AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳಿಂದ ವೀಸಾ ವಿಸ್ತರಿಸುವಂತೆ ಭಾರತ ಸರ್ಕಾರಕ್ಕೆ ಮನವಿ

ಹಲವಾರು ವರ್ಷಗಳಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ಅನೇಕ ಆಫ್ಘನ್ ವಿದ್ಯಾರ್ಥಿಗಳು ವಿವಿಧ ಕೋರ್ಸ್​ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ವರ್ಷ ಕೃಷಿ ವಿಶ್ವವಿದ್ಯಾಲಯದಲ್ಲಿ ಆಫ್ಘನ್​ನಿಂದ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ 15 ಇತ್ತು.

ಧಾರವಾಡ ಕೃಷಿ ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ಘನ್ ವಿದ್ಯಾರ್ಥಿಗಳಿಂದ ವೀಸಾ ವಿಸ್ತರಿಸುವಂತೆ ಭಾರತ ಸರ್ಕಾರಕ್ಕೆ ಮನವಿ
ಆಫ್ಘನ್ ವಿದ್ಯಾರ್ಥಿಗಳು
TV9 Web
| Updated By: sandhya thejappa|

Updated on:Sep 05, 2021 | 9:54 AM

Share

ಧಾರವಾಡ: ಆಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನ್ (Taliban) ಆಡಳಿತ ಶುರುವಾಗುತ್ತಿದೆ. ಈಗಾಗಲೇ ಬಹುತೇಕ ಪ್ರದೇಶಗಳನ್ನು ವಶಕ್ಕೆ ಪಡೆದಿರುವ ತಾನಿಬಾನಿಗಳು, ಸರಕಾರ ಆರಂಭಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಗತಿಪರರ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಿರುವ ತಾನಿಬಾನಿಗಳು ತಾವು ಬದಲಾಗಿದ್ದೇವೆಂದು ಹೇಳಿದರೂ ಅದನ್ನು ನಂಬುವುದು ಕಷ್ಟ. ಪ್ರಪಂಚದ ಉಳಿದ ದೇಶಗಳು ಅವರ ಮಾತನ್ನು ನಂಬದೇ ಇರೋದಕ್ಕೆ ಅವರ ಇತಿಹಾಸ, ಧರ್ಮಾಂಧತೆ, ಅಜಾನ ಕಾರಣ. ಆದರೆ ಇದೀಗ ಅವರ ದೇಶದವರೇ ನಂಬದ ಪರಿಸ್ಥಿತಿ ಬಂದೊದಗಿದೆ. ಭಾರತಕ್ಕೆ ವ್ಯಾಸಾಂಗ ಮಾಡಲು ಬಂದಿರುವ ಆಫ್ಘನ್ ಮೂಲದ ವಿದ್ಯಾರ್ಥಿಗಳು ಕೋರ್ಸ್ ಮುಗಿದು, ವೀಸಾ (Visa) ಅವಧಿ ಮುಗಿಯುತ್ತಾ ಬಂದರೂ ಮರಳಿ ತಮ್ಮ ದೇಶಕ್ಕೆ ಹೋಗಲು ಬಯಸುತ್ತಿಲ್ಲ. ಕಾರಣ ಅವರು ತಾಲಿಬಾನಿಗಳ ಮಾತನ್ನು ನಂಬಲು ಸಿದ್ಧರಿಲ್ಲ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿರುವ ಆಫ್ಘನ್ ಮೂಲದ ವಿದ್ಯಾರ್ಥಿಗಳು ಮರಳಿ ತಮ್ಮ ದೇಶಕ್ಕೆ ಹೋಗಲಾಗದೆ ಪರದಾಡುವಂತಾಗಿದೆ.

