Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ

ರಷ್ಯಾ ಇಂದು ಉಕ್ರೇನ್‌ನಲ್ಲಿ ಭಾಗಶಃ ಕದನ ವಿರಾಮವನ್ನು ಘೋಷಿಸಿದ್ದು, ಉಕ್ರೇನ್‌ನ ನಗರಗಳಾದ ಮರಿಪೋಲ್ ಮತ್ತು ವೊಲ್ನೋವಾಖಾದಿಂದ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ.

Russia-Ukraine War: ರಷ್ಯಾ ವಶಕ್ಕೆ ಸಿಲುಕಿ ನರಕವಾಗಿದ್ದ ಉಕ್ರೇನ್​ನ ಬಂದರು ನಗರಿ ಮರಿಪೊಲ್ ಜನರೀಗ ಕೊಂಚ ನಿರಾಳ
ಪ್ರಾತಿನಿಧಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on:Mar 05, 2022 | 1:50 PM

ಕೀವ್​: ಉಕ್ರೇನ್​ನಲ್ಲಿ (Ukraine) ಕದನ ವಿರಾಮ ಘೋಷಣೆಯ ಮೂಲಕ ರಷ್ಯಾ ಅತ್ಯಂತ ಜಾಣ ರಾಜತಾಂತ್ರಿಕ ನಡೆಯಿಟ್ಟಿದೆ. ರಷ್ಯಾ (Russia) ಪಡೆಗಳು ಹಲವು ದಿನಗಳಿಂದ ಬಂದರು ನಗರಿ ಮರಿಪೊಲ್​ಗೆ ದಿಗ್ಬಂಧನ ಹಾಕಿ, ಉಸಿರುಗಟ್ಟಿಸಿದ್ದವು. ಅಲ್ಲಿನ ನಾಗರಿಕರಿಗೆ ಅಲ್ಲಿಂದ ತಪ್ಪಿಸಿಕೊಂಡು ಹೋದರೆ ಸಾಕು ಎನ್ನುವಂತಾಗಿತ್ತು. ಇದೀಗ ತನ್ನ ಪಟ್ಟು ಬಿಗಿಗೊಳಿಸಿರುವ ರಷ್ಯಾ, ಆಯಕಟ್ಟಿನ ಸ್ಥಳಗಳನ್ನು ವಶಪಡಿಸಿಕೊಂಡ ನಂತರ ಏಕಪಕ್ಷೀಯವಾಗಿ ಕದನ ವಿರಾಮ ಘೋಷಿಸಿ, ನಾಗರಿಕರು ಹೊರಗೆ ನಡೆಯಲು ಸುರಕ್ಷಿತ ಕಾರಿಡಾರ್ ಕಲ್ಪಿಸಿಕೊಡುವ ಭರವಸೆ ನೀಡಿದೆ.

ಮರಿಪೋಲ್ ನಗರಕ್ಕೆ ಹಲವು ದಿನಗಳಿಂದ ನೀರು, ಆಹಾರ ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ಚಳಿಯನ್ನು ತಡೆಯಲು ಬೇಕಿದ್ದ ಹೀಟಿಂಗ್ ಉಪಕರಣಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಸಾರ್ವಜನಿಕ ಸಾರಿಗೆಯೂ ರಷ್ಯಾ ಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದವು. ಜನರು ಅಲ್ಲಿ ಬದುಕಲು ಸಾಧ್ಯವೇ ಇಲ್ಲದ ವಾತಾವರಣ ನಿರ್ಮಿಸಿದ ನಂತರ ಸುರಕ್ಷಿತ ಕಾರಿಡಾರ್ ಘೋಷಿಸಿ, ಅವರಿಗೆ ಹೊರಗೆ ಹೋಗಲು ರಷ್ಯಾ ಅವಕಾಶ ನೀಡಿದೆ.

ಮಾಸ್ಕೋ ಮತ್ತು ಕೀವ್ ವಾರಾಂತ್ಯದಲ್ಲಿ ಹೊಸ ಮಾತುಕತೆಗಳನ್ನು ನಡೆಸುವ ಗುರಿಯನ್ನು ಹೊಂದಿರುವುದರಿಂದ ಆಕ್ರಮಣಕಾರಿ ರಷ್ಯಾದ ಪಡೆಗಳು ಆಯಕಟ್ಟಿನ ಉಕ್ರೇನಿಯನ್ ಬಂದರು ನಗರವಾದ ಮರಿಪೋಲ್ ಅನ್ನು ನಿರ್ಬಂಧಿಸಿವೆ ಎಂದು ಮರಿಪೋಲ್​ನ ಮೇಯರ್ ಇಂದು ಘೋಷಿಸಿದ್ದಾರೆ. ರಷ್ಯಾದ ಪಡೆಗಳು ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಇತರ ದೊಡ್ಡ ನಗರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು.

ಉಕ್ರೇನಿಯನ್ ನಗರಗಳಾದ ಮರಿಪೋಲ್ ಮತ್ತು ವೊಲ್ನೋವಾಖಾದಿಂದ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಲು ರಷ್ಯಾದ ಪಡೆಗಳು ಗುಂಡಿನ ದಾಳಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ. ರಷ್ಯಾ ಇಂದು ಉಕ್ರೇನ್‌ನಲ್ಲಿ ಭಾಗಶಃ ಕದನ ವಿರಾಮವನ್ನು ಘೋಷಿಸಿದ್ದು, ಉಕ್ರೇನ್‌ನ ನಗರಗಳಾದ ಮರಿಪೋಲ್ ಮತ್ತು ವೊಲ್ನೋವಾಖಾದಿಂದ ಮಾನವೀಯ ಕಾರಿಡಾರ್‌ಗಳನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.

4,50,000 ಜನಸಂಖ್ಯೆಯ ಮರಿಪೊಲ್ ನಗರ ರಷ್ಯಾ ತೆಕ್ಕೆಗೆ ಬಂದಿದೆ. ಈ ಕದನ ವಿರಾಮ ಘೋಷಣೆಯು ಈ ಗೆಲುವಿನ ಘೋಷಣೆ ಎಂದೇ ಹೇಳಲಾಗುತ್ತಿದೆ. ಇದು ಉಕ್ರೇನ್ ವಿರುದ್ಧದ ಸಮರದಲ್ಲಿ ರಷ್ಯಾ ಗಳಿಸಿದ ದೊಡ್ಡ ಗೆಲುವು ಎಂದೇ ವ್ಯಾಖ್ಯಾನಿಸಲಾಗಿದೆ. ಉಕ್ರೇನ್​ಗೆ ಇರುವ ಸಾಗರ ಸಂಪರ್ಕವನ್ನು ರಷ್ಯಾ ಇನ್ನು ಮುಂದೆ ಪರಿಣಾಮಕಾರಿಯಾಗಿ ನಿಯಂತ್ರಿಸಿ, ಅಲ್ಲಿನ ಆಡಳಿತವನ್ನು ತನಗೆ ಬೇಕಾದಂತೆ ಮಣಿಸಲು ಈ ಗೆಲುವು ಅನುವು ಮಾಡಿಕೊಟ್ಟಿದೆ.

ಇದನ್ನೂ ಓದಿ: Russia- Ukraine War: ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಸಿದ್ಧ ಎಂದ ರಷ್ಯಾ

Ukraine Crisis: ಆಪರೇಷನ್ ಗಂಗಾ; ಯುದ್ಧಪೀಡಿತ ಉಕ್ರೇನ್​ನಿಂದ 10,800 ಭಾರತೀಯರ ಸ್ಥಳಾಂತರ

Published On - 1:48 pm, Sat, 5 March 22