‘ನಾನು ತಾಲಿಬಾನಿಗಳಿಗೆ ಶರಣಾಗುವುದಿಲ್ಲ..ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಗೆ ಎರಡು ಬಾರಿ ಗುಂಡು ಹೊಡಿ‘

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರುವಾಗುತ್ತಿದ್ದಂತೆ ದೇಶದ ಪ್ರಮುಖ ನಾಯಕರೆಲ್ಲ ದೇಶ ತೊರೆದು ಹೋಗಿದ್ದಾರೆ. ಇಲ್ಲಿನ ಜನರಿಗೆ ಅವರ ಅಗತ್ಯ ಇತ್ತು ಎಂದು ಅಮರುಲ್ಲಾ ಸಾಲೇಹ್​ ಹೇಳಿದ್ದಾರೆ.

‘ನಾನು ತಾಲಿಬಾನಿಗಳಿಗೆ ಶರಣಾಗುವುದಿಲ್ಲ..ಅಂಥ ಪರಿಸ್ಥಿತಿ ಬಂದರೆ ನನ್ನ ತಲೆಗೆ ಎರಡು ಬಾರಿ ಗುಂಡು ಹೊಡಿ‘
ಅಮ್ರುಲ್ಲಾ ಸಾಲೇಹ್​
Follow us
TV9 Web
| Updated By: Lakshmi Hegde

Updated on: Sep 05, 2021 | 5:55 PM

ತಮ್ಮನ್ನು ತಾವು ಅಫ್ಘಾನಿಸ್ತಾನದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿರುವ, ಸದ್ಯ ಪಂಜಶಿರ್​ ಪ್ರಾಂತ್ಯದ ಹೋರಾಟಗಾರರೊಂದಿಗೆ ಸೇರಿರುವ ಅಮರುಲ್ಲಾ ಸಾಲೇಹ್, ಕಾಬೂಲ್​ ಹೇಗೆ ತಾಲಿಬಾನ್​ ಉಗ್ರರ ಕೈವಶವಾಯಿತು, ಅಂಥ ಕಷ್ಟಕರದ ಸಂದರ್ಭದಲ್ಲಿ ಅಫ್ಘಾನಿಸ್ತಾನದ ನಾಯಕತ್ವ ಜನರನ್ನು ಹೇಗೆ ಕೈಬಿಟ್ಟಿತು ಎಂಬ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ. 48 ವರ್ಷದ ಅವರು, ತಾವು ತಾಲಿಬಾನಿಗಳಿಗೆ ಹೆದರುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಶುರುವಾಗುತ್ತಿದ್ದಂತೆ ದೇಶದ ಪ್ರಮುಖ ನಾಯಕರೆಲ್ಲ ದೇಶ ತೊರೆದು ಹೋಗಿದ್ದಾರೆ. ಇಲ್ಲಿನ ಜನರಿಗೆ ಅವರ ಅಗತ್ಯ ಇತ್ತು. ಆ ಸಮಯದಲ್ಲೇ ಅವರನ್ನು ಬಿಟ್ಟು ಹೋಗಿದ್ದಾರೆ. ಹೀಗೆ ದೇಶ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗ ದೇಶದಿಂದ ಪಲಾಯನ ಮಾಡಿದವರು ಈ ಮಣ್ಣಿಗೆ ದ್ರೋಹ ಬಗೆದಿದ್ದಾರೆ ಎಂದು ಭಾವಿಸುತ್ತೇನೆ ಎಂದು ಸಾಲೇಹ್​ ಹೇಳಿದ್ದಾಗಿ ಯುಕೆ ಪತ್ರಿಕೆ ಡೇಲಿ ಮೇಲ್​ ವರದಿ ಮಾಡಿದೆ. ಹಾಗೇ, ಕಳೆದ ತಿಂಗಳು ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು, ಕಾಬೂಲ್​ಗೆ ಕಾಲಿಟ್ಟ ತಾಲಿಬಾನಿಗಳನ್ನು ಅಫ್ಘಾನಿಸ್ತಾನದ ಆಡಳಿತ ಎದುರಿಸುವುದು ಬಿಟ್ಟು, ಪಲಾಯನ ಮಾಡಿದ್ದನ್ನು ಕೂ ಡ ಅವರು ವಿವರಿಸಿದ್ದಾರೆ.

