AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಬಾಡಿಗೆಗೆ ಕ್ಯಾಮೆರಾ ಪಡೆದು ವಂಚಿಸುತ್ತಿದ್ದ ಆರೋಪಿಯ ಬಂಧನ!

ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಜೆ.ಜೆ.ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನ್ಸೂರ್ ಹಾಗೂ ಅಲಿಬಾ ಬಂಧಿತರು. ಬಂಧಿತ ಮನ್ಸೂರ್ ನೀಡಿದ ಮಾಹಿತಿ ಮೇರೆಗೆ ಅಲಿಬಾ ಎಂಬಾತನ ಬಂಧನವಾಗಿದೆ.

ಬೆಂಗಳೂರಿನಲ್ಲಿ ಬಾಡಿಗೆಗೆ ಕ್ಯಾಮೆರಾ ಪಡೆದು ವಂಚಿಸುತ್ತಿದ್ದ ಆರೋಪಿಯ ಬಂಧನ!
ಆರೋಪಿಯಿಂದ ವಶಕ್ಕೆ ಪಡೆದ ಕ್ಯಾಮೆರಾಗಳು
TV9 Web
| Edited By: |

Updated on: Mar 06, 2022 | 1:16 PM

Share

ಬೆಂಗಳೂರು: ಬಾಡಿಗೆಗೆ ಕ್ಯಾಮೆರಾ (Camera) ಪಡೆಯಲು ಬಂದು ವಂಚಿಸುತ್ತಿದ್ದ ಆರೋಪಿಯನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪುರುಷೋತ್ತಮ್ ಬಂಧಿತ ಆರೋಪಿ. ಫೆಬ್ರವರಿ 22 ಚಂದ್ರಾಲೇಔಟಿನ ಇನ್ಫೆನೆಟ್ ವಿಂಗ್ ಫೋಟೋ ಸ್ಟುಡಿಯೋದಲ್ಲಿ (Photo Studio) ಕಳ್ಳತನ ನಡೆದಿತ್ತು. ಸೋನಿ ಎಸ್ 7 ಕ್ಯಾಮೆರಾ ಪಡೆದು ಕ್ಲಾರಿಟಿ ಪರಿಶೀಲಿಸುವುದಾಗಿ ಆರೋಪಿ ಹೇಳಿದ್ದ. ಹೊರಗಡೆ ಫೋಟೋ ಕ್ಲಿಕ್ಕಿಸುವುದಾಗಿ ಹೇಳಿ ಪರಾರಿಯಾಗಿದ್ದ. ಈ ಬಗ್ಗೆ ಫೋಟೋ ಸ್ಟುಡಿಯೋ ಮಾಲೀಕ ಚೇತನ್ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದ. ದೂರಿನನ್ವಯ ಆರೋಪಿಯನ್ನು ಬಂಧಿಸಿ, 3.65 ಲಕ್ಷ ಮೌಲ್ಯದ ವಿವಿಧ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಮಾರುತ್ತಿದ್ದವರು ಅರೆಸ್ಟ್!: ದ್ವಿಚಕ್ರ ವಾಹನದಲ್ಲಿಟ್ಟುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಜೆ.ಜೆ.ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮನ್ಸೂರ್ ಹಾಗೂ ಅಲಿಬಾ ಬಂಧಿತರು. ಬಂಧಿತ ಮನ್ಸೂರ್ ನೀಡಿದ ಮಾಹಿತಿ ಮೇರೆಗೆ ಅಲಿಬಾ ಎಂಬಾತನ ಬಂಧನವಾಗಿದೆ. ಬಂಧಿತರಿಂದ 32 ಕೆ.ಜಿ 40 ಗ್ರಾಂ ಗಾಂಜಾ, 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ನೆಲಮಂಗಲದಲ್ಲಿ ಚಿನ್ನಾಭರಣಗಳು ಕಳವು: ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ಮನೆ ಕಿಟಕಿ ರಾಡ್ ಮುರಿದು ಕಳ್ಳತನ ನಡೆಸಿದ್ದಾರೆ. ನಾರಯಣಪ್ಪ ಅವರಿಗೆ ಸೇರಿದ ಮನೆಯಲ್ಲಿ ಈ ಕೃತ್ಯ ನಡೆದಿದ್ದು, 2 ಲಕ್ಷ ಬೆಲೆಬಾಳುವ ಚಿನ್ನಾಭರಣಗಳು ಕಳುವಾಗಿದೆ. ತುಮಕೂರಿನ ಸಂಬಂಧಿ ಮನೆಗೆ ತೆರಳಿ ವಾಪಸ್ ಮನೆಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

Health Tips: ಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿ

ಉಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡಿದ ಭಾರತೀಯ ವಿದ್ಯಾರ್ಥಿಗಳ ಭವಿಷ್ಯವೇನು? ರಾಜೀವ್ ಗಾಂಧಿ ಆರೋಗ್ಯ ವಿವಿ ವಿಶ್ರಾಂತ ಕುಲಪತಿ ನೀಡಿದ ಸಲಹೆ ಇಲ್ಲಿದೆ