ಶಾಲೆಗೆ ಕಾಂಪೌಂಡ್ ನಿರ್ಮಾಣ ವಿಚಾರಕ್ಕೆ ಮಂಡ್ಯದ ಮಾಜಿ ಹಾಗೂ ಹಾಲಿ ಶಾಸಕರ ನಡುವೆ ಕಿತ್ತಾಟ, ಕರೆ ಮಾಡಿ ಬುದ್ದಿ ಮಾತು ಹೇಳಿದ ಸಿದ್ದರಾಮಯ್ಯ
ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ರಸ್ತೆ ಮಾಡಿ, ರಸ್ತೆಗೆ ಜಾಗಬಿಟ್ಟು ಕಾಂಪೌಂಡ್ ಮಾಡಲು ಅಂದಿನ ಶಾಸಕ ರಮೇಶ್ ಬಂಡಿಸಿದ್ದೆಗೌಡ ಮುಂದಾಗಿದ್ರು. ಆದ್ರೆ ಅದು ಶಾಲೆಯ ಜಾಗ ಅಲ್ಲಿ ರಸ್ತೆ ಮಾಡಬಾರದು ಅಂತ 10 ವರ್ಷಗಳ ಹಿಂದೆ ಇಂದಿನ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಗ್ರಾಮಸ್ಥರು ಕೋರ್ಟ್ ಮೊರೆಯೋಗಿ ತಡೆಯಾಜ್ಞೆ ತಂದಿದ್ದರು.
ಮಂಡ್ಯ: ಅದು ಮಂಡ್ಯದ ಮಾಜಿ ಹಾಗೂ ಹಾಲಿ ಶಾಸಕರ ಸ್ವಗ್ರಾಮ. ಆ ಗ್ರಾಮದ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡೋ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಹಾಲಿ ಶಾಸಕರು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ರೆ, ಮಾಜಿ ಶಾಸಕರು ಶಾಲೆಗೆ ಕಾಂಪೌಂಡ್ ಬೇಡ ಅಂತಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಹಾಲಿ ಶಾಸಕ ರವೀಂದ್ರ ಶ್ರೀಕಂಠಯ್ಯರ ಹಾಗೂ ಮಾಜಿ ಶಾಸಕ ರಮೇಶ್ ಬಂಡಿ ಸಿದ್ದೆಗೌಡರ ಸ್ವಗ್ರಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ರಸ್ತೆ ಮಾಡಿ, ರಸ್ತೆಗೆ ಜಾಗಬಿಟ್ಟು ಕಾಂಪೌಂಡ್ ಮಾಡಲು ಅಂದಿನ ಶಾಸಕ ರಮೇಶ್ ಬಂಡಿಸಿದ್ದೆಗೌಡ ಮುಂದಾಗಿದ್ರು. ಆದ್ರೆ ಅದು ಶಾಲೆಯ ಜಾಗ ಅಲ್ಲಿ ರಸ್ತೆ ಮಾಡಬಾರದು ಅಂತ 10 ವರ್ಷಗಳ ಹಿಂದೆ ಇಂದಿನ ಶಾಸಕ ರವೀಂದ್ರ ಶ್ರೀಕಂಠಯ್ಯ ಹಾಗೂ ಗ್ರಾಮಸ್ಥರು ಕೋರ್ಟ್ ಮೊರೆಯೋಗಿ ತಡೆಯಾಜ್ಞೆ ತಂದಿದ್ದರು. ಇದೀಗಾ ಕಾಂಪೌಂಡ್ ಶಿಥಿಲವಾಗಿದ್ರಿಂದ ನೂತನ ಕಾಂಪೌಂಡ್ ನಿರ್ಮಾಣ ಮಾಡಲು ಶಾಸಕ ರವೀಂದ್ರ ಶ್ರೀಕಂಠಯ್ಯ ಮುಂದಾಗಿದ್ದಾರೆ. ಆದ್ರೆ ಇದೀಗಾ ಮಾಜಿ ಶಾಸಕರ ರಮೇಶ್ ಬಂಡಿಸಿದ್ದೆಗೌಡ ಹಾಗೂ ಅವರ ಬೆಂಬಲಿಗರು ಕಾಮಗಾರಿ ಮಾಡಬಾರದು, ಪ್ರಕರಣ ನ್ಯಾಯಾಲಯದಲ್ಲಿದೆ ಅಂತ ಕಾಮಗಾರಿಗೆ ತಡೆ ಹಿಡಿದಿದ್ದಾರೆ.
