Kabul Airport: ಕಾಬೂಲ್ ವಿಮಾನ ನಿಲ್ದಾಣದ ರನ್​ವೇ ರಿಪೇರಿ; ವಿಮಾನ ಹಾರಾಟ ಆರಂಭ

TV9 Digital Desk

| Edited By: Sushma Chakre

Updated on: Sep 04, 2021 | 8:08 PM

ತಾಂತ್ರಿಕ ತಂಡದ ಪರಿಶ್ರಮದಿಂದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಪುನರಾರಂಭವಾಗಿದೆ ಎಂದು ಕತಾರ್​​ನ ಅಫ್ಘಾನಿಸ್ತಾನದ ರಾಯಭಾರಿ ತಿಳಿಸಿದ್ದಾರೆ.

Kabul Airport: ಕಾಬೂಲ್ ವಿಮಾನ ನಿಲ್ದಾಣದ ರನ್​ವೇ ರಿಪೇರಿ; ವಿಮಾನ ಹಾರಾಟ ಆರಂಭ
ಕಾಬೂಲ್ ವಿಮಾನ ನಿಲ್ದಾಣ

Follow us on

ದುಬೈ: ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡ ಬಳಿಕ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬೇರೆ ದೇಶಕ್ಕೆ ತೆರಳಲು ಜನರು ಮುಗಿಬಿದ್ದಿದ್ದರು. ಇದರಿಂದ ನೂಕುನುಗ್ಗಲು ಉಂಟಾಗಿ, ಗುಂಡಿನ ದಾಳಿಯೂ ನಡೆದಿತ್ತು. ಈ ಘಟನೆಯಲ್ಲಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದರು. ಬಳಿಕ ಕಾಬೂಲ್ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿಯೂ ನಡೆದು ಸಾಕಷ್ಟು ಜನರು ಮೃತಪಟ್ಟಿದ್ದರು. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಗಲಾಟೆಯ ಬಳಿಕ ಅಲ್ಲಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಕಾಬೂಲ್ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ತಾಂತ್ರಿಕ ತಂಡವನ್ನು ಹೊತ್ತ ಕತಾರ್ ವಿಮಾನ ಕಾಬೂಲ್​ನಲ್ಲಿ ಕಾರ್ಯಾಚರಣೆ ನಡೆಸಿತ್ತು. ಆ ತಾಂತ್ರಿಕ ತಂಡದ ಪರಿಶ್ರಮದಿಂದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಪುನರಾರಂಭವಾಗಿದೆ ಎಂದು ಕತಾರ್​​ನ ಅಫ್ಘಾನಿಸ್ತಾನದ ರಾಯಭಾರಿ ತಿಳಿಸಿದ್ದಾರೆ.

ಹೀಗಾಗಿ, ಶೀಘ್ರದಲ್ಲೇ ನಾಗರಿಕರಿಗೂ ಕಾಬೂಲ್ ವಿಮಾನ ನಿಲ್ದಾಣ ಸಂಚಾರಕ್ಕೆ ಮುಕ್ತವಾಗಲಿದೆ. ಅಫ್ಘಾನಿಸ್ತಾನದ ಅಧಿಕಾರಗಳ ಸಹಕಾರದಿಂದ ಕಾಬೂಲ್​ ವಿಮಾನ ನಿಲ್ದಾಣದ ರನ್​ವೇಯನ್ನು ರಿಪೇರಿ ಮಾಡಲಾಗಿದೆ. ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣದಿಂದ ಡೊಮೆಸ್ಟಿಕ್ ಅಥವಾ ದೇಶೀಯ ವಿಮಾನಗಳ ಸಂಚಾರ ಶುರು ಮಾಡಿದ್ದು, ಸದ್ಯದಲ್ಲೇ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೂ ಅವಕಾಶ ನೀಡಲಾಗುತ್ತದೆ.

ಬುಧವಾರ ಕತಾರ್​ ವಿಮಾನದಲ್ಲಿ ತಾಂತ್ರಿಕ ತಂಡ ಕಾಬೂಲ್​ಗೆ ಬಂದಿಳಿದಿತ್ತು. ಮಾನವೀಯ ನೆರವು ಒದಗಿಸಲು ವಿಮಾನಯಾನವನ್ನು ಪುನರಾರಂಭಿಸುವುದು ಮತ್ತು ಸ್ಥಳಾಂತರಿಸುವ ಪ್ರಯತ್ನಗಳನ್ನು ಪುನರಾರಂಭಿಸುವುದು ಈ ತಾಂತ್ರಿಕ ತಂಡದ ಗುರಿಯಾಗಿದೆ ಎಂದು ಕತಾರ್​ನ ಅಫ್ಘಾನಿಸ್ತಾನದ ರಾಯಭಾರಿ ತಿಳಿಸಿದ್ದರು.

ಕೆಲವು ದಿನಗಳ ಹಿಂದೆ ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಬಳಿ ಮೂರು ಬಾಂಬ್ ಸ್ಫೋಟವಾಗಿತ್ತು. ಈ ಬಾಂಬ್ ಸ್ಫೋಟಗಳಲ್ಲಿ ಅಮೆರಿಕನ್ ಸೈನಿಕರು ಸೇರಿದಂತೆ ಸಾಕಷ್ಟು ಜನರು ಸಾವನ್ನಪ್ಪಿದ್ದರು. ಈ ಸರಣಿ ಬಾಂಬ್ ದಾಳಿಯಿಂದ ಕಾಬೂಲ್ ವಿಮಾನ ನಿಲ್ದಾಣಕ್ಕೂ ಹಾನಿಯಾಗಿತ್ತು. ಇದೀಗ ಅದನ್ನು ಸರಿಪಡಿಸಲಾಗಿದ್ದು, ವಿಮಾನ ಹಾರಾಟಕ್ಕೆ ಯೋಗ್ಯವಾಗಿದೆ.

ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣ ಈಗ ತಾಲಿಬಾನ್ ಸುಪರ್ದಿಯಲ್ಲಿದೆ: ಏರ್​ಪೋರ್ಟ್​ ನಿರ್ವಹಣೆಯ ಕೌಶಲ ತಾಲಿಬಾನ್​ಗೆ ಇದೆಯೇ?

ತಾಲಿಬಾನಿಗಳ ಸಂಭ್ರಮಕ್ಕೆ ಮಕ್ಕಳೂ ಸೇರಿ ಹಲವರು ಬಲಿ; ಕಾಬೂಲ್​ನಲ್ಲಿ ದುರ್ಘಟನೆ

(Afghanistan Kabul Airport Reopens To Receive Aid Civilian Flights Starts Soon Qatar says)

ತಾಜಾ ಸುದ್ದಿ

Related Stories

Click on your DTH Provider to Add TV9 Kannada