Afghan Update: ಅಧಿಕಾರಕ್ಕಾಗಿ ತಾಲಿಬಾನ್-ಹಖ್ಖಾನಿ ಸಂಘರ್ಷ, ಮುಲ್ಲಾ ಬಾರದಾರ್​ಗೆ ತೀವ್ರ ಗಾಯ: ಐಎಸ್​ಐ ಮಧ್ಯಪ್ರವೇಶ

ಅಫ್ಘಾನಿಸ್ತಾನ ವಶಪಡಿಸಿಕೊಳ್ಳುವಲ್ಲಿ ತಾಲಿಬಾನಿಗಳ ಬೆನ್ನಿಗೆ ನಿಂತಿದ್ದ ಪಾಕಿಸ್ತಾನದ ಪ್ರಭಾವಿ ಹಖ್ಖಾನಿ ನೆಟ್​ವರ್ಕ್​ ಜೊತೆಗೆ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ತಾಲಿಬಾನ್​ಗೆ ಯಶಸ್ಸು ಸಿಗುತ್ತಿಲ್ಲ.

Afghan Update: ಅಧಿಕಾರಕ್ಕಾಗಿ ತಾಲಿಬಾನ್-ಹಖ್ಖಾನಿ ಸಂಘರ್ಷ, ಮುಲ್ಲಾ ಬಾರದಾರ್​ಗೆ ತೀವ್ರ ಗಾಯ: ಐಎಸ್​ಐ ಮಧ್ಯಪ್ರವೇಶ
ಹಖ್ಖಾನಿ ನೆಟ್​ವರ್ಕ್​ ಮುಖ್ಯಸ್ಥ ಮುಲ್ಲಾ ಯಾಕೂಬ್ ಮತ್ತು ತಾಲಿಬಾನ್ ನಾಯಕ ಅಬ್ದುಲ್ ಘನಿ ಬಾರದಾರ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 05, 2021 | 6:49 PM

ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಂಡು 20 ದಿನಗಳು ಕಳೆದರೂ ತಾಲಿಬಾನ್ ಹೋರಾಟಗಾರರಿಗೆ ಈವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನ ವಶಪಡಿಸಿಕೊಳ್ಳುವಲ್ಲಿ ತಾಲಿಬಾನಿಗಳ ಬೆನ್ನಿಗೆ ನಿಂತಿದ್ದ ಪಾಕಿಸ್ತಾನದ ಪ್ರಭಾವಿ ಹಖ್ಖಾನಿ ನೆಟ್​ವರ್ಕ್​ ಜೊತೆಗೆ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ತಾಲಿಬಾನ್​ಗೆ ಯಶಸ್ಸು ಸಿಗುತ್ತಿಲ್ಲ. ಈ ನಡುವೆ ಎರಡೂ ಗುಂಪುಗಳ ನಡುವೆ ಈಚೆಗೆ ಸಂಘರ್ಷ ನಡೆದಿದ್ದು, ತಾಲಿಬಾನ್​ನ ಸುಪ್ರೀಂ ಕಮಾಂಡರ್​ ಮುಲ್ಲಾ ಅಬ್ದುಲ್ ಘನಿ ಬಾರದಾರ್​ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಳೆದ ಕೆಲ ದಿನಗಳಿಂದ ಇನ್ನೇನು ಸರ್ಕಾರ ರಚನೆ ಆಗಿಯೇ ಹೋಯಿತು ಎಂಬಂಥ ಘೋಷಣೆಗಳು ಹೊರಬಿದ್ದರೂ ವಾಸ್ತವದಲ್ಲಿ ಯಾರೊಬ್ಬರಿಗೂ ಸರ್ಕಾರದ ನೇತೃತ್ವ ವಹಿಸಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಹೋರಾಟದಲ್ಲಿ ತಾಲಿಬಾನ್​ ಜೊತೆಗಿದ್ದ ಹಖ್ಖಾನಿ ನೆಟ್​ವರ್ಕ್ ಗುಂಪಿನೊಂದಿಗೆ ತಾಲಿಬಾನಿಗಳು ಅಧಿಕಾರ ಹಂಚಿಕೆ ವಿಚಾರದಲ್ಲಿ ಸಹಮತಕ್ಕೆ ಬರಲು ಈವರೆಗೆ ಸಾಧ್ಯವಾಗಿಲ್ಲ. ಸರ್ಕಾರ ರಚನೆ ವಿಳಂಬವಾಗಲು ಇದು ಮುಖ್ಯ ಕಾರಣ ಎಂದು ಹೇಳಲಾಗಿದೆ.

