Tourism: ಮೈಸೂರು: ವೀಕೆಂಡ್ ಕರ್ಫ್ಯೂ ತೆರವಾದರೂ ಪ್ರವಾಸಿ ತಾಣಗಳಿಗೆ ಬಾರದ ಪ್ರವಾಸಿಗರು

Tourism: ಮೈಸೂರು: ವೀಕೆಂಡ್ ಕರ್ಫ್ಯೂ ತೆರವಾದರೂ ಪ್ರವಾಸಿ ತಾಣಗಳಿಗೆ ಬಾರದ ಪ್ರವಾಸಿಗರು
ಮೈಸೂರು ಅರಮನೆ (ಸಾಂದರ್ಭಿಕ ಚಿತ್ರ)

Mysore Palace: ವೀಕೆಂಡ್ ಕರ್ಪ್ಯೂ ಮುಕ್ತವಾದರೂ ಪ್ರವಾಸಿ ತಾಣಗಳಲ್ಲಿ ಜನರು ಕಾಣಿಸುತ್ತಿಲ್ಲ. ಕಳೆದ ವಾರ ವೀಕೆಂಡ್ ಕರ್ಪ್ಯೂ ಇದ್ದ ಕಾರಣ ಪ್ರವಾಸಿ ತಾಣಗಳಿಗೆ ಜನರು ಬಂದಿರಲಿಲ್ಲ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 23, 2022 | 5:46 PM

ಮೈಸೂರು: ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ (Weekend Curfew) ತೆರವಾಗಿದೆ. ಆದರೂ ರಾಜ್ಯದ ಪ್ರವಾಸಿ ತಾಣಗಳತ್ತ ಜನರು ಸುಳಿಯುತ್ತಿಲ್ಲ. ಬಹುತೇಕ ಪ್ರವಾಸಿ ತಾಣಗಳು ಬಣಗುಡುತ್ತಿವೆ. ಸಾಮಾನ್ಯವಾಗಿ ಜನಸಂದಣಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದ ಮೈಸೂರು ಅರಮನೆ (Mysore Palace) ಸುತ್ತಮುತ್ತಲೂ ಜನರು ಸುಳಿಯುತ್ತಿಲ್ಲ. ವೀಕೆಂಡ್ ಕರ್ಪ್ಯೂ ಮುಕ್ತವಾದರೂ ಪ್ರವಾಸಿ ತಾಣಗಳಲ್ಲಿ (Tourist Destination) ಜನರು ಕಾಣಿಸುತ್ತಿಲ್ಲ. ಕಳೆದ ವಾರ ವೀಕೆಂಡ್ ಕರ್ಪ್ಯೂ ಇದ್ದ ಕಾರಣ ಪ್ರವಾಸಿ ತಾಣಗಳಿಗೆ ಜನರು ಬಂದಿರಲಿಲ್ಲ. ಈ ವಾರವೂ ಅದೇ ಪರಿಸ್ಥಿತಿ ಮುಂದುವರಿದಿದೆ. ಕೋವಿಡ್ ಲಸಿಕೆ ಹಾಕಿದವರಿಗೆ ಮಾತ್ರ ಮೈಸೂರು ಅರಮನೆಗೆ ಪ್ರವೇಶ ನೀಡಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೇ ಅರಮನೆಯನ್ನು ವೀಕ್ಷಿಸಬೇಕೆಂದು ಪೊಲೀಸರು ನಿಯಮ ಮಾಡಿದ್ದಾರೆ. ಮುಖ್ಯದ್ವಾರದ ಬಳಿ ಪೊಲೀಸರು ಎಲ್ಲ ಪ್ರವಾಸಿಗರನ್ನು ಪರಿಶೀಲಿಸಿಯೇ ಒಳಗೆ ಬಿಡುತ್ತಿದ್ದಾರೆ.

ಕಾಡೆಮ್ಮೆ ಬೇಟೆಗೆ ಹುಲಿ ಯತ್ನ: ಕ್ಯಾಮೆರಾದಲ್ಲಿ ಸೆರೆಯಾಯ್ತು ಅಪರೂಪದ ದೃಶ್ಯ ಹುಲಿಯೊಂದು ಕಾಡೆಮ್ಮೆ ಬೇಟೆಗೆ ಯತ್ನಿಸುವ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೈಸೂರಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಹುಣಸೂರು ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರ ಕಣ್ಣಿಗೆ ಬಿದ್ದಿದೆ. ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ಅಚಾನಕ್ ದಾಳಿ ಮಾಡಿತು. ಹುಲಿ ಹತ್ತಿರಕ್ಕೆ ಬಂದಿದ್ದು ಅರಿತ ತಕ್ಷಣ ಕಾಡೆಮ್ಮಿ ಅಲ್ಲಿಂದ ಓಡಿ ಹೋಯಿತು. ಹುಲಿ ದಾಳಿ ದೃಶ್ಯಗಳನ್ನು ಪ್ರವಾಸಿಗರು ಖುಷಿಯಿಂದ ಸೆರೆ ಹಿಡಿದಿದ್ದಾರೆ.

ಅರಣ್ಯಾಧಿಕಾರಿಗಳಿಂದ ಚಿರತೆ ರಕ್ಷಣೆ ನಂಜನಗೂಡು ತಾಲೂಕಿನ ಜಾಲಹಳ್ಳಿ ಗ್ರಾಮದ ಬಳಿ ಸೋಲಾರ್ ತಂತಿಗೆ ಸಿಲುಕಿ ರಾತ್ರಿಯಿಡೀ ನರಳಾಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯಕ್ಕೆ ಬಿಡಲು ಉದ್ದೇಶಿಸಲಾಗಿದೆ. ಹೆಡಿಯಾಲ ವಲಯದ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಬಾಳೆತೋಟಕ್ಕೆ ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸಲು ಅಳವಡಿಸಿದ್ದ ಸೋಲಾರ್ ತಂತಿಬೇಲಿಗೆ ಚಿರತೆಯ ಬಲಗಾಲು ಸಿಲುಕಿತ್ತು. ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಿಣೆ ಮಾಡಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada