AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ

2021‌ರ ಎಪ್ರಿಲ್ ತಿಂಗಳಿನಿಂದ 2022 ಜನವರಿಯವರೆಗು, ಬರೊಬ್ಬರಿ ಏಳು ಲಕ್ಷ ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜೂ ಹಾಗೂ ಸಫಾರಿ ಎಂಜಾಯ್ ಮಾಡುವುದಕ್ಕೆ ಬಂದ ಪ್ರವಾಸಿಗರಿಂದ ಒಟ್ಟು 8 ಕೋಟಿ 84 ಲಕ್ಷ ಹಣ ಇಲಾಖೆಗೆ ಸಂದಾಯವಾಗಿದೆ.

ಲಾಕ್​ಡೌನ್​ ನಡುವೆಯೂ ಲಾಭ ಗಳಿಸಿದ ಪ್ರವಾಸಿ ತಾಣ; ಬನ್ನೇರುಘಟ್ಟ ಉದ್ಯಾನವನ‌ದಲ್ಲಿ ಕೋಟ್ಯಾಂತರ ರೂ. ಹಣ ಸಂಗ್ರಹ
ಬನ್ನೇರುಘಟ್ಟ ಜೈವಿಕ ಉದ್ಯಾನವನ‌
TV9 Web
| Updated By: preethi shettigar|

Updated on:Feb 06, 2022 | 10:50 AM

Share

ಬೆಂಗಳೂರು: ಕೊವಿಡ್​ನ ಮೊದಲ ಮತ್ತು ಎರಡನೇ ಅಲೆಯಲ್ಲಿ ಅದೆಷ್ಟೋ ಉದ್ಯಮಗಳು ನೆಲಕ್ಕಚ್ಚಿದ್ವು, ಅದೆಷ್ಟೋ ಪ್ರವಾಸಿ ತಾಣಗಳು ಬಂದ್ ಆಗಿ ನಷ್ಟ ಅನುಭವಿಸಿದ್ದವು. ಇನ್ನೂ ಕೂಡ ಅದೆಷ್ಟೋ ಕೈಗಾರಿಕೆ ಉದ್ಯಮ ಕೆಲಸ ಕಾರ್ಯಗಳು ಈಗಲೂ ಪ್ರಾರಂಭವಾಗಿಲ್ಲ. ಪ್ರವಾಸಿ ತಾಣಗಳ(Tourist place) ಸ್ಥಿತಿ ಬಹಳ ಶೋಚನೀಯವಾಗಿದೆ.‌ ಆದರೆ ಇಂತಹ ಸಂದರ್ಭದಲ್ಲಿ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನ‌(Bannerghatta Biological Park) ಕೋಟ್ಯಾಂತರ ಹಣ ಲಾಭ ಗಿಟ್ಟಿಸಿಕೊಂಡಿದೆ. ಪ್ರೋಟೊಕಾಲ್ ಪಾಲಿಸುತ್ತಲೇ ಸರಕಾರಕ್ಕೆ ಕೋಟ್ಯಾಂತರ ಹಣ ಲಾಭ ಮಾಡಿಕೊಟ್ಟಿದೆ. ಲಾಕ್​ಡೌನ್​, ಸೆಮಿ‌ ಲಾಕ್​ಡೌನ್, ವಿಕೆಂಡ್ ಕರ್ಫ್ಯೂ(Weekend curfew) ಅಂತ ಹಲವು ದುಮ್ಮಾನಗಳ ಮಧ್ಯೆಯೂ ತನ್ನ ಸೊಬಗು ಹಾಗೂ ಉತ್ತಮ ಆಡಳಿತದ ಪರಿಣಾಮ ನಷ್ಟದ ಕಾಲದಲ್ಲೂ ಲಾಭ ಕಂಡುಕೊಂಡಿದೆ.

2021‌ರ ಎಪ್ರಿಲ್ ತಿಂಗಳಿನಿಂದ 2022 ಜನವರಿಯವರೆಗು, ಬರೊಬ್ಬರಿ ಏಳು ಲಕ್ಷ ಪ್ರವಾಸಿಗರು ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜೂ ಹಾಗೂ ಸಫಾರಿ ಎಂಜಾಯ್ ಮಾಡುವುದಕ್ಕೆ ಬಂದ ಪ್ರವಾಸಿಗರಿಂದ ಒಟ್ಟು 8 ಕೋಟಿ 84 ಲಕ್ಷ ಹಣ ಇಲಾಖೆಗೆ ಸಂದಾಯವಾಗಿದೆ. ಹಾಗೆಯೇ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸೊಬಗನ್ನು‌ ಸವಿಯಲು ವಿದೇಶದಿಂದ ಕೂಡ ಜನರು ಆಗಮಿಸಿದ್ದಾರೆ ಎಂದು ಬನ್ನೇರುಘಟ್ಟ ಪಾರ್ಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರಿ ವಿಪಿನ್ ಸಿಂಗ್ ಹೇಳಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿ ತಾಣ ಅಲ್ಲದೇ ಇದ್ದರೂ ಸದ್ಯ ರಾಜ್ಯದ ಒನ್ ಆಫ್‌ ದಿ ಬೆಸ್ಟ್ ಟೂರಿಸ್ಟ್ ಸ್ಟಾಟ್ ಆಗಿ ಪರಿಣಮಿಸಿದೆ. ಇಲ್ಲಿನ‌ ಸ್ವಚ್ಛತೆ ಹಾಗೂ ಹಸಿರು ಪ್ರದೇಶ ಪ್ರವಾಸಿಗರಿಗೆ ಕೈ ಬೀಸಿ ಕರೆಯುತ್ತದೆ. ಬೆಂಗಳೂನಿಂದ ಕೇವಲ ಮೂವತ್ತು ಕಿ.ಮಿ ಅಂತರವಿರುವ ಪಾರ್ಕ್​ಗೆ ಪುಟಾಣಿ ಮಕ್ಕಳು ಅತಿ ಹೆಚ್ಚು ಸಂಖ್ಯೆಯಲ್ಲಿ ಭೇಟಿ ಕೊಟ್ಟ ಪ್ರದೇಶ ಅಂತಲೂ ಕೀರ್ತಿಗೆ ಭಾಜನವಾಗಿದೆ.

ವರದಿ: ಸೈಯ್ಯದ್ ನಿಜಾಮುದ್ದೀನ್

ಇದನ್ನೂ ಓದಿ:

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಪೋಷಕರೊಂದಿಗೆ ಭೇಟಿ ನೀಡುತ್ತಿರುವ ಮಕ್ಕಳ ಮುಖದಲ್ಲಿ ಮಾಸ್ಕ್ ಕಾಣಿಸುತ್ತಿಲ್ಲ

Tourism: ಮೈಸೂರು: ವೀಕೆಂಡ್ ಕರ್ಫ್ಯೂ ತೆರವಾದರೂ ಪ್ರವಾಸಿ ತಾಣಗಳಿಗೆ ಬಾರದ ಪ್ರವಾಸಿಗರು

Published On - 10:48 am, Sun, 6 February 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