ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು

ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ.

ನಿರಂತರ ಹೋರಾಟ, ಅಪಾರ ಸಾವು-ನೋವು: ಕದನ ವಿರಾಮಕ್ಕೆ ಕರೆ ನೀಡಿದ ಪಂಜಶಿರ್​ ಹೋರಾಟಗಾರರು
ಪಂಜಶಿರ್​ ಹೋರಾಟಗಾರರು
Follow us
TV9 Web
| Updated By: Lakshmi Hegde

Updated on:Sep 06, 2021 | 9:36 AM

ತಾಲಿಬಾನಿಗಳಿಗೆ ಬಹುದೊಡ್ಡ ಸವಾಲಾಗಿದ್ದ ಪಂಜಶಿರ್​ ಕಣಿವೆಯಲ್ಲಿ ಹೋರಾಟ ಮುಂದುವರಿದಿದೆ. ಪಂಜಶಿರ್​ನ್ನು ತಾವು ವಶಪಡಿಸಿಕೊಂಡಿದ್ದಾಗಿ ತಾಲಿಬಾನ್​ ಪಡೆಗಳು ಹೇಳಿದ್ದರೂ, ಪಂಜಶಿರ್​ ಪ್ರತಿರೋಧಕ ಪಡೆ ಇದನ್ನು ಅಲ್ಲಗಳೆದಿದೆ. ತಾಲಿಬಾನಿಗಳು ಪಂಜಶಿರ್​ ರಸ್ತೆಯನ್ನಷ್ಟೇ ವಶಪಡಿಸಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದೆ. ಈ ಮಧ್ಯೆ ಪಂಜಶಿರ್​ ಪ್ರತಿರೋಧಕ ಪಡೆ (National Resistance Front of Afghanistan) ಕದನ ವಿರಾಮಕ್ಕೆ ಕರೆ ನೀಡಿದೆ. ಅಫ್ಘಾನಿಸ್ತಾನದಲ್ಲಿ ಈಗ ತಾಲಿಬಾನಿಗಳ ಹೊಸ ನಿಯಮಗಳು ಜಾರಿಯಾದ ಬೆನ್ನಲ್ಲೇ ಪಂಜಶಿರ್​ ಕಣಿವೆಯಲ್ಲೂ ಹೆಚ್ಚೆಚ್ಚು ಸಂಘರ್ಷಗಳು ನಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ ತಾಲಿಬಾನ್​ ಮತ್ತು ಪಂಜಶಿರ್​ ಹೋರಾಟ ಪಡೆಗಳ ನಡುವೆ ಸಿಕ್ಕಾಪಟೆ ಹೊಡೆದಾಟ, ಸಂಘರ್ಷಗಳು ನಡೆದ ಪರಿಣಾಮ ಎರಡೂ ಕಡೆಗಳಿಂದ ಸಾಕಷ್ಟು ಸಾವು-ನೋವು ಸಂಭವಿಸಿದೆ. ಈ ಮಧ್ಯೆ ಎನ್​​ಆರ್​ಎಫ್​​ಎ ಕದನ ವಿರಾಮಕ್ಕೆ ಕರೆ ನೀಡಿದೆ.  ತಾಲಿಬಾನ್​ ಕೂಡ ಒಪ್ಪಿಕೊಂಡು ಯುದ್ಧ ನಿಲ್ಲಿಸಿದೆ ಎಂದು ವರದಿಯಾಗಿದೆ. 

ಮಾತುಕತೆಗೆ ಸಿದ್ಧವೆಂದ ಅಹ್ಮದ್​ ಮಸೂದ್​ ಇನ್ನು ಪಂಜಶಿರ್​ ವ್ಯಾಲಿಯ ಹೋರಾಟ ಮಾಡುತ್ತಿರುವ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ ಸಂಘಟನೆ ನಾಯಕ ಅಹ್ಮದ್​ ಮಸೂದ್​, ತಾವು ಶಾಂತಿ ಮಾತುಕತೆಗೆ ಸಿದ್ಧ ಎಂದು ಹೇಳಿದ್ದಾರೆ. ಪ್ರಸ್ತುತ ಉಂಟಾಗಿರುವ ಸಮಸ್ಯೆಯನ್ನು, ದ್ವೇಷದ ಸ್ಥಿತಿಯನ್ನು ಅಂತ್ಯಗೊಳಿಸಲು ನಾವು ಒಪ್ಪುತ್ತೇವೆ. ಅದಕ್ಕೆ ತಾಲಿಬಾನ್​ ಕೂಡ ಒಪ್ಪಬೇಕು..ಮುಸ್ಲಿಂ ಧಾರ್ಮಿಕ ಗುರುಗಳ ಕರೆಗೆ ಅವರು ಸ್ಪಂದಿಸಿ, ದಾಳಿಯನ್ನು ನಿಲ್ಲಿಸಬೇಕು ಎಂದೂ ಮಸೂದ್​ ಹೇಳಿದ್ದಾರೆ.

ತಾಲಿಬಾನಿಗಳು ಪಂಜಶಿರ್​ ಮತ್ತು ಅಂದರಾಬ್​​ನಲ್ಲಿ ತಮ್ಮ ದಾಳಿ ಹಾಗೂ ಸೇನಾ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು. ಹಾಗೊಮ್ಮೆ ಮಾಡಿದರೆ ನಾವೂ ಕೂಡ ನಮ್ಮ ಹೋರಾಟವನ್ನು ಬಿಡುತ್ತೇವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ತಾಲಿಬಾನಿಗಳು ಬರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಗಳನ್ನು ಸೂರ್ಯ-ಜ್ಯೋತಿಕಾ ದಂಪತಿಯ ಕೈಗೆ ಒಪ್ಪಿಸಿದ ಸ್ಟಾರ್​ ನಿರ್ದೇಶಕ; ಏನಾಗಲಿದೆ ಅದಿತಿ ಶಂಕರ್​ ಭವಿಷ್ಯ?

ಐದು ರೂಪಾಯಿ ನಾಣ್ಯ ನುಂಗಿದ್ದ 4 ವರ್ಷದ ಬಾಲಕಿ ಸಾವು

Published On - 9:09 am, Mon, 6 September 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