ಕೋರ್ಸ್ ಮುಕ್ತಾಯ, ವೀಸಾ ಅವಧಿಯೂ ಅಂತ್ಯಗೊಳ್ಳುವ ಆತಂಕ ಹಲವಾರು ವರ್ಷಗಳಿಂದ ಕೃಷಿ ವಿಶ್ವವಿದ್ಯಾಲಯದಲ್ಲಿ ಅನೇಕ ಆಫ್ಘನ್ ವಿದ್ಯಾರ್ಥಿಗಳು ವಿವಿಧ ಕೋರ್ಸ್​ಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಕಳೆದ ವರ್ಷ ಕೃಷಿ ವಿಶ್ವವಿದ್ಯಾಲಯದಲ್ಲಿ ಆಫ್ಘನ್​ನಿಂದ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ 15 ಇತ್ತು. ಕಳೆದ ವರ್ಷ ರಜೆ ಅಂತಾ ಐವರು ವಿದ್ಯಾರ್ಥಿಗಳು ದೇಶಕ್ಕೆ ಹೋಗಿದ್ದರು. ಆದರೆ ಬಳಿಕ ಕೊವಿಡ್ ರಗಳೆ ಶುರುವಾಗಿ ಅವರು ಭಾರತಕ್ಕೆ ಬರಲು ಸಾಧ್ಯವೇ ಆಗಲಿಲ್ಲ. ಕೊವಿಡ್ ಕಾರಣದಿಂದಾಗಿ ವಿಮಾನ ಹಾರಾಟ ಬಂದ್ ಆಗಿದ್ದು ಇದಕ್ಕೆ ಒಂದು ಕಾರಣವಾದರೆ, ಕೊರೊನಾ ಹಿನ್ನೆಲೆಯಲ್ಲಿ ಬೇರೆ ದೇಶದಿಂದ ಬರುವವರಿಗೆ ನಿರ್ಬಂಧವನ್ನು ಹೇರಿದ್ದು ಮತ್ತೊಂದು ಕಾರಣ. ಇದೀಗ ಕೃಷಿ ವಿಶ್ವವಿದ್ಯಾಲಯದ ಇಂಟರ್ ನ್ಯಾಷನಲ್ ಹಾಸ್ಟೆಲ್​ನಲ್ಲಿ ಆಫ್ಘಾನಿಸ್ತಾನದ 10 ವಿದ್ಯಾರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ.

