ಉಕ್ರೇನ್​ನಲ್ಲಿ ಬಲಿಯಾದ ನವೀನ್​ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಿಎಂ ಬೊಮ್ಮಾಯಿ

ಉಕ್ರೇನ್​ನಲ್ಲಿ ಬಲಿಯಾದ ನವೀನ್​ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್​ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜತೆಗೆ ನವೀನ್​ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್​ ನೀಡಿದ್ದಾರೆ.

TV9kannada Web Team

| Edited By: preethi shettigar

Mar 05, 2022 | 7:46 PM


ಹಾವೇರಿ: ಉಕ್ರೇನ್​ನಲ್ಲಿ ಮೃತಪಟ್ಟ ಹಾವೇರಿ ಮೂಲದ ನವೀನ್(Naveen) ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್​ ನಿವಾಸಕ್ಕೆ ಭೇಟಿ ನೀಡಿದ ಸಿಎಂ, ನವೀನ್​ ಕುಟುಂಬಸ್ಥರಿಗೆ(Family) ಸಾಂತ್ವನ ಹೇಳಿದ್ದಾರೆ. ಜತೆಗೆ ನವೀನ್​ ತಂದೆಗೆ 25 ಲಕ್ಷ ರೂ. ಪರಿಹಾರ ಚೆಕ್​ ನೀಡಿದ್ದಾರೆ. ಬಳಿಕ ಸಿಎಂ ಬೊಮ್ಮಾಯಿ(Basavaraj Bommai), ನವೀನ್​ ಭಾವಚಿತ್ರಕ್ಕೆ ಹೂವು ಹಾಕಿದ್ದಾರೆ. ಈ ವೇಳೆ ಸಿಎಂ ಜೊತೆ ಕೃಷಿ ಸಚಿವ‌ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಜನೆಗೆ ತೆರಳಿದ್ದ ನವೀನಗೆ ಈ ರೀತಿ ಆಗುತ್ತೆ ಅಂತಾ ಯಾರೂ ಊಹಿಸಿರಲಿಲ್ಲ. ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ. ನವೀನ್​ ಪಾರ್ಥಿವ ಶರೀರ ತಾಯ್ನಾಡಿಗೆ ತರುವ ಪ್ರಯತ್ನವಾಗುತ್ತಿದೆ. ಈ ಬಗ್ಗೆ ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್​ನಲ್ಲಿ ಬಾಂಬಿಂಗ್​ ಆಗ್ತಿದೆ ಹೀಗಾಗಿ ತರಲು ಆಗುತ್ತಿಲ್ಲ. ಆದಷ್ಟು ಬೇಗ ಪಾರ್ಥಿವ ಶರೀರ ತರಲು ಪ್ರಯತ್ನಿಸುತ್ತೇವೆ ಎಂದು ಚಳಗೇರಿಯಲ್ಲಿ ಹೇಳಿಕೆ ನೀಡಿದ್ದಾರೆ.

ಮಗನ ಪಾರ್ಥೀವ ಶರೀರ ಬರುವುದಾಗಿ ಸಿಎಂ ಹೇಳಿದ್ದಾರೆ: ನವೀನ ತಂದೆ ಶೇಖರಗೌಡ

ಪಾರ್ಥೀವ ಶರೀರವನ್ನು ಶೀಘ್ರದಲ್ಲಿ ತರುವ ಪ್ರಯತ್ನ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಮಗನ ಪಾರ್ಥೀವ ಶರೀರ ಬರುವುದಾಗಿ ಹೇಳಿದ್ದಾರೆ. ಉಕ್ರೇನ್​ನಲ್ಲಿರೋ‌‌ ಮಕ್ಕಳನ್ನ ಕರೆಸುವಂತೆ ಹೇಳಿದ್ದೇವೆ ಎಂದು ಮೃತ ನವೀನ ತಂದೆ ಶೇಖರಗೌಡ ಹೇಳಿಕೆ ನೀಡಿದ್ದಾರೆ.

