ತಾಲಿಬಾನಿಗಳ ಸಂಭ್ರಮಕ್ಕೆ ಮಕ್ಕಳೂ ಸೇರಿ ಹಲವರು ಬಲಿ; ಕಾಬೂಲ್​ನಲ್ಲಿ ದುರ್ಘಟನೆ

ನಿನ್ನೆ ಪಂಜ್​ಶಿರ್​ ಕಣಿವೆಯನ್ನೂ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶವನ್ನು ಸ್ಥಳೀಯರಿಂದ ವಶಪಡಿಸಿಕೊಳ್ಳುವುದು ಅಷ್ಟು ಸಲೀಸಾಗಿರಲಿಲ್ಲ.

ತಾಲಿಬಾನಿಗಳ ಸಂಭ್ರಮಕ್ಕೆ ಮಕ್ಕಳೂ ಸೇರಿ ಹಲವರು ಬಲಿ; ಕಾಬೂಲ್​ನಲ್ಲಿ ದುರ್ಘಟನೆ
ಗುಂಡಿನ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು
Follow us
TV9 Web
| Updated By: Lakshmi Hegde

Updated on:Sep 04, 2021 | 9:21 AM

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಉಪಟಳ ದಿನೇದಿನೆ ಹೆಚ್ಚುತ್ತಿದೆ. ನಾವು ಶಾಂತಿಪ್ರಿಯರು ಎನ್ನುತ್ತಲೇ ಹಲವರನ್ನು ಕೊಲ್ಲುತ್ತಿದ್ದಾರೆ. ಹಾಗೇ, ಶುಕ್ರವಾರ ರಾತ್ರಿ ಕೂಡ ಕಾಬೂಲ್​​ನಲ್ಲಿ ತಾಲಿಬಾನಿಗಳ ಸಂಭ್ರಮಕ್ಕೆ ಹಲವರು ಬಲಿಯಾಗಿದ್ದಾರೆ. ಉಗ್ರರು ಗಾಳಿಯಲ್ಲಿ ಗುಂಡು ಹೊಡೆದ ಪರಿಣಾಮ ಮಕ್ಕಳೂ ಸೇರಿ ಹಲವರು ಜೀವಕಳೆದುಕೊಂಡಿದ್ದಾರೆ ಎಂದು ಅಫ್ಘಾನಿಸ್ತಾನ ಸ್ಥಳೀಯ ಮಾಧ್ಯಮ ಅಸ್ವಾಕಾ ವರದಿ ಮಾಡಿದೆ.  

ನಿನ್ನೆ ಪಂಜ್​ಶಿರ್​ ಕಣಿವೆಯನ್ನೂ ತಾಲಿಬಾನಿಗಳು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶವನ್ನು ಸ್ಥಳೀಯರಿಂದ ವಶಪಡಿಸಿಕೊಳ್ಳುವುದು ಅಷ್ಟು ಸಲೀಸಾಗಿರಲಿಲ್ಲ. ತುಂಬದಿನಗಳ ನಂತರ ಅಲ್ಲಿನ ನ್ಯಾಶನಲ್​ ರೆಸಿಸ್ಟೆನ್ಸ್​ ಫ್ರಂಟ್​ ಆಫ್​ ಅಫ್ಘಾನಿಸ್ತಾನ್​ (NRFA) ಸಂಘಟನೆಯನ್ನು ಸೋಲಿಸಿ, ಪಂಜಶಿರ್​ ಕಣಿವೆಯನ್ನೂ ತಾಲಿಬಾನಿಗಳು ಕೈವಶ ಮಾಡಿಕೊಂಡಿದ್ದಾರೆ. ಅದರಿಂದ ಖುಷಿಯಾದ ತಾಲಿಬಾನಿಗಳು ಕಾಬೂಲ್​ನಲ್ಲಿ ಗಾಳಿಯಲ್ಲಿ ಗುಂಡುಹೊಡೆದು ಸಂಭ್ರಮಿಸಿದ್ದಾರೆ. ಆದರೆ ತಾಲಿಬಾನಿಗ ಸಂಭ್ರಮ ಅನೇಕರ ಪ್ರಾಣ ತೆಗೆದಿದೆ. ಅದೆಷ್ಟೋ ಜನರು ಗಾಯಗೊಂಡಿದ್ದಾರೆ. ಈ ಫೋಟೊ, ವಿಡಿಯೋಗಳು ಸಿಕ್ಕಾಪಟೆ ವೈರಲ್​ ಆಗಿವೆ.

ಅಲ್ಲಾನ ಕೃಪೆಯಿಂದ ನಾವೀಗ ಇಡೀ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದೇವೆ. ಪಂಜಶಿರ್​ ಪ್ರದೇಶ ಒಂದು ನಮಗೆ ಸಿಕ್ಕಿರಲಿಲ್ಲ. ಇದೀಗ ಆ ತೊಂದರೆಯೂ ದೂರವಾಯಿತು. ಪಂಜಶಿರ್​ ವ್ಯಾಲಿ ಕೂಡ ನಮ್ಮದಾಯಿತು ಎಂದು ತಾಲಿಬಾನ್​ ಕಮಾಂಡರ್​ ಒಬ್ಬ ರಾಯಿಟರ್ಸ್​ ಬಳಿ ಹೇಳಿದ್ದಾನೆ.  ಹಾಗೇ, ಪಂಜಶಿರ್ ಸ್ಥಳೀಯ ಸಂಘಟನೆಯ ನಾಯಕ ಅಹ್ಮದ್​ ಮಸೂದ್​ ಟ್ವೀಟ್​ ಮಾಡಿದ್ದು, ಪಂಜಶಿರ್​​ನ್ನು ತಾಲಿಬಾನಿಗಳು ವಶ ಪಡಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿದೆ. ಆದರೆ ಇದು ಸುಳ್ಳು. ಯಾವತ್ತು ಪಂಜಶಿರ್​ ತಾಲಿಬಾನಿಗಳ ಕೈವಶ ಆಗುತ್ತದೆಯೋ ಅಂದು ನನ್ನ ಜೀವವೂ ಇರುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ‘ಆ ಸಿದ್ದಾರ್ಥ್​ ಬದಲು ಈ ಸಿದ್ದಾರ್ಥ್​ ಸಾಯಬೇಕಿತ್ತು’ ಎಂದು ದ್ವೇಷಕಾರಿದ ನೆಟ್ಟಿಗರು; ನಟನ ಪ್ರತಿಕ್ರಿಯೆ ಏನು?

Rohit Sharma: ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ-ಉಮೇಶ್ ಯಾದವ್

Published On - 9:07 am, Sat, 4 September 21