ಈ ಪೈಕಿ ಕೆಲವರ ಕೋರ್ಸ್ ಮುಕ್ತಾಯವಾಗಿದೆ. ಅವರ ವೀಸಾ ಅವಧಿಯೂ ಈ ಸೆಪ್ಟೆಂಬರ್​ಗೆ ಕೊನೆಗೊಳ್ಳಲಿದೆ. ಅವಧಿ ಮುಗಿಯುವುದರೊಳಗೆ ಅವರು ತಮ್ಮ ದೇಶವನ್ನು ಸೇರಬೇಕು. ಆದರೆ ಇದೀಗ ಆಘ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ನಡೆಯುತ್ತಿರುವುದರಿಂದ ತಮ್ಮ ದೇಶಕ್ಕೆ ತೆರಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಇದೀಗ ಕೃಷಿ ವಿವಿಯ ಇಂಟರ್ ನ್ಯಾಷನಲ್ ಹಾಸ್ಟೆಲ್​ನಲ್ಲಿ ನೆಲಸಿರುವ ವಿದ್ಯಾರ್ಥಿಗಳು ಕೋರ್ಸ್ ಅವಧಿ ಮುಗಿದ ಕೂಡಲೇ ಇಲ್ಲಿಂದ ಹೊರಗೆ ತೆರಳಲೇಬೇಕು. ಆದರೆ ಇದೀಗ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ವಿದ್ಯಾರ್ಥಿಗಳು ವಿವಿ ಕುಲಪತಿ ಡಾ.ಎಂ.ಬಿ. ಚೆಟ್ಟಿವರಿಗೆ ಮನವಿ ಸಲ್ಲಿಸಿದ್ದು, ತಾವು ಇನ್ನೂ ಕೆಲ ದಿನ ಇಲ್ಲಿಯೇ ಇರೋದಾಗಿ ಕೇಳಿಕೊಂಡಿದ್ದಾರೆ. ಅಲ್ಲದೇ ಭಾರತ ಸರಕಾರಕ್ಕೆ ಕೂಡ ಮನವಿ ಸಲ್ಲಿಸಿದ್ದು, ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಇದೇ ಕಾರಣಕ್ಕೆ ಈ ಬಗ್ಗೆ ಸಭೆ ನಡೆಸಿರುವ ಕೃಷಿ ವಿವಿ ಕುಲಪತಿ ಡಾ.ಚೆಟ್ಟಿ, ಈ ಬಗ್ಗೆ ಆದಷ್ಟು ಬೇಗನೇ ತೀರ್ಮಾನ ತೆಗೆದುಕೊಳ್ಳುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ ಅನುಮತಿ ಮತ್ತು ಅನುದಾನದ ಅವಶ್ಯಕತೆ ದಿನದಿಂದ ದಿನಕ್ಕೆ ಈ ವಿದ್ಯಾರ್ಥಿಗಳ ಆತಂಕ ಹೆಚ್ಚುತ್ತಲೇ ಹೋಗುತ್ತಿದೆ. ವೀಸಾ ಅವಧಿ ಮುಕ್ತಾಯವಾದರೆ ಅವರು ಭಾರತ ದೇಶದಲ್ಲಿ ಇರುವಂತಿಲ್ಲ. ಆದರೆ ಸದ್ಯಕ್ಕೆ ಅವರು ತಮ್ಮ ದೇಶಕ್ಕೆ ಮರಳುವ ಸ್ಥಿತಿಯಲ್ಲಿಯೂ ಇಲ್ಲ. ವಿದ್ಯಾರ್ಥಿಗಳು ಅವಧಿಯನ್ನು ಮೀರಿ ಹಾಸ್ಟೆಲ್​ನಲ್ಲಿ ಇರಬೇಕೆಂದರೆ ಅದಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ನಿಂದ ಅನುಮತಿ ಮತ್ತು ಅನುದಾನದ ಅವಶ್ಯಕತೆ ಇದೆ. ಇಲ್ಲಿಯೇ ಉಳಿದರೆ ಅವರ ಊಟ, ವಸತಿಯ ಖರ್ಚನ್ನು ಭರಿಸಲು ವಿಶ್ವವಿದ್ಯಾಲಯದ ಬಳಿ ಯಾವುದೇ ಅನುದಾನ ಇರುವುದಿಲ್ಲ. ಆ ಅನುದಾನ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನೀಡಬೇಕು. ಒಂದು ವೇಳೆ ಪರಿಷತ್ ಅನುಮತಿ ನೀಡಿದರೂ ವಿದ್ಯಾರ್ಥಿಗಳಿಗೆ ವೀಸಾದ ಸಮಸ್ಯೆಯೂ ಇದೆ. ವೀಸಾ ಅವಧಿಯನ್ನು ವಿಸ್ತರಿಸಬೇಕೆಂದರೆ ಅದು ಭಾರತ ಸರಕಾರದಿಂದ ಮಾತ್ರ ಸಾಧ್ಯ. ಅದು ಭಾರತ ಸರಕಾರದ ಕೈಯಲ್ಲಿದೆ. ಹೀಗಾಗಿ ಇದೀಗ ವಿದ್ಯಾರ್ಥಿಗಳು ಭಾರತ ಸರಕಾರಕ್ಕೂ ವೀಸಾ ಅವಧಿ ವಿಸ್ತರಿಸುವಂತೆ ಮನವಿ ಸಲ್ಲಿಸಿದ್ದಾರೆ.