ಮಗನ ಪಾರ್ಥೀವ ಶರೀರ ಇದೆ ಎಂಬುವುದು ಖಚಿತ ಇರಲಿಲ್ಲ: ನವೀನ ತಾಯಿ ವಿಜಯಲಕ್ಷ್ಮಿ

ಮಗನ ಪಾರ್ಥೀವ ಶರೀರ ಇದೆ ಎಂಬುವುದು ಖಚಿತ ಇರಲಿಲ್ಲ. ಸಿಎಂ ಹೇಳಿದ ಮೇಲೆ ಭರವಸೆ ಬಂತು. ಪಾರ್ಥೀವ ಶರೀರ ಬರುತ್ತೆ ಅನ್ನೋ ವಿಶ್ವಾಸವಿದೆ. ನವೀನ ಕೊಹಿನೂರ ವಜ್ರಕ್ಕೆ ಸಮನಾಗಿದ್ದ. ಉಕ್ರೇನ್​ನಲ್ಲಿ ಸಿಲುಕಿರೋ‌ ಮಕ್ಕಳು ಸುರಕ್ಷಿತವಾಗಿ ಬಂದ ಮೇಲೆ ಅವರಲ್ಲಿ ನನ್ನ ಮಗನನ್ನ ಕಾಣುತ್ತೇನೆ. ಮಾತನಾಡುತ್ತಲೆ ಮಗನನ್ನು ನೆನೆದು ಕಣ್ಣೀರಾದ ನವೀನ ತಾಯಿ ವಿಜಯಲಕ್ಷ್ಮಿ

ನವೀನ ಪಾರ್ಥೀವ ಶರೀರವನ್ನ ಸುರಕ್ಷಿತವಾಗಿ ಇಡಲಾಗಿದೆ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

ಮೇಲ್ವರ್ಗದಲ್ಲಿ ಹುಟ್ಟಿದ್ದೆ ತಪ್ಪಾ ಅಂತಾ ನವೀನ ತಾಯಿ ಕೇಳಿದರು. ಪ್ರತಿಭಾವಂತ ಮಕ್ಕಳು ಏನು ಆಗಬೇಕು ಅಂದುಕೊಂಡಿದ್ದಾರೋ ಅದು ಆಗುತ್ತಿಲ್ಲ. ಪ್ರತಿಭೆಗೆ ಪ್ರೋತ್ಸಾಹ ಕೊಡಬೇಕು ಅನ್ನೋದು ಪ್ರತಿಯೊಬ್ಬ ತಾಯಿಯ ಕನಸು. ಒಬ್ಬ ತಾಯಿಯ ನೋವು ಮತ್ತೊಬ್ಬ ತಾಯಿಗೆ ಮಾತ್ರ ಗೊತ್ತಾಗುತ್ತದೆ. ನವೀನ ಪಾರ್ಥೀವ ಶರೀರವನ್ನ ಸುರಕ್ಷಿತವಾಗಿ ಇಡಲಾಗಿದೆ. ಯುದ್ಧ ನಿಂತ ಮೇಲೆ ಪಾರ್ಥೀವ ಶರೀರ ತರುವ ಪ್ರಯತ್ನ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಅಲ್ಲಿರುವ ಎಲ್ಲ ಮಕ್ಕಳು ವಾಪಸ್ ಬರಬೇಕು. ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗುವ ವಾತಾವರಣ ಆಗಬಾರದು. ಒನ್ ನೇಶನ್ ಒನ್ ರಿಸರ್ವೇಶನ್ ಆಗಬೇಕು. ಒನ್ ನೇಶನ್ ಒನ್ ಲಾ ಆಗಬೇಕು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸರಕಾರ ಎಲ್ಲ ರೀತಿಯಿಂದ ಈ ವಿಚಾರಗಳನ್ನು ಗಮನಿಸುತ್ತಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ:
ಉಕ್ರೇನ್​​ನಿಂದ ಬಂದಿರುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎನ್​ಎಂಸಿಯಿಂದ ಗುಡ್​ನ್ಯೂಸ್​; ಇಂಟರ್ನ್​ಶಿಪ್​ ಮಾಡಲು ಅವಕಾಶ

Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ


Follow us on

Related Stories

Most Read Stories

Click on your DTH Provider to Add TV9 Kannada