‘ಪಂಜ್​ಶಿರ್ ಅಬ್​ಸರ್ವರ್’ ಜಾಲತಾಣದಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ತಾಲಿಬಾನ್ ನಾಯಕರೊಂದಿಗೆ ಅನಸ್ ಹಖ್ಖಾನಿ ನಿಷ್ಠರ ಗುಂಪಿನ ನಡುವೆ ಶನಿವಾರ ಸಂಘರ್ಷ ನಡೆದಿದೆ. ಅಧಿಕಾರ ಹಂಚಿಕೆಯ ಸೂತ್ರ ಅಂತಿಮಗೊಳಿಸುವ ವಿಚಾರ ಮತ್ತು ಪಂಜ್​ಶಿರ್ ಕಣಿವೆ ಸಂಘರ್ಷವನ್ನು ನಿಗ್ರಹಿಸುವ ವಿಚಾರದಲ್ಲಿ ಎರಡೂ ಗುಂಪಿನ ನಡುವೆ ಸಹಮತ ಮೂಡುತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲು ತಾಲಿಬಾನ್ ಸಂಘಟನೆಯು ಮುಲ್ಲಾ ಬಾರದಾರ್​ಗೆ ಅವಕಾಶ ನೀಡಿತ್ತು. ಈ ಸಂಘರ್ಷದಲ್ಲಿ ಗಾಯಗೊಂಡ ಬಾರದಾರ್​ಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಲಿಬಾನ್ ವಿರುದ್ಧ ಸಂಘರ್ಷಕ್ಕಿಳಿದಿರುವ ಪಂಜ್​ಶಿರ್​ ಕಣಿಯ ನಾರ್ದರ್ನ್​ ಅಲಯನ್ಸ್​ ಸಹ ತನ್ನ ಗುಪ್ತಚರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಮುಲ್ಲಾ ಬಾರದಾರ್ ಗಾಯಗೊಂಡಿದ್ದಾನೆ ಎಂದು ಹೇಳಿದೆ. ಪಂಜ್​ಶಿರ್ ವಿರುದ್ಧ ಹೋರಾಟ ಸ್ಥಗಿತಗೊಳಿಸುವಂತೆ ತನ್ನ ಹೋರಾಟಗಾರರಿಗೆ ಸೂಚಿಸಿರುವ ಬಾರದಾರ್, ಕಾಬೂಲ್​ಗೆ ಹಿಂದಿರುಗುವಂತೆ ಆದೇಶಿಸಿದ್ದಾನೆ ಎಂದು ನಾರ್ದರ್ನ್ ಅಲಯನ್ಸ್ ಹೇಳಿದೆ.

ಪಂಜ್​ಶಿರ್​ನಲ್ಲಿ ಹಿನ್ನಡೆ ಅನುಭವಿಸಿದ ತಾಲಿಬಾನ್ ಇದೀಗ ಅಧಿಕಾರಕ್ಕಾಗಿ ತನ್ನದೇ ಗುಂಪಿನಲ್ಲಿ ಕಿತ್ತಾಡಿಕೊಳ್ಳುತ್ತಿದೆ. ಇಂಥ ಜಗಳವೊಂದರಲ್ಲಿ ಸ್ವತಃ ಮುಲ್ಲಾ ಬಾರದಾರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ನಾರ್ದರ್ನ್ ಅಲಯನ್ಸ್ ಟ್ವೀಟ್ ಮಾಡಿದೆ.

ಅಫ್ಘಾನಿಸ್ತಾನದ ಹೊಸ ಸರ್ಕಾರದಲ್ಲಿ ಅಲ್ಲಿನ ಅಲ್ಪಸಂಖ್ಯಾತರ ಸಮುದಾಯಗಳಿಗೂ ಪಾತಿನಿಧ್ಯ ಇರಬೇಕು ಎಂಬುದು ಬಾರದಾರ್ ಅಭಿಪ್ರಾಯವಾಗಿದೆ. ಆದರೆ ಇದಕ್ಕೆ ಹಖ್ಖಾನಿ ನೆಟ್​ವರ್ಕ್ ಸಮ್ಮತಿಸುತ್ತಿಲ್ಲ. ಅವರು ಮಧ್ಯಯುಗೀನ ನಿಯಮಗಳನ್ನು ಪ್ರತಿಪಾದಿಸುವ ಕಟ್ಟರ್ ಮತೀಯವಾದಿ ಸರ್ಕಾರ ರಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಹೀಗಾಗಿಯೇ ಎರಡೂ ಗುಂಪುಗಳ ನಡುವೆ ಕಿತ್ತಾಟ ನಡೆಯುತ್ತಿದೆ.