ನಿತ್ಯವೂ ಕುಟುಂಬದವರೊಂದಿಗೆ ಸಂಪರ್ಕ ವಿದ್ಯಾರ್ಥಿಗಳು ನಿತ್ಯವೂ ಮನೆಯವರನ್ನು ಸಂಪರ್ಕಿಸಿ, ಮಾಹಿತಿ ಪಡೆಯುತ್ತಿದ್ದಾರೆ. ಸದ್ಯಕ್ಕೆ ಅಲ್ಲಿ ಅಶಾಂತಿಯ ವಾತಾವರಣವೇನೂ ಇಲ್ಲ. ಆದರೆ ತಾಲಿಬಾನಿಗಳಿಗೆ ವ್ಯಾಸಾಂಗ ಮಾಡಿದ ವಿದ್ಯಾರ್ಥಿಗಳನ್ನು ಕಂಡರೆ ಆಗುವುದಿಲ್ಲ. ಹೀಗಾಗಿ ಮರಳಿ ತಮ್ಮ ದೇಶಕ್ಕೆ ಹೋದರೆ ನಮ್ಮ ಗತಿ ಏನು ಎನ್ನುವ ಆತಂಕ ಮನೆಮಾಡಿದೆ.

ವಿದ್ಯಾರ್ಥಿಗಳು ಹೇಳಿದ್ದೇನು? ಈ ಬಗ್ಗೆ ಟಿವಿ9 ಡಿಜಿಟಲ್ ಜೊತೆಗೆ ಮಾತನಾಡಿದ ಆಫ್ಘನ್ ವಿದ್ಯಾರ್ಥಿ ಪಾಮಿರ್, ಇದೀಗ ವೀಸಾ ಅವಧಿ ಮುಕ್ತಾಯವಾಗುತ್ತಿರುವ ಆತಂಕದೊಂದಿಗೆ ನಮಗೆ ಮತ್ತೊಂದು ಆತಂಕವೂ ಶುರುವಾಗಿದೆ. ಒಂದು ವೇಳೆ ಭಾರತ ಸರಕಾರ ವೀಸಾ ಅವಧಿಯನ್ನು ವಿಸ್ತರಿಸದಿದ್ದರೆ ಅನಿವಾರ್ಯವಾಗಿ ಮರಳಿ ನಮ್ಮ ದೇಶಕ್ಕೆ ಹೋಗಬೇಕು. ಸದ್ಯಕ್ಕೆ ತಾಲಿಬಾನಿಗಳು ಬದಲಾಗಿರೋದಾಗಿ ಹೇಳುತ್ತಿದ್ದಾರೆ. ಆದರೆ ಅದನ್ನು ನಾವು ಹೇಗೆ ನಂಬಬೇಕು? ನಮಗೆ ಭಾರತ ಸರಕಾರದ ಮೇಲೆ ಸಾಕಷ್ಟು ನಂಬಿಕೆ ಹಾಗೂ ಗೌರವವಿದೆ. ಇನ್ನು ಕೆಲವು ದಿನ ನಮಗೆ ಇಲ್ಲಿಯೇ ನೆಲೆ ಸಿಗುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಹಲವಾರು ವರ್ಷಗಳಿಂದ ನಾನು ಭಾರತದಲ್ಲಿ ಇದ್ದೇನೆ. ಇದೇ ಕೃಷಿ ವಿಶ್ವವಿದ್ಯಾಲಯದಲ್ಲಿ ನಾನು ವ್ಯಾಸಾಂಗ ಮಾಡುತ್ತಿದ್ದೇನೆ. ನಿಜಕ್ಕೂ ಭಾರತ ದೇಶ ಅದ್ಭುತ. ಇಲ್ಲಿನ ಸರಕಾರ, ಜನರು, ಉಪನ್ಯಾಸಕರು ನಿಜಕ್ಕೂ ಶ್ರೇಷ್ಠರು. ಇದೀಗ ನಮ್ಮಲ್ಲಿನ ಕೆಲವರಿಗೆ ಮರಳಿ ದೇಶಕ್ಕೆ ಹೋಗುವ ಅನಿವಾರ್ಯತೆ ಇದೆ. ಆದರೆ ಅಲ್ಲಿಗೆ ಹೋದರೆ ಗತಿ ಏನು ಅನ್ನುವ ಆತಂಕವಿದೆ. ಸದ್ಯಕ್ಕೆ ಅಲ್ಲಿ ಇದೀಗ ಕೊಂಚ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿರುವ ಬಗ್ಗೆ ಕುಟುಂಬದವರಿಂದ ಮಾಹಿತಿ ಸಿಕ್ಕಿದೆ. ಇದರಿಂದಾಗಿ ಕೊಂಚ ಸಮಧಾನವಾಗಿದೆ. ಹಾಗಂತ ಅಲ್ಲಿ ಎಲ್ಲವೂ ಸರಿಯಾಗಿದೆ ಅಂತ ಹೇಳಲು ಆಗಲ್ಲ. ಹೀಗಾಗಿ ನಾವ್ಯಾರೂ ಇದೀಗ ದೇಶಕ್ಕೆ ಮರಳಿ ಹೋಗಲು ಸಿದ್ಧರಿಲ್ಲ. ವೀಸಾ ಅವಧಿ ವಿಸ್ತರಣೆ ಮಾಡುವುದರ ಜೊತೆಗೆ ಕೃಷಿ ವಿಶ್ವವಿದ್ಯಾಲಯದಲ್ಲಿಯೇ ಉಳಿದುಕೊಳ್ಳಲು ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಇದೆ ಅಂತ ವಿದ್ಯಾರ್ಥಿ ಮಹಮ್ಮದ್ ಅಕ್ಬರ್ ಹೇಳುತ್ತಾರೆ.

