ಪಂಜಾಬ್​​ನಲ್ಲಿ ಉಂಟಾದ ತೀವ್ರ ಸ್ವರೂಪದ ಭದ್ರತಾ ಲೋಪದಿಂದ ಪ್ರಧಾನಿ ಮೋದಿಯವರು ಱಲಿಯಲ್ಲಿ ಪಾಲ್ಗೊಳ್ಳದೆ ವಾಪಸ್ಸಾದರು

ಪಂಜಾಬ್​​ನಲ್ಲಿ ಉಂಟಾದ ತೀವ್ರ ಸ್ವರೂಪದ ಭದ್ರತಾ ಲೋಪದಿಂದ ಪ್ರಧಾನಿ ಮೋದಿಯವರು ಱಲಿಯಲ್ಲಿ ಪಾಲ್ಗೊಳ್ಳದೆ ವಾಪಸ್ಸಾದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 05, 2022 | 10:50 PM

ಹುಸೈನಿವಾಲಾದ ಹುತಾತ್ಮರ ರಾಷ್ಟ್ರೀಯ ಸ್ಮಾರಕನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿಯೂ ಪ್ರಧಾನಿಗಳು ಭಾಗವಹಿಸಬೇಕಿತ್ತು.ಈ ಲೋಪಕ್ಕೆ ಹೊಣೆಗಾರರು ಯಾರು ಅನ್ನೋದನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರವು ಪಂಜಾಬ ಸರ್ಕಾರಕ್ಕೆ ಸೂಚಿಸಿದೆ.

ತೀವ್ರ ಸ್ವರೂಪದ ಭದ್ರತಾ ಲೋಪದಿಂದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬುಧವಾರದಂದು ಪಂಜಾಬಿನ ಹುಸೈನಿವಾಲಾ ಹತ್ತಿರದ ಮೇಲ್ಸೇತುವೆ ಮೇಲೆ ಸುಮಾರು 20 ನಿಮಿಷಗಳ ಕಾಲ ಕಾಯಬೇಕಾಯಿತಲ್ಲದೆ, ಫಿರೋಜ್ಪುರ್ ನಲ್ಲಿ ನಿಗದಿಯಾಗಿದ್ದ ಱಲಿಯಲ್ಲಿ ಪಾಲ್ಗೊಳ್ಳದೆ ವಾಪಸ್ಸಾಗಬೇಕಾಯಿತು. ಸ್ಥಳೀಯರೊಬ್ಬರು ಪ್ರಧಾನಿ ಮೋದಿ ಅವರು ಸೇತುವೆ ಮೇಲೆ ಕಾಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ಫೋನಲ್ಲಿ ರೆಕಾರ್ಡ್ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಭಟಿಂಡಾನಿಂದ ಹುಸೈನಿವಾಲಾನಲ್ಲಿರುವ ಹುತಾತ್ಮರ ರಾಷ್ಟ್ರೀಯ ಸ್ಮಾರಕಕ್ಕೆ ತೆರಳುವಾಗ ಸೇತುವೆಯ ಮತ್ತೊಂದು ಕೊನೆಯಲ್ಲಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದರಿಂದ ಅವರ ಮತ್ತು ಕಾವಲುಪಡೆಯ ವಾಹನಗಳು ಸೇತುವೆ ಮೇಲೆ ನಿಂತುಬಿಡುವ ಪ್ರಸಂಗ ಎದುರಾಯಿತು. ಕೇಂದ್ರ ಗೃಹ ಸಚಿವಾಲಯವು ಈ ಘಟನೆಯನ್ನು ತೀವ್ರ ಸ್ವರೂಪ ಭದ್ರತಾ ಲೋಪ ಎಂದು ಬಣ್ಣಿಸಿದೆ.

ಹುಸೈನಿವಾಲಾದ ಹುತಾತ್ಮರ ರಾಷ್ಟ್ರೀಯ ಸ್ಮಾರಕನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿಯೂ ಪ್ರಧಾನಿಗಳು ಭಾಗವಹಿಸಬೇಕಿತ್ತು.ಈ ಲೋಪಕ್ಕೆ ಹೊಣೆಗಾರರು ಯಾರು ಅನ್ನೋದನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರವು ಪಂಜಾಬ ಸರ್ಕಾರಕ್ಕೆ ಸೂಚಿಸಿದೆ.

ಘಟನೆಯ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿರುವ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು, ಪಂಜಾಬನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಮತ್ತು ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಅವರು ಸರ್ಕಾರ ನಡೆಸಲು ಅಸಮರ್ಥರಾಗಿದ್ದಾರೆ ಎಂದಿದ್ದಾರೆ.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಟ್ವೀಟ್​ನಲ್ಲಿ ಪಂಜಾಬನಲ್ಲಿ ಅಧಿಕಾರರೂಢ ಕಾಂಗ್ರೆಸ್ ಸರ್ಕಾರ ಬುಧವಾರ ಫಿರೋಜಪುರನಲ್ಲಿ ನಡೆಯಬೇಕಿದ್ದ ಱಲಿ ಸೇರಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎಲ್ಲಾ ಕಾರ್ಯಕ್ರಮಗಳನ್ನು ಹಳಿ ತಪ್ಪಿಸಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಪ್ರಯೋಗಿಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:    ಹೇಗಿತ್ತು ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿ ಪ್ರದಾನ ಸಮಾರಂಭ? ಇಲ್ಲಿದೆ ವಿಡಿಯೋ ಝಲಕ್​