ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ

ಅಫ್ಘಾನಿಸ್ತಾನ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ವಿಶ್ವಸಂಸ್ಥೆ ನೆರವಾಗಲಿದೆ ಎಂದು ಬಾರದಾರ್ ಅವರಿಗೆ ಗ್ರಿಫ್ತಾಸ್ ಅವರಿಗೆ ಭರವಸೆ ನೀಡಿದರು ಎಂದು ನಯೀಂ ಹೇಳಿದ್ದಾರೆ.

ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ: ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫಿತ್ಸ್​-ಮುಲ್ಲಾ ಬಾರದಾರ್ ಭೇಟಿ
ವಿಶ್ವಸಂಸ್ಥೆಯ ನಿಯೋಗದೊಂದಿಗೆ ತಾಲಿಬಾನ್ ನಾಯಕರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 05, 2021 | 10:44 PM

ಕಾಬೂಲ್: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫ್ತಾಸ್ ಅವರನ್ನು ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಭಾರದಾರ್ ಭಾನುವಾರ ಭೇಟಿಯಾಗಿದ್ದಾರೆ ಎಂದು ತಾಲಿಬಾನ್ ವಕ್ತಾರ ಮೊಹಮದ್ ನಯೀಂ ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ವಿಶ್ವಸಂಸ್ಥೆ ನೆರವಾಗಲಿದೆ ಎಂದುಬಾರದಾರ್ ಅವರಿಗೆ ಗ್ರಿಫ್ತಾಸ್ ಭರವಸೆ ನೀಡಿದರು ಎಂದು ನಯೀಂ ಹೇಳಿದ್ದಾರೆ.

ತಾಲಿಬಾನ್ ಆಡಳಿತದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಅಫ್ಘಾನಿಸ್ತಾನದ ನಾಗರಿಕರ ಬಗ್ಗೆ ಗ್ರಿಫ್ತಾಸ್ ಈ ಹಿಂದೆ ಆತಂಕ ವ್ಯಕ್ತಪಡಿಸಿದ್ದರು. ಸಾವಿರಾರು ಜನರು ಅಫ್ಘಾನಿಸ್ತಾನದಲ್ಲಿ ಆಂತರಿಕವಾಗಿ ನಿರಾಶ್ರಿತರಾಗಿ ಅಲೆಯುತ್ತಿದ್ದಾರೆ ಎಂದು ಅವರು ಹೇಳಿದ್ದರು.

ಇನ್ನೂ ಸ್ಥಾಪನೆಯಾಗಿಲ್ಲ ಸರ್ಕಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಂಡು 20 ದಿನಗಳು ಕಳೆದರೂ ತಾಲಿಬಾನ್ ಹೋರಾಟಗಾರರಿಗೆ ಈವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನ ವಶಪಡಿಸಿಕೊಳ್ಳುವಲ್ಲಿ ತಾಲಿಬಾನಿಗಳ ಬೆನ್ನಿಗೆ ನಿಂತಿದ್ದ ಪಾಕಿಸ್ತಾನದ ಪ್ರಭಾವಿ ಹಖ್ಖಾನಿ ನೆಟ್​ವರ್ಕ್​ ಜೊತೆಗೆ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ತಾಲಿಬಾನ್​ಗೆ ಯಶಸ್ಸು ಸಿಗುತ್ತಿಲ್ಲ. ಈ ನಡುವೆ ಎರಡೂ ಗುಂಪುಗಳ ನಡುವೆ ಈಚೆಗೆ ಸಂಘರ್ಷ ನಡೆದಿದ್ದು, ತಾಲಿಬಾನ್​ನ ಸುಪ್ರೀಂ ಕಮಾಂಡರ್​ ಮುಲ್ಲಾ ಅಬ್ದುಲ್ ಘನಿ ಬಾರದಾರ್​ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

(Taliban Leader Mullah Baradar meets UN secretary general Martin Griffiths)

Published On - 10:42 pm, Sun, 5 September 21