ಚೀನಾ ಲೋನ್ ಆ್ಯಪ್ಗಳ ಕಾರ್ಯವೈಖರಿ ಪರಿಶೀಲಿಸಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೇಂದ್ರ ಸರ್ಕಾರ ಸೂಚನೆ
Chinese Micor Loan Apps: ಚೀನಾ ಮೂಲದ ಮೈಕ್ರೋ ಲೋಪ್ ಆ್ಯಪ್ಗಳ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ಬೆಂಗಳೂರು: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಚೀನಾದ ಲೋನ್ ಆ್ಯಪ್ (Chinese Loan App) ಕಂಪನಿಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ನಕಲಿ ನಿರ್ದೇಶಕರನ್ನು ನೇಮಿಸಿಕೊಂಡು ಜನರಿಗೆ ಸಾಲ ಕೊಟ್ಟು ಟಾರ್ಚರ್ ಕೊಡುತ್ತಿದ್ದರು ಎಂದು ದೂರಲಾಗಿದೆ. ಚೀನಾ ಮೂಲದ ಮೈಕ್ರೋ ಲೋಪ್ ಆ್ಯಪ್ಗಳ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (Union Corporate Affairs Ministry) ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚನೆ ನೀಡಿದೆ. ಭಾರತದಲ್ಲಿ ನಕಲಿ ನಿರ್ದೇಶಕರು ಮತ್ತು ಚಂದಾದಾರರನ್ನು ನೇಮಿಸಿಕೊಂಡು ಈ ಕಂಪನಿಗಳು ವ್ಯವಹಾರ ನಡೆಸುತ್ತಿವೆ. ಆದರೆ ಬಹುತೇಕ ವ್ಯವಹಾರ ಚೀನಾದ ನಾಗರಿಕರು ಮತ್ತು ಚೀನಿ ಕಂಪನಿಗಳ ಪರವಾಗಿಯೇ ನಡೆಯುತ್ತಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವಿಸ್ತೃತ ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತದಲ್ಲಿ ಅಪರಾಧಿಕ ವ್ಯವಹಾರ ನಡೆಸುವ ಸಲುವಾಗಿಯೇ ಕಂಪನಿಯನ್ನು ನೋಂದಾಯಿಸಲಾಗಿದೆ. ಭದ್ರತೆಯೇ ಇಲ್ಲದೆ ಈ ಕಂಪನಿಗಳು ಆ್ಯಪ್ಗಳ ಮೂಲಕ ಅಲ್ಪಾವಧಿ ಸಾಲ ನೀಡುತ್ತಿವೆ. ತುರ್ತಾಗಿ ಹಣ ಬೇಕಿರುವವರೇ ಈ ಆ್ಯಪ್ಗಳಿಗೆ ಮಿಕಗಳಾಗಿ ಬಲಿ ಬೀಳುತ್ತಿದ್ದಾರೆ. ಹಣದ ಅವಶ್ಯಕತೆ ಇರುವವರಿಂದ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ಹಾಗೂ ಬಡ್ಡಿ ವಸೂಲು ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಅನೈತಿಕ ರೀತಿಯಲ್ಲಿ ಸಾಲ ವಸೂಲಿ ಮಾಡುತ್ತಾ ಕಿರುಕುಳ ನೀಡುತ್ತಿದ್ದಾರೆ. ಕಂಪನಿ ಸಿಬ್ಬಂದಿಯ ಕೆವೈಸಿ ದಾಖಲೆಗಳನ್ನು ಪಡೆದುಕೊಂಡು ಅವರನ್ನೇ ನಿರ್ದೇಶಕರಾಗಿ ನೇಮಿಸಿ, ಹಿಂಬಾಗಿಲಿನಿಂದ ಈ ಕಂಪನಿಗಳು ಆಡಳಿತ ನಿರ್ವಹಿಸುತ್ತಿವೆ. ಈ ಪ್ರಕರಣದ ಪ್ರಮುಖ ಆರೋಪಿಗಳು ವಿದೇಶಿ ಪ್ರಜೆಗಳು. ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಹೇಳಿದೆ. ಸುಮಾರು 35 ಆ್ಯಪ್ಗಳ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೇಂದ್ರ ಅಪರಾಧ ದಳದ (Central Crime Branch – CCB) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಏಳು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
54 ಮೊಬೈಲ್ ಅ್ಯಪ್ ನಿಷೇಧ ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್ಗಳನ್ನು (54 Chinese Apps Ban) ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್ ಆ್ಯಪ್ಗಳ (Mobile Apps) ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 54 ಆ್ಯಪ್ಗಳನ್ನು ನಿಷೇಧಿಸಲಿದೆ. ಇದೀಗ ನಿಷೇಧಿಸಲ್ಪಟ್ಟ ಆ್ಯಪ್ಗಳಲ್ಲಿ, ಬ್ಯೂಟಿ ಕ್ಯಾಮರಾ, ಸ್ವೀಟ್ ಸೆಲ್ಫೀ ಎಚ್ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್ (Equalizer & Bass Booster), ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಆ್ಯಪ್ಲಾಕ್, ಡ್ಯುಯೆಲ್ ಸ್ಪೇಸ್ ಲೈಟ್, Tencent Xriver, Onmyoji Chess, Onmyoji Arena ಗಳು ಕೂಡ ಸೇರಿವೆ.