ಆದ್ರೆ ಈ ವಿಚಾರವಾಗಿ ಅಧಿಕಾರಿಗಳು ಹಾಗೂ ಶಾಸಕರ ಹೇಳೋದೆ ಬೇರೆ. ರಸ್ತೆ ವಿಚಾರ ಮಾತ್ರ ನ್ಯಾಯಾಲಯದಲ್ಲಿರೋದು. ಕಾಂಪೌಂಡ್ ಮಾಡಬಾರದು ಅಂತ ನ್ಯಾಯಾಲಯ ಮದ್ಯಂತರ ಆದೇಶ ಮಾಡಿಲ್ಲ ಅಂತಿದ್ದಾರೆ. ಇನ್ನು ಅಷ್ಟೆ ಅಲ್ಲದೆ ಶಾಲೆಯ ಹಿಂಭಾಗದಲ್ಲಿ ಮಾಜಿ ಶಾಸಕರ ಗ್ಯಾಸ್ ಗೋದಾಮಿದೆ. ಈ ರಸ್ತೆಯಲ್ಲಿ ಓಡಾಡಿದ್ರ ಒಳ್ಳೆಯದಾಗುತ್ತೆ ಅಂತ ಜ್ಯೋತಿಷಿಗಳು ಹೇಳಿದ್ದಾರೆ. ಇದ್ರಿಂದ ಶಾಲೆ ಆವರಣದಲ್ಲೆ ರಸ್ತೆ ಬೇಕು ಅಂತಿದ್ದಾರೆ ಅನ್ನೋ ಆರೋಪ ಕೂಡ ಇದೆ. ಇದು ಸರ್ಕಾರದ ಆಸ್ತಿ ಇದನ್ನ ಉಳಿಸಲು ನಾನು ಹೋರಾಟ ಮಾಡ್ತಿದ್ದೇನೆ. ಆದ್ರೆ ಅಧಿಕಾರಿಗಳು ಮಾಜಿ ಶಾಸಕರಿಗೆ ಬೆಂಬಲಕ್ಕೆ ನಿಂತಿದ್ದಾರೆ ಅಂತ ಶಾಸಕರು ಗಂಭೀರ ಆರೋಪ ಮಾಡ್ತಿದ್ದಾರೆ.
ಇನ್ನು ಇಂದು ಪಾದಯಾತ್ರೆ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯ ಡಿಸಿ ಹಾಗೂ ಎಸ್ಪಿಗೆ ಕರೆ ಮಾಡಿ ಶ್ರೀರಂಗಪಟ್ಟಣ ತಾಲೂಕಿನ ಹರ್ಕರೆ ಗ್ರಾಮದಲ್ಲಿ ರಸ್ತೆಗೆ ಅಧಿಕಾರಿಗಳಿಂದ ತಡೆಗೋಡೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ್ರು. ಆ ಪ್ರಕರಣ ಕೋರ್ಟ್ ನಲ್ಲಿದೆ. ವಿವಾದ ಇತ್ಯರ್ಥ ಆಗುವವರೆಗೂ ಕಾನೂನಿನ ಪ್ರಕಾರ ನಡೆದುಕೊಳ್ಳಿ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಕೊಡಬೇಡಿ ಅಂತಾ ಕರೆ ಮಾಡಿ ಸೂಚನೆ ನೀಡಿದ್ದಾರೆ.
ಒಟ್ಟಾರೆ, ಹಾಲಿ-ಮಾಜಿ ಶಾಸಕರ ವೈಯಕ್ತಿಕ ಕಿತ್ತಾಟ ಅಭಿವೃದ್ಧಿ ಕೆಲಸಗಳಿಗೆ ತೊಂದರೆಯಾಗಿರೋದು ಸುಳ್ಳಲ್ಲ. ಇಬ್ಬರ ಜಗಳದಲ್ಲಿ ಕೂಸ ಬಡವಾಯ್ತು ಅನ್ನೋಹಾಗೆ, ಇಬ್ಬರ ಜಗಳದಲ್ಲಿ ಸದ್ಯ ಶಾಲೆಯ ಮಕ್ಕಳಿಗೆ ತೊಂದರೆಯಾಗ್ತಿದೆ. ಸದ್ಯ ಅಧಿಕಾರಿಗಳು ಇದನ್ನ ಹೇಗೆ ಬಗೆಹರಿಸುತ್ತಾರೆ ಕಾದು ನೋಡಬೇಕಿದೆ.
ಪಾದಯಾತ್ರೆ ಮಧ್ಯೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯ ಡಿಸಿ ಹಾಗೂ ಎಸ್ಪಿಗೆ ಕರೆ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಹರ್ಕರೆ ಗ್ರಾಮದಲ್ಲಿ ರಸ್ತೆಗೆ ಅಧಿಕಾರಿಗಳಿಂದ ತಡೆಗೋಡೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಕರೆ ಮಾಡಿದ ಸಿದ್ದರಾಮಯ್ಯ ಆ ಪ್ರಕರಣ ಕೋರ್ಟ್ ನಲ್ಲಿದೆ. ವಿವಾದ ಇತ್ಯರ್ಥ ಆಗುವವರೆಗೂ ಕಾನೂನಿನ ಪ್ರಕಾರ ನಡೆದುಕೊಳ್ಳಿ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಕೊಡಬೇಡಿ ಅಂತಾ ಕರೆ ಮಾಡಿ ಬುದ್ದಿ ಮಾತು ಹೇಳಿದ್ದಾರೆ.
ಇದನ್ನೂ ಓದಿ: ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ; ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
KPSC Jobs: ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ!