Health Tips: ಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿ

ಸಾಮಾನ್ಯವಾಗಿ ಬೇಸಿಗೆಯ ನಂತರ ಮಳೆಗಾಲದ ಆರಂಭದ ದಿನಗಳಲ್ಲಿ ಬಿಡುವ ನೀಲಿ ಶಂಖ ಪುಷ್ಪ ಶಿವನಿಗೂ ಅತ್ಯಂತ ಪ್ರಿಯ. ಅದೇ ರೀತಿ ಆರೋಗ್ಯ ವೃದ್ಧಿಗೂ ಅಷ್ಟೇ ಸಹಕಾರಿ.

Health Tips: ಆರೋಗ್ಯ ವೃದ್ಧಿಸುವ ನೀಲಿ ಶಂಖಪುಷ್ಪ: ಇಲ್ಲಿದೆ ಉಪಯುಕ್ತ ಮಾಹಿತಿ
ನೀಲಿ ಶಂಖಪುಷ್ಪ
Follow us
TV9 Web
| Updated By: Pavitra Bhat Jigalemane

Updated on: Mar 06, 2022 | 12:21 PM

ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಆದರೆ ನಮ್ಮ ಮನೆಯಲ್ಲಿ ಇರುವ ಗಿಡಗಳಿಂದಲೇ ಹಲವಾರು ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಆಯುರ್ವೇದದಲ್ಲಿ ಬಹು ಮಹತ್ವ ಪಡೆದ ಹಲವು ಗಿಡಮೂಲಿಕೆಗಳು ನಮ್ಮ ಸುತ್ತಮುತ್ತಲಿನಲ್ಲಿಯೇ ಇದ್ದರೂ ನಮ್ಮ ಗಮನಕ್ಕೆ ಬಾರದೆ ಇದ್ದುಬಿಡುತ್ತವೆ. ಅಂತಹವುಗಳಲ್ಲಿ ನೀಲಿಶಂಖಪುಷ್ಪ (Blue Conch Flower)  ಕೂಡ ಒಂದು.  ಸಾಮಾನ್ಯವಾಗಿ ಬೇಸಿಗೆಯ ನಂತರ ಮಳೆಗಾಲದ ಆರಂಭದ ದಿನಗಳಲ್ಲಿ ಬಿಡುವ ಈ ಹೂವು ಶಿವನಿಗೂ ಅತ್ಯಂತ ಪ್ರಿಯ. ಅದೇ ರೀತಿ ಆರೋಗ್ಯ ವೃದ್ಧಿಗೂ ಅಷ್ಟೇ ಸಹಕಾರಿ,. ಇದೇ ಕಾರಣದಿಂದಲೇ ಅನಾದಿ ಕಾಲದಿಂದಲೂ ನೀಲಿ ಶಂಖಪುಷ್ಟದ ಬಳಕೆಯಿದೆ. ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯಲ್ಪಡುವ ಈ ಹೂವು ಶಿವನ ಪೂಜೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಈ ನೀಲಿ ಶಂಖಪುಷ್ಟ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಶಂಖಪುಷ್ಪದ ಹೂವಿನ ಪಕಳೆಗಳನ್ನು ಒಣಗಿಸಿ ಟೀಯನ್ನು ಕೂಡ ಮಾಡಿ ಸೇವಿಸುತ್ತಾರೆ. ನೀಲಿಶಂಖ ಪುಷ್ಟ ಯಾವೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನುವ ಮಾಹಿತಿ ಇಲ್ಲಿದೆ.

  1. ಈ ಹೂವಿನ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಏಕಾಗ್ರತೆಗೆ ಸಹಾಯ ಮಾಡುತ್ತದೆ ಮತ್ತು ಮೆದುಳನ್ನು ಶಾಂತಗೊಳಿಸುತ್ತದೆ. ಪರೀಕ್ಷೆಯ ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಇದು ಪ್ರಯೋಜನಕಾರಿಯಾಗಿದೆ.
  2.  

