ರ್ಯಾಂಕ್ ಸ್ಟೂಡೆಂಟ್ ನವೀನ್ ನಮಗೋಸ್ಕರ ದಿನಸಿ ತರೋಕೆ ಹೋಗಿದ್ದರು; ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿನಿ ಮಾಹಿತಿ
ನವೀನ್ ನನ್ನ ಸೀನಿಯರ್, ಅಲ್ಲಿನ ರ್ಯಾಂಕ್ ಸ್ಟೂಡೆಂಟ್. ಅವರು ನಮಗೆ ಏನು ಓದಬೇಕು, ಹೇಗೆ ಇರಬೇಕು ಅಂತ ಹೇಳಿಕೊಡುತ್ತಿದ್ದರು. ಸರ್ಕಾರ ಮುಂದೆ ಭಾರತದಲ್ಲೇ ನಮಗೆ ಒಂದು ವ್ಯವಸ್ಥೆ ಮಾಡಲಿ.
ಮಂಗಳೂರು: ಉಕ್ರೇನ್ನ (Ukraine) ಖಾರ್ಕೀವ್ನಿಂದ ವಾಪಸ್ ಆದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಉಜಿರೆಯ ಹೀನಾ ಫಾತಿಮಾ, ನಾವು ಖಾರ್ಕೀವ್ನಿಂದ ಗಡಿ ಭಾಗಕ್ಕೆ ಬರುವಾಗ ತುಂಬಾ ಕಷ್ಟ ಆಗಿತ್ತು. ರೈಲಿನಲ್ಲಿ ಫುಲ್ ರಶ್ನಲ್ಲಿ 24 ಗಂಟೆ ಪ್ರಯಾಣಿಸಿ ನಾವು ಗಡಿ ತಲುಪಿದೆವು. ರೈಲಿನಲ್ಲಿ ಮೊದಲು ಉಕ್ರೇನಿಯನರಿಗೆ ಅವಕಾಶ ನೀಡಿದ್ದರು. ಮತ್ತೆ ಹುಡುಗಿಯರಿಗೆ ಅವಕಾಶ ನೀಡಿದ್ದರು. ನಾವು ಬಾಂಬ್ ಸ್ಫೋಟವಾಗುವುದನ್ನು ನೋಡಿದ್ದೇವೆ. ನಮ್ಮ ಸ್ಥಳದಲ್ಲೇ ಆಗುತ್ತಿತ್ತು. ಖಾರ್ಕೀವ್ನ ಫ್ಲಾಟ್ನಲ್ಲಿ ಇದ್ದಿದ್ದು, ಶಬ್ದ ಕೇಳಿದಾಗೆಲ್ಲಾ ಬಂಕರ್ ಕೆಳಗೆ ಹೋಗುತ್ತಿದ್ದೆವು. ಭಾರತೀಯ ರಾಯಭಾರಿ ಕಚೇರಿ ಮೊದಲೇ ಸ್ಥಳಾಂತರಕ್ಕೆ ನಮಗೆ ಸೂಚಿಸಿತ್ತು. ಆದರೆ ಕಾಲೇಜಿನವರು 50-50 ಪರ್ಸೆಂಟ್ ಇದ್ರು, ಹೋಗೋರು ಹೋಗಿ ಅಂದ್ರು. ಇದ್ದವರಿಗೆ ಆಫ್ ಲೈನ್, ಹೋದವರಿಗೆ ಆಫ್ ಲೈನ್ ಕ್ಲಾಸ್ ಮಾಡುತ್ತೇವೆ ಅಂದಿದ್ರು. ಹೀಗಾಗಿ ನಾವು ವಾರ್ ಆಗಲ್ಲ ಅಂತ ಅಲ್ಲೇ ಉಳಿದೆವು. ಕೊನೇ ಕ್ಷಣದಲ್ಲಿ ವಾರ್ ಅಂತ ಆದ ಬೆನ್ನಲ್ಲೇ ನಾವಿದ್ದ ಜಾಗದಲ್ಲಿ ಬಾಂಬಿಂಗ್, ಶೆಲ್ಲಿಂಗ್ ಆಗಿದೆ ಎಂದರು.
ನವೀನ್ ನನ್ನ ಸೀನಿಯರ್, ಅಲ್ಲಿನ ರ್ಯಾಂಕ್ ಸ್ಟೂಡೆಂಟ್. ಅವರು ನಮಗೆ ಏನು ಓದಬೇಕು, ಹೇಗೆ ಇರಬೇಕು ಅಂತ ಹೇಳಿಕೊಡುತ್ತಿದ್ದರು. ಸರ್ಕಾರ ಮುಂದೆ ಭಾರತದಲ್ಲೇ ನಮಗೆ ಒಂದು ವ್ಯವಸ್ಥೆ ಮಾಡಲಿ. ಉಕ್ರೇನ್ನಿಂದ ಬಂದವರಿಗೆ ಒಂದು ಸಂಸ್ಥೆ ಮಾಡಿ ಶಿಕ್ಷಣಕ್ಕೆ ನೆರವಾಗಲಿ. ಇಲ್ಲವಾದರೆ ಅಲ್ಲೇ ಭವಿಷ್ಯದಲ್ಲಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಉತ್ತಮ. ಪೋಲೆಂಡ್ ಬಾರ್ಡರ್ನಲ್ಲಿ ಸಾಕಷ್ಟು ಸ್ವಯಂ ಸೇವಕರು ಇದ್ರು. ಅವರು ನಮಗೆ ಧೈರ್ಯ ಹೇಳಿದ್ದರು. ಖುಷಿಯಾಗಿತ್ತು. ನಾವು ಲೀವ್ ತಲುಪಿ ಟ್ಯಾಕ್ಸಿಯಲ್ಲಿ ಹೋಗಿ ಒಂದು ಕಿ.ಮೀ ನಡೆದು ಪೋಲೆಂಡ್ ತಲುಪಿದೆವು. ಭಾರತೀಯ ರಾಯಭಾರ ಕಚೇರಿ ತುಂಬಾ ಸಹಾಯ ಮಾಡಿದೆ. ನಾನು ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಅವರಿಗೆ ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ ಅಂತ ಹೀನಾ ಫಾತಿಮಾ ತಿಳಿಸಿದರು.
ಇದನ್ನೂ ಓದಿ
ಚೀನಾ ಲೋನ್ ಆ್ಯಪ್ಗಳ ಕಾರ್ಯವೈಖರಿ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೇಂದ್ರ ಸರ್ಕಾರ ಸೂಚನೆ