ರಾಮನಗರ: ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ದೇಗುಲದಲ್ಲಿದ್ದ ಪವಾಡ ಬಸವಪ್ಪ ನಿಧನ
ಗೌಡಗೆರೆ ಗ್ರಾಮದ ಪವಾಡ ಬಸವಪ್ಪ ನಿಧನ ಹೊಂದಿದ್ದಾನೆ. ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಇದ್ದ ಬಸವಪ್ಪ, ಸುಮಾರು ಇಪ್ಪತ್ತು ವರ್ಷಗಳಿಂದ ಭಕ್ತರ ಕೋರಿಕೆ, ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬಸವಪ್ಪನ ಆಶೀರ್ವಾದ ಪಡೆಯಲು ಭಕ್ತರು ಬರುತ್ತಿದ್ದರು.
ರಾಮನಗರ: ಇಲ್ಲಿನ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಚಾಮುಂಡೇಶ್ವರಿ ದೇಗುಲದಲ್ಲಿದ್ದ ಪವಾಡ ಬಸವಪ್ಪ ಸಾವನ್ನಪ್ಪಿದ್ದಾನೆ. ದೇಗುಲದ ಆವರಣದಲ್ಲೇ ಪವಾಡ ಬಸವಪ್ಪ ಅಂತ್ಯಸಂಸ್ಕಾರ ಮಾಡಲಾಗಿದೆ. ಗೌಡಗೆರೆ ಗ್ರಾಮದ ಪವಾಡ ಬಸವಪ್ಪ ನಿಧನ ಹೊಂದಿದ್ದಾನೆ. ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಇದ್ದ ಬಸವಪ್ಪ, ಸುಮಾರು ಇಪ್ಪತ್ತು ವರ್ಷಗಳಿಂದ ಭಕ್ತರ ಕೋರಿಕೆ, ಕಷ್ಟಗಳನ್ನು ನಿವಾರಣೆ ಮಾಡುತ್ತಿದ್ದ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬಸವಪ್ಪನ ಆಶೀರ್ವಾದ ಪಡೆಯಲು ಭಕ್ತರು ಬರುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಪ್ಪ, ಇಂದು ಬೆಳಗಿನ ಜಾವ ಸಾವನ್ನಪ್ಪಿದ್ದಾನೆ. ಕರ್ನಾಟಕ ರಾಜ್ಯದಲ್ಲಿಯೇ ಅತೀ ಎತ್ತರದ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪಿಸಿರುವ ಸ್ಥಳ ಎಂದು ಗೌಡಗೆರೆ ಹೆಸರುವಾಸಿಯಾಗಿದೆ. ಇದೀಗ, ದೇವಾಲಯದ ಧರ್ಮದರ್ಶಿ ಮಲ್ಲೇಶ್ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸುವುದಾಗಿ ತೀರ್ಮಾನಿಸಲಾಗಿದೆ. ದೇವಾಲಯದ ಆವರಣದಲ್ಲೇ ಪವಾಡ ಬಸವಪ್ಪನ ಅಂತ್ಯ ಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ: ರಾಮನಗರ: ಮಾವು ಬೆಳೆಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಒತ್ತಾಯ
ಇದನ್ನೂ ಓದಿ: ಉಕ್ರೇನ್ನಲ್ಲಿ ಬಲಿಯಾದ ನವೀನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಿಎಂ ಬೊಮ್ಮಾಯಿ