ತಾಲಿಬಾನಿಗಳಿಗೆ ಬಗ್ಗದ ಪಂಜಶಿರ್ ಹೋರಾಟಗಾರರು; 600ಕ್ಕೂ ಹೆಚ್ಚು ಉಗ್ರರ ಹತ್ಯೆ, 1000ಕ್ಕೂ ಅಧಿಕ ಮಂದಿಯ ಬಂಧನ !
ಆ್ಯಂಟಿ ತಾಲಿಬಾನ್ ಪ್ರತಿರೋಧಕ ಪಡೆಯ ಕಮಾಂಡರ್ ಅಹ್ಮದ್ ಮಸೂದ್ ತಾಲಿಬಾನಿಗಳ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ಕಾಲೂರಿ ನಿಂತಿದ್ದಾರೆ. ಈ ಪಂಜಶಿರ್ ವ್ಯಾಲಿಯನ್ನು ತಾಲಿಬಾನಿಗಳು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಬಾಕಿ ಎಲ್ಲ ಪ್ರದೇಶಗಳು ಉಗ್ರರ ಕೈವಶವಾಗಿದ್ದರೂ ಪಂಜಶಿರ್ ಮಾತ್ರ ದಕ್ಕುತ್ತಿಲ್ಲ. ಪಂಜಶಿರ್ನ್ನು ವಶಪಡಿಸಿಕೊಂಡಿದ್ದಾಗಿ ತಾಲಿಬಾನಿಗಳು ಹೇಳುತ್ತಿದ್ದರೂ ಅತ್ತ, ಸ್ಥಳೀಯ ಪ್ರತಿರೋಧಕ ಪಡೆ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ ಆಫ್ ಅಫ್ಘಾನಿಸ್ತಾನದ ಸಿಬ್ಬಂದಿ ಅದನ್ನು ಒಪ್ಪುತ್ತಿಲ್ಲ. ತಾವೂ ಉಗ್ರರನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಿದ್ದೇವೆ..ಪಂಜಶಿರ್ ನಮ್ಮ ಬಳಿಯೇ ಇದೆ ಎನ್ನುತ್ತಿದ್ದಾರೆ. ನಾವು ಪಂಜಶಿರ್ ಪ್ರಾಂತ್ಯದ ರಾಜಧಾನಿ ಬಜಾರಕ್ಗೆ ತಲುಪಿದ್ದೇವೆ. ಅಲ್ಲಿನ ಪ್ರಾಂತೀಯ ಗವರ್ನರ್ ಕಚೇರಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ತಾಲಿಬಾನಿಗಳು ಹೇಳಿದ್ದರು. ಆದರೆ, ಸ್ಥಳೀ ಯ ಹೋರಾಟಗಾರರು ಇದನ್ನು ಸುಳ್ಳು ಎಂದಿದ್ದಾರೆ. ಪಂಜಶಿರ್ ಮತ್ತು ಕಪಿಸಾ ಪ್ರಾಂತ್ಯಗಳ ಗಡಿಯಿಂದಲೇ ತಾಲಿಬಾನಿಗಳನ್ನು ಹಿಮ್ಮೆಟ್ಟಿಸಲಾಗಿದೆ ಎಂದಿದ್ದಾರೆ.