‘ಕಾಬೂಲ್​ ತಾಲಿಬಾನಿಗಳ ವಶ ಆಗುವುದಕ್ಕೂ ಮುನ್ನಾದಿನ ರಾತ್ರಿ ಪೊಲೀಸ್​ ಮುಖ್ಯಸ್ಥರು ನನಗೆ ಕರೆ ಮಾಡಿ, ಜೈಲಿನಲ್ಲಿ ದಂಗೆ ಎದ್ದಿದೆ. ತಾಲಿಬಾನಿ ಕೈದಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ನಾನು ಅಲ್ಲೇ ಒಂದು  ಆ್ಯಂಟಿ-ತಾಲಿಬಾನಿ ಕೈದಿ ಪಡೆಯನ್ನು ರಚಿಸಿ, ಅವರ ಬಳಿ ಪ್ರತಿದಂಗೆ ಏಳುವಂತೆ ಹೇಳಿದೆ.  ನಂತರ ಜೈಲಿನಲ್ಲಿ ಗಲಾಟೆ ನಿಯಂತ್ರಣಕ್ಕೆ ಬಂತು’ ಎಂದು ಅವರು ಹೇಳಿದ್ದಾರೆ. ಹಾಗೇ, ಎಲ್ಲ ನಾಯಕರೂ ಓಡಿಹೋದರೂ ನಾನು ದಾರಿ ಹುಡುಕುತ್ತಿದ್ದರೆ. ಇದೀಗ ಪಂಜಶಿರ್​ ಕಮಾಂಡರ್ ಆಗಿರುವ ಅಹ್ಮದ್​ ಮಸೂರ್​ ತಂದೆ ನನಗೆ ಮಾರ್ಗದರ್ಶಕರಾಗಿದ್ದವರು. ಅವರು ಪ್ರತಿರೋಧಿಸುತ್ತಿರುವ ವಿಷಯ ಗೊತ್ತಾಗಿ, ನಾನು ಮಸೂರ್​ಗೆ ಕರೆ ಮಾಡಿದೆ ಎಂದು ತಿಳಿಸಿದ್ದಾರೆ.

ನನ್ನ ತಲೆಗೆ ಶೂಟ್​ ಮಾಡು ! ‘ನಾನು ಕಾಬೂಲ್​​ನ್ನು ತೊರೆದು ಹೋಗುವಾಗ ನನ್ನ ಮನೆಗೆ ಹೋದೆ. ಅಲ್ಲಿದ್ದ ನನ್ನ ಪತ್ನಿ ಮತ್ತು ಮಗಳ ಫೋಟೋಗಳನ್ನೆಲ್ಲ ನಾಶ ಮಾಡಿದೆ. ನನ್ನ ಕಂಪ್ಯೂಟರ್​, ಅಗತ್ಯ ಡಿವೈಸ್​ಗಳನ್ನೆಲ್ಲ ತೆಗೆದುಕೊಂಡು ಹೊರಟೆ. ಹೊರಡುವುದಕ್ಕೂ ಮುನ್ನ, ನನ್ನ ಬಾಡಿಗಾರ್ಡ್ ಬಳಿ, ನಾವೀಗ ಪಂಜಶಿರ್​ಗೆ ಹೋಗುತ್ತಿದ್ದೇವೆ. ಆದರೆ ಅಲ್ಲೆಲ್ಲ ತಾಲಿಬಾನ್​ ಉಗ್ರರು ಇದ್ದಾರೆ. ದಾರಿಯುದ್ದಕ್ಕೂ ನಾವು ಹೋರಾಡಬೇಕಿದೆ. ಒಟ್ಟಾಗಿ ಹೋರಾಡೋಣ. ಹಾಗೊಮ್ಮೆ ನಾನು ಗಾಯಗೊಂಡರೆ ನೀನು ನನ್ನ ತಲೆಗೆ ಇನ್ನೆರಡು ಗುಂಡು ಹೊಡೆದು ಕೊಂದು ಬಿಡು..ತಾಲಿಬಾನಿಗಳಿಗೆ ಮಾತ್ರ ನಾನು ಶರಣಾಗುವುದಿವೆಂದು ಹೇಳಿದ್ದೆ’ ಎಂದು ಸಾಲೇಹ್​ ಹೇಳಿದ್ದಾಗಿ ಡೇಲಿ ಮೇಲ್​ನಲ್ಲಿ ಉಲ್ಲೇಖವಾಗಿದೆ.  ಈ ಹಿಂದಿನ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿರುವ ಸಾಲೇಹ್​, ಈಗಲೂ ಸಹ ಪಂಜಶಿರ್​ನಲ್ಲಿಯೇ ಇದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲಿ ಎಗ್​ರೈಸ್​ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

ನಿನ್ನ ಬಳಿ ನನ್ನ ಹೃದಯವಿದೆ ಎಂದ ಕತ್ರಿನಾ ಕೈಫ್; ಫ್ಯಾನ್ಸ್ ಪ್ರತಿಕ್ರಿಯೆ ಹೇಗಿತ್ತು?

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