ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಪೋಷಕರೊಂದಿಗೆ ಭೇಟಿ ನೀಡುತ್ತಿರುವ ಮಕ್ಕಳ ಮುಖದಲ್ಲಿ ಮಾಸ್ಕ್ ಕಾಣಿಸುತ್ತಿಲ್ಲ
ಪಾರ್ಕ್ಗಳಲ್ಲಿ ಶೇಕಡಾ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಅಂತ ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದ್ದರೂ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್ ಭೇಟಿ ನೀಡುತ್ತಿರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಸಿಲಿಕಾನ್ ನಗರ ಬೆಂಗಳೂರಿನ ಲ್ಯಾಂಡ್ ಮಾರ್ಕ್ ಸ್ಥಳಗಳಲ್ಲಿ ಒಂದು ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಪ್ರತಿದಿನ ನೂರಾರು ಮತ್ತು ವಾರಾಂತ್ಯಗಳಲ್ಲಿ ಸಾವಿರಾರು ಜನರನ್ನು ಇದು ಆಕರ್ಷಿಸುತ್ತದೆ. ಕೊವಿಡ್-19 ಪಿಡುಗಿನ ಮೂರನೇ ಅಲೆ ಕರ್ನಾಟಕದಲ್ಲಿ ಮತ್ತು ದೇಶದೆಲ್ಲೆಡೆ ಶುರುವಾಗಿದೆ ಮತ್ತು ಪ್ರತಿದಿನ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ಆತಂಕ ಹುಟ್ಟಿಸುತ್ತಿರುವ ಕಾರಣ ಸರ್ಕಾರಗಳು ಲಾಕ್ ಡೌನ್ ಮತ್ತು ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಅನೇಕ ಪ್ರವಾಸಿತಾಣಗಳು ಬಂದ್ ಆಗಿವೆ. ಪಾರ್ಕ್ಗಳಲ್ಲಿ ಶೇಕಡಾ 50 ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಅಂತ ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖವಾಗಿದ್ದರೂ ಬನ್ನೇರುಘಟ್ಟ ರಾಷ್ಟ್ರೀಯ ಪಾರ್ಕ್ ಭೇಟಿ ನೀಡುತ್ತಿರುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲ.
ಮೂರನೇ ಅಲೆಯ ನಂತರ ಕೊರೊನಾ ದುರ್ಬಲಗೊಳ್ಳುತ್ತದೆ ಎಂದು ತಜ್ಞರು ಹೇಳುತ್ತಿರುವುದರಿಂದ ನಾವೆಲ್ಲ ಯಾಮಾರದೆ ಎಚ್ಚರದಿಂದ ಇರಬೇಕಾದ ಅವಶ್ಯಕತೆಯಂತೂ ಇದೆ. ಲಸಿಕೆ ಹಾಕಿಸಿಕೊಳ್ಳಲು ಜನ ಈಗಲೂ ಹಿಂದೇಟು ಹಾಕುತ್ತಿದ್ದಾರೆ. 15-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಸರ್ಕಾರ ಆರಂಭಿಸಿದೆ.
ಆದರೆ 15ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅಪಾಯ ತಪ್ಪಿದಲ್ಲ. ಪಾರ್ಕ್ ವಿಷಯ ಮಾತಾಡುವಾಗ ಇದೆಲ್ಲ ಯಾಕೆ ಅಂತ ನೀವು ಅಂದುಕೊಳ್ಳುತ್ತಿರಬಹುದು.
ಅದರ ಅವಶ್ಯಕತೆಯಿದೆ. ಬನ್ನೇರುಘಟ್ಟ ಪಾರ್ಕ್ನಲ್ಲಿ ಬಹಳಷ್ಟು ಮಕ್ಕಳು ಕಾಣಿಸುತ್ತಿವೆ. ಆದರೆ, ಕೆಲವರ ಮುಖದ ಮೇಲೆ ಮಾತ್ರ ಮಾಸ್ಕ್ ಇದೆ. ತಂದೆ ತಾಯಿಗಳು ಮಕ್ಕಳ ಬಗ್ಗೆ ಬಹಳ ಜಾಗರೂಕರಾಗಿರಬೇಕಿದೆ. ದಯವಿಟ್ಟು ಯಾಮಾರಬೇಡಿ.
ನಾವೆಲ್ಲ ಸೇರಿ ಕೊರೋನಾ ಮಹಾಮಾರಿಯನ್ನು ಸೋಲಿಸಲೇಬೇಕಿದೆ.
ಇದನ್ನೂ ಓದಿ: Saif Ali Khan: ಕರೀನಾ ಕಪೂರ್ಗಿಂದ ಕತ್ರಿನಾ ಹೆಚ್ಚು ಹಾಟ್ ಎಂದಿದ್ದ ಸೈಫ್; ಹಳೇ ವಿಡಿಯೋ ಮತ್ತೆ ವೈರಲ್