಆಕ್ರೋಶ ಹೊರಹಾಕಿರೋ ಜಿಮ್ ಮಾಲೀಕರು, ಈಗಾಗ್ಲೇ ಹಲವು ಜಿಮ್‌ಗಳು ಕ್ಲೋಸ್ ಆಗಿವೆ. 100 ಪರ್ಸೆಂಟ್ ಅವಕಾಶ ನೀಡಿದಿದ್ರೆ, ಎಲ್ಲ ಜಿಮ್‌ಗಳು ಶಾಶ್ವತವಾಗಿ ಬಾಗಿಲು ಹಾಕಬೇಕಾಗುತ್ತೆ. ಕೂಡಲೇ ರೂಲ್ಸ್ ಸಡಿಲ ಮಾಡ್ಬೇಕು ಅಂತಾ ಆಗ್ರಹಿಸಿದ್ದಾರೆ.

ಪ್ರತಿಭಟನೆ, ಱಲಿಗಳು ಸಂಪೂರ್ಣ ನಿಷೇಧ ಇದ್ರ ಜೊತೆಗೆ ಧಾರ್ಮಿಕ ಉತ್ಸವಗಳು, ಜಾತ್ರೆ, ಪ್ರತಿಭಟನೆ ಮತ್ತು ಱಲಿಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಮುಂದಿನ ಆದೇಶದವರೆಗೂ ಯಾರೂ ಪ್ರತಿಭಟನೆ, ಱಲಿ ಮಾಡುವಂತಿಲ್ಲ. ಸದ್ಯ ಕೆಲವೊಂದಿಷ್ಟು ವಲಯಗಳಿಗೆ ಅನುಮತಿ ನೀಡದೇ ಇರೋದು ಉದ್ಯಮಿಗಳನ್ನು ಕೆರಳಿಸಿದೆ. ಬೇರೆ ಉದ್ಯಮಗಳಂತೆ ನಮಗೂ ಫುಲ್ ಪರ್ಮಿಷನ್ ನೀಡಿ ಅಂತಾ ಆಗ್ರಹಿಸಿದ್ದಾರೆ. ಆದ್ರೆ, ಸರ್ಕಾರ ಇವ್ರ ಮನವಿಗೆ ಯಾವ ರೀತಿ ಸ್ಪಂದಿಸುತ್ತೋ ಕಾದು ನೋಡ್ಬೇಕು.

ಇಂದಿನಿಂದ ಶಾಲೆಗಳು ಆರಂಭ ಇನ್ನು ಮತ್ತೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಮತ್ತೆ ಶಾಲೆಗಳು ಆರಂಭಗೊಳ್ಳಲಿದೆ. ಕೊರೊನಾ ಮೂರನೇ ಅಲೆಯ ಹಾವಳಿಗೆ ಬೆಂಗಳೂರಿನಲ್ಲಿ ಶಾಲೆ ಬಂದ್ ಮಾಡಲಾಗಿತ್ತು. ಸದ್ಯ ನಾಲ್ಕು ವಾರಗಳ ಬಳಿಕ ಬೆಂಗಳೂರಿನಲ್ಲಿ ಶಾಲೆಗಳು ಪುನಾರಂಭಗೊಂಡಿವೆ. ಶೇ.100ರಷ್ಟು ಮಕ್ಕಳು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಶಾಲೆ ಆರಂಭಕ್ಕೆ ಕೊವಿಡ್ ನಿಯಮ ಪಾಲಿಸುವುದು ಕಡ್ಡಾಯ. ಯಾವುದಾದರೂ ತರಗತಿಯಲ್ಲಿ ಮಕ್ಕಳಿಗೆ ಕೊರೊನಾ ಬಂದರೆ ಆ ತರಗತಿ ಕೊಠಡಿ ಮುಚ್ಚಿ ಸ್ಯಾನಿಟೈಸ್ ಮಾಡಬೇಕು. ಶಾಲೆಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕ್ರಮಕೈಗೊಳ್ಳುತ್ತಾರೆ.

ಇದನ್ನೂ ಓದಿ: Bigg Boss 15 Winner: ನಟಿ ತೇಜಸ್ವಿ ಪ್ರಕಾಶ್​ಗೆ ‘ಬಿಗ್​ ಬಾಸ್​ 15’ ವಿನ್ನರ್​ ಪಟ್ಟ; ಬಹುಮಾನದ ಮೊತ್ತ ಎಷ್ಟು?

Published On - 7:24 am, Mon, 31 January 22