ಈ ಮೇಲಿನ ಪ್ರಮುಖ ಆ್ಯಪ್ಗಳು ಸೇರಿ 54 ಚೀನಾದ ಮೊಬೈಲ್ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ಗಳಿಗೆ ಸೂಚನೆ ನೀಡಿದೆ. ಇವು ಭಾರತೀಯರ ಮಾಹಿತಿ ರಕ್ಷಣೆ ಸರಿಯಾಗಿ ಮಾಡುತ್ತಿಲ್ಲ. ಈ ಮೂಲಕ ಭಾರತೀಯರ ಭದ್ರತೆಗೆ ಧಕ್ಕೆ ತರುತ್ತಿವೆ. ಹಾಗಾಗಿ ಕೂಡಲ ಈ ಎಲ್ಲ ಆ್ಯಪ್ಗಳನ್ನೂ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ಕೇಂದ್ರ ಇಲಾಖೆ ಹೇಳಿದೆ.
2020ರಲ್ಲಿ ಪಬ್ ಜೀ, ಟಿಕ್ಟಾಕ್, ಶೇರ್ಇಟ್, ಹೀರೋಸ್ ವಾರ್, ಮೇಪೈ, ಏರ್ಬ್ರಷ್, ವಿ ಚಾಟ್, ಹೆಲೋ, ಲೈಕೀ, ಯುಸಿ ನ್ಯೂಸ್, ಸ್ನ್ಯಾಕ್ ವಿಡಿಯೋ, ಅಲಿ ಎಕ್ಸ್ಪ್ರೆಸ್, ಅಲಿ ಪೇ ಕ್ಯಾಷಿಯರ್ ಸೇರಿ ಒಟ್ಟು 118 ಆ್ಯಪ್ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿತ್ತು. 2020ರ ಜುಲೈನಿಂದ ಸೆಪ್ಟೆಂಬರ್ವರೆಗೆ ಹಂತಹಂತವಾಗಿ ಚೀನಾದ ಹಲವು ಮೊಬೈಲ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಪಬ್ ಜಿ ಮತ್ತು ಟಿಕ್ಟಾಕ್ ಆ್ಯಪ್ಗಳನ್ನು ನಿಷೇಧಿಸಿದಾಗ ಭಾರತದ ಬಳಕೆದಾರರಿಗೆ ಸ್ವಲ್ಪ ನಿರಾಸೆಯಾಯಿತಾದರೂ ಚಿನಾದ ಮೇಲಿನ ದ್ವೇಷದಿಂದಾಗಿ ಯಾರೂ ವಿರೋಧ ವ್ಯಕ್ತಪಡಿಸಿಲಿಲ್ಲ. ಆದರೆ ಭಾರತದಲ್ಲಿ ತಮ್ಮ ದೇಶದ ಆ್ಯಪ್ಗಳನ್ನು ಬ್ಯಾನ್ ಮಾಡಿದ್ದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ನಿಷೇಧದ ಮೂಲಕ ಭಾರತ ಹೂಡಿಕೆದಾರರ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿತ್ತು.
2020ರ ಜೂನ್ 15-16ರಂದು ಗಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಯೋಧರ ನಡುವೆ ಸಂಘರ್ಷ ನಡೆದು, ಭಾರತ ಸೇನೆಯ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಇದು ಚೀನಾ ದ ಪೀಪಲ್ಸ್ ಲಿಬರೇಶನ್ ಆರ್ಮಿ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಆಕ್ರಮಣವಾಗಿತ್ತು. ಅದಾದ ಮೇಲೆ ಗಡಿಯಲ್ಲಿ ಅದರ ಉಪಟಳ ನಿರಂತರವಾಗಿ ಮುಂದುವರಿದಿದೆ. ಹೀಗೆ ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಭಾರತ ಚೀನಾ ವಿರುದ್ಧ ಡಿಜಿಟಲ್ ಸಮರವನ್ನು ಮುಂದುವರಿಸಿದೆ. ಇಲ್ಲಿಯವರೆಗೆ ಚೀನಾದ 220ಕ್ಕೂ ಅಧಿಕ ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಿದೆ.
ಇದನ್ನೂ ಓದಿ: SBI home loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರ ಕಡಿತ, ಪ್ರೊಸೆಸಿಂಗ್ ಫೀ ಮನ್ನಾ
ಇದನ್ನೂ ಓದಿ: Two Wheeler Loan: ದ್ವಿಚಕ್ರ ವಾಹನ ಸಾಲಕ್ಕೆ ಯಾವ ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿ ದರ? ಇಲ್ಲಿದೆ ಇಎಂಐ ಮತ್ತಿತರ ವಿವರ