ಈಗಾಗಲೇ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸಮಾಧಾನವನ್ನು ಹೇಳಿದ್ದೇವೆ. ಅವರಿಗೆ ನಾವು ಧೈರ್ಯ ತುಂಬುವ ಕೆಲಸವನ್ನೂ ಮಾಡಿದ್ದೇವೆ. ಆದರೆ ಅವರು ಕೃಷಿ ವಿವಿಯ ಇಂಟರ್ ನ್ಯಾಷನಲ್ ಹಾಸ್ಟೆಲ್ನಲ್ಲಿ ಉಳಿದುಕೊಳ್ಳಬೇಕಾದರೆ ಕೃಷಿ ಅನುಸಂಧಾನ ಪರಿಷತ್ನ ಅನುಮತಿ ಬೇಕು. ಅಲ್ಲದೇ ಅವರ ಖರ್ಚಿಗೆ ಅನುದಾನವೂ ಬೇಕು. ಹೀಗಾಗಿ ಈ ಬಗ್ಗೆ ಈಗಾಗಲೇ ಪತ್ರವನ್ನು ಬರೆಯಲಾಗಿದೆ ಅಂತ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಬಿ. ಚೆಟ್ಟಿ ತಿಳಿಸಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ

ಕಾಶ್ಮೀರಿ ಮುಸಲ್ಮಾನರ ಹಿತರಕ್ಷಣೆ ಕಾಯುವ ಹಕ್ಕು ತಮಗಿದೆ ಎನ್ನುತ್ತಿದ್ದಾರೆ ತಾಲಿಬಾನಿಗಳು, ಕಾಶ್ಮೀರಿಗಳು ಮುಸಿಮುಸಿ ನಗುತ್ತಿದ್ದಾರೆ!

ಮಾನವೀಯತೆಯ ಕಗ್ಗೊಲೆ: ನಾಯಿಗಳ ಬಾಯಿಗೆ ಆ್ಯಸಿಡ್ ಹಾಕಿ ಕೊಲೆಗೈದ ಪಾಪಿಗಳು..!

(Afghan students have appealed to the Government of India to extend the visa)

Published On - 9:45 am, Sun, 5 September 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