    ನೀಲಿಶಂಖಪುಷ್ಪ ದೀರ್ಘಕಾಲ ಕೆಲಸ ಮಾಡಿ ಉಂಟಾದ ಮಾನಸಿಕ ಆಯಾಸವನ್ನು ಕಡಿಮೆ ಮಾಡುತ್ತದೆ. ಜತೆಗೆ ಒತ್ತಡವನ್ನು ನಿವಾರಿಸುತ್ತದೆ

  3.  

    ಖಿನ್ನತೆಯಿರುವ ಜನರು ತಮ್ಮ ದಿನಚರಿಯಲ್ಲಿ ನೀಲಿಶಂಖಪುಷ್ಪವನ್ನು ಬಳಕೆ ಮಾಡುವುದು ಒಳಿತು. ಏಕೆಂದರೆ ಇದು ಮೆದುಳಿನ ರಾಸಾಯನಿಕಗಳಾದ ನ್ಯೂರೋಟ್ರಾನ್ಸ್‌ಮಿಟರ್‌ಗಳು ಮತ್ತು ಡೋಪಮೈನ್ನ ಸ್ರವಿಸುವಿಕೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಜತೆಗೆ ಇದು ಸಿರೊಟೋನಿನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆಆತಂಕದ ವಿವಿಧ ಲಕ್ಷಣಗಳಾದ, ಚಡಪಡಿಕೆ, ಅಸ್ವಸ್ಥತೆ, ತಣ್ಣನೆಯ ಕೈಗಳು ಮತ್ತು ಪಾದಗಳನ್ನು ರಕ್ಷಿಸಿ ವ್ಯಕ್ತಿಯನ್ನು ಮಾನಸಿಕವಾಗಿ ಬಲಗೊಳಿಸುತ್ತದೆ.

  4.  

    ಈ ಹೂವುಗಳಲ್ಲಿನ ಎಥೋಲಿಕ್ ಸಾರವು ಅಪಾಯ ತರುವ ಕೊಬ್ಬಿನಾಮ್ಲಗಳ ಮಟ್ಟವನ್ನು ಕಡಿಮೆ ಮಾಡುತ್ತದೆ, ಇದರಿಂದ ಹೃದಯಾಘಾತ, ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

  5.  

    ಜೀರ್ಣ ಶಕ್ತಿಯನ್ನು ಉತ್ತಮಗೊಳಿಸಿ, ಹಸಿವು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಆಯುರ್ವೇದದಲ್ಲಿ ನೀಲಿ ಶಂಖಪುಷ್ಪವನ್ನು  ಹೆಚ್ಚು ಬಳಕೆ ಮಾಡುತ್ತಾರೆ

  6.  

    ನೀಲಿ ಶಂಖಪುಷ್ಪ ಹೂವುಗಳು ಮೂತ್ರಕೋಶದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗಿದೆ. ಅಲ್ಲದೆ  ವೀರ್ಯ ದುರ್ಬಲತೆ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎನ್ನುತ್ತಾರೆ ತಜ್ಞರು

  7.  

    ದೇಹದ ಅತಿಯಾದ ತೂಕ ಇಳಿಕೆಯಲ್ಲಿಯೂ ನೀಲಿ ಶಂಖಪುಷ್ಪದ ಹೂವುಗಳನ್ನು ಬಳಸಲಾಗುತ್ತದೆ. ಈ ಹೂವುಗಳ ಎಸಳುಗಳನ್ನು ಟೀ ಯಲ್ಲಿ ಬೆರೆಸಿ ಸೇವಿಸಿದರೆ ದೇರಹದ ತೂಕ ಕಡಿಮೆಯಾಗುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:

Obesity: ದೇಹದಲ್ಲಿನ ಬೊಜ್ಜು ಕಡಿಮೆ ಮಾಡಿಕೊಳ್ಳಲು ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