‘ಕಾಬೂಲ್ ಗೆದ್ದಿದ್ದು ನಾವು, ಅಫ್ಘಾನಿಸ್ತಾನದ ಸರ್ಕಾರ ರಚನೆಯಲ್ಲಿ ನಮಗೆ ಪ್ರಮುಖ ಸ್ಥಾನ ಸಿಗಬೇಕು’ ಎಂದು ಹಖ್ಖಾನಿ ನೆಟ್​ವರ್ಕ್ ಹಕ್ಕೊತ್ತಾಯ ಮಂಡಿಸಿದೆ. ಹಖ್ಖಾನಿಗಳ ನಾಯಕ ಮುಲ್ಲಾ ಯಾಕೂಬ್ ಇಂದಿಗೂ ಕಂದಹಾರ್​ನಲ್ಲಿಯೇ ಇದ್ದಾನೆ. ಸರ್ಕಾರ ರಚನೆ ವಿಚಾರದಲ್ಲಿ ಗೊಂದಲ ಹಾಗೆಯೇ ಮುಂದುವರಿದಿದೆ. ಈ ನಡುವೆ ಅಲ್​ಖೈದಾ ಸಹ ರಂಗ ಪ್ರವೇಶ ಮಾಡಿದ್ದು, ಸರ್ಕಾರ ರಚನೆ ಮತ್ತಷ್ಟು ಗೋಜಲಾಗಿದೆ.

ತಾಲಿಬಾನ್ ಮತ್ತು ಹಖ್ಖಾನಿ ನೆಟ್​ವರ್ಕ್​ ನಡುವಣ ಭಿನ್ನಮತಕ್ಕೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜಿನ್ಸ್ (Inter-Services Intelligence – ISI) ತುಪ್ಪ ಸುರಿಯುತ್ತಿದೆ. ಇಸ್ಲಾಮಾಬಾದ್​ನಿಂದ ಕಾಬೂಲ್​ಗೆ ಉನ್ನತ ಮಟ್ಟದ ನಿಯೋಗದೊಂದಿಗೆ ಬಂದಿರುವ ಐಎಸ್​ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ ಸರ್ಕಾರ ರಚನೆ ಪ್ರಕ್ರಿಯೆಯನ್ನು ಸಮೀಪದಿಂದ ಗಮನಿಸುತ್ತಿದ್ದಾರೆ. ಹಮೀದ್ ಅವರನ್ನು ತಾಲಿಬಾನ್ ಕರೆಸಿಕೊಂಡಿದೆ ಎಂದು ಟೊಲೊ ನ್ಯೂಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಫ್ಘಾನಿಸ್ತಾನದ ಮಾಜಿ ಮಹಿಳಾ ಸಂಸದೆ ಮರಿಯಮ್ ಸೊಲೈಮನ್​ಖಿಲ್ ಬೇರೆಯದ್ದೇ ಆದ ರೀತಿಯಲ್ಲಿ ಈ ಬೆಳವಣಿಗೆಯನ್ನು ವಿಶ್ಲೇಷಿಸುತ್ತಾರೆ. ಹೊಸ ಸರ್ಕಾರದಲ್ಲಿ ಅಬ್ದುಲ್ ಘನಿ ಬಾರದಾರ್​ಗೆ ಅಧಿಕಾರ ಸಿಗದಂತೆ ಮಾಡಲೆಂದೇ ಹಮೀದ್ ಕಾಬೂಲ್​ಗೆ ಬಂದಿದ್ದಾರೆ. ಹಖ್ಖಾನಿಯೇ ದೇಶದ ಅಧ್ಯಕ್ಷನಾಗಬೇಕು ಎಂಬುದು ಪಾಕಿಸ್ತಾನದ ಆಶಯವಾಗಿದೆ’ ಎಂದು ಅವರು ಟ್ವೀಟ್ ಮಾಡಿದ್ದಾರೆ. ತಾಲಿಬಾನ್​ನ ವಿವಿಧ ಗುಂಪುಗಳ ನಡುವೆ ವ್ಯಾಪಕ ಭಿನ್ನಾಭಿಪ್ರಾಯವಿದೆ. ಇದನ್ನು ನಿರ್ವಹಿಸಲೆಂದೆ ಬಾರದಾರ್ ತನ್ನ ಪಡೆಗಳನ್ನು ಪಂಜ್​ಶಿರ್ ಕಣಿವೆಯಿಂದ ಹಿಂದಕ್ಕೆ ಕರೆಸಿಕೊಂಡಿದ್ದಾನೆ’ ಎಂದು ಅವರು ಟ್ವೀಟ್ ಹೇಳಿದ್ದಾರೆ.

(Afghanistan Update Taliban Haqqani faction fight over differences on govt formation Mullah Baradar injured)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