600ಕ್ಕೂ ಅಧಿಕ ಉಗ್ರರ ಕೊಂದಿದ್ದಾಗಿ ಟ್ವೀಟ್ ಅಫ್ಘಾನಿಸ್ತಾನದಲ್ಲಿರುವ ಈಶಾನ್ಯ ಪ್ರಾಂತ್ಯ ಪಂಜಶಿರ್ ವಶಪಡಿಸಿಕೊಳ್ಳಲು ತಾಲಿಬಾನಿಗಳು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಅಫ್ಘಾನ್ ನ್ಯಾಷನಲ್ ರೆಸಿಸ್ಟೆನ್ಸ್ ಪಡೆಯ ವಕ್ತಾರ ಫಾಹಿಮ್ ದಷ್ಟಿ ಟ್ವೀಟ್ ಮಾಡಿ, ನಾವು ಪಂಜಶಿರ್ನ ವಿವಿಧ ಜಿಲ್ಲೆಗಳಲ್ಲಿ ಮುಂಜಾನೆಯಿಂದಲೂ ತಾಲಿಬಾನಿ ಉಗ್ರರ ವಿರುದ್ಧ ದಾಳಿ ನಡೆಸಿ, 600ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದೇವೆ. 1000ಕ್ಕೂ ಹೆಚ್ಚು ಭಯೋತ್ಪಾದಕರು ನಮ್ಮ ಸೆರೆಯಾಳಾಗಿದ್ದಾರೆ. ಇವರಲ್ಲಿ ಒಂದಷ್ಟು ಜನರು ಶರಣಾಗಿದ್ದರು ಎಂದು ಹೇಳಿದ್ದಾರೆ. ಪಂಜಶಿರ್ ಉಳಿದ ಪ್ರಾಂತ್ಯಗಳಂತೆ ಅಲ್ಲ, ಇಲ್ಲಿ ಗಣಿಗಾರಿಕೆ ವ್ಯಾಪಕ ಆಗಿರುವುದರಿಂದ ತಾಲಿಬಾನ್ ಉಗ್ರರಿಗೆ ಇಲ್ಲಿ ಹೋರಾಡಲು ಕಷ್ಟವಾಗುತ್ತಿದೆ. ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬರಲೂ ಸಾಧ್ಯವಾಗುತ್ತಿಲ್ಲ ಎಂದು ವಕ್ತಾರ ಹೇಳಿದ್ದಾರೆ.
دشمن در منطقه دالانسنگ شکست خورد. اشغال عنابه و خنج #پنجشیر هیچ واقعیت ندارد. قهرمانان مجرب و جدید نیروهای مقاومت در خط مقدم جبههها حضور پیدا کردهاند. رزمندگان آزادی مدبرانه با روحیه بالا آماده هر نوع حمله و یورش هستند. تهاجم دشمن ذبون مثل همیشه ناکام و محکوم به شکست است. pic.twitter.com/EZLbp5eUJT
— Fahim Dashti فهیم دشتی (@FahimDashty) September 4, 2021
ಪಂಜಶೀರ್ ಉಳಿಸಲು ಪ್ರತಿಜ್ಞೆ ಮಾಡಿದ ಅಹ್ಮದ್ ಮಸೂದ್ ಈ ಆ್ಯಂಟಿ ತಾಲಿಬಾನ್ ಪ್ರತಿರೋಧಕ ಪಡೆಯ ಕಮಾಂಡರ್ ಅಹ್ಮದ್ ಮಸೂದ್ ತಾಲಿಬಾನಿಗಳ ವಿರುದ್ಧ ಹೋರಾಟದಲ್ಲಿ ಗಟ್ಟಿಯಾಗಿ ಕಾಲೂರಿ ನಿಂತಿದ್ದಾರೆ. ಈ ಪಂಜಶಿರ್ ವ್ಯಾಲಿಯನ್ನು ತಾಲಿಬಾನಿಗಳು ಆಕ್ರಮಿಸಿಕೊಳ್ಳಲು ಬಿಡುವುದಿಲ್ಲ. ನನ್ನ ಪ್ರಾಂತ್ಯವನ್ನು ಕಾಪಾಡಿಕೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ. ದೇವರು, ನ್ಯಾಯ ಮತ್ತು ಸ್ವಾತಂತ್ರ್ಯದ ಮೇಲೆ ನಂಬಿಕೆಯಿಟ್ಟು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಇದನ್ನೂ ಓದಿ: ಅಲೆಮಾರಿ ವಿದ್ಯಾರ್ಥಿಗೆ ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್ ಪ್ರವೇಶಾತಿ; ಉಚಿತ ಶಿಕ್ಷಣದ ಭರವಸೆ ನೀಡಿದ ಸಚಿವರು
Viral Video: ನಗುತ್ತಾ ವಧುವಿನ ಊಟದ ಬಾಳೆಯಲ್ಲಿದ್ದ ಹಪ್ಪಳ ಕದ್ದ ವರ; ಕ್ಯೂಟ್ ವಿಡಿಯೋ ವೈರಲ್
Published On - 9:45 am, Sun, 5 September 21