SBI home loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರ ಕಡಿತ, ಪ್ರೊಸೆಸಿಂಗ್ ಫೀ ಮನ್ನಾ

ಹಬ್ಬದ ಸಂದರ್ಭಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಗೃಹ ಸಾಲ ಬಡ್ಡಿ ದರ ಕಡಿಮೆ ಮಾಡಲಾಗಿದೆ. ಅಷ್ಟೇ ಅಲ್ಲ, ಪ್ರೊಸೆಸಿಂಗ್ ಫೀ ಸಂಪೂರ್ಣ ಮನ್ನಾ ಮಾಡಲಾಗಿದೆ.

SBI home loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲ ಬಡ್ಡಿ ದರ ಕಡಿತ, ಪ್ರೊಸೆಸಿಂಗ್ ಫೀ ಮನ್ನಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 16, 2021 | 6:29 PM

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಗೃಹ ಸಾಲ ಪಡೆಯುವವರಿಗೆ ಹಬ್ಬದ ಪ್ರಯುಕ್ತ ಆಫರ್ ನೀಡಲಾಗಿದೆ. ಕೈಗೆಟುಕುವ ದರದಲ್ಲಿ ಗೃಹ ಸಾಲ ದೊರೆಯಬೇಕು ಎಂದು ಈ ಆಫರ್​ ನೀಡಲಾಗುತ್ತಿದೆ. ಕ್ರೆಡಿಟ್ ಸ್ಕೋರ್​ ಆಧಾರಿತ ಹೋಮ್​ ಲೋನ್ ಅನ್ನು ಕೇವಲ ಶೇಕಡಾ 6.70ಗೆ ನೀಡಲು ನಿರ್ಧರಿಸಲಾಗಿದೆ. ಯಾವುದೇ ಸಾಲದ ಮೊತ್ತಕ್ಕೆ ಇದೇ ಬಡ್ಡಿ ದರಕ್ಕೆ ಕೊಡಲಾಗುತ್ತದೆ. ಈ ಹಿಂದೆ 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ 7.15ರ ಬಡ್ಡಿ ದರ ಇದೆ. ಹಬ್ಬದ ಆಫರ್ ಪರಿಚಯದೊಂದಿಗೆ ಸಾಲಗಾರರು ಯಾವುದೇ ಮೊತ್ತವನ್ನು ಶೇ 6.70 ಬಡ್ಡಿ ದರಕ್ಕೆ ಪಡೆಯಬಹುದು. ಈ ಆಫರ್​ನೊಂದಿಗೆ 45 ಬಿಪಿಎಸ್​ ಉಳಿತಾಯ ಆಗುತ್ತದೆ. ಇದರಿಂದ ದೊಡ್ಡ ಮೊತ್ತದ ಉಳಿತಾಯ ಆಗುತ್ತದೆ. 30 ವರ್ಷದ ಅವಧಿಗೆ 75 ಲಕ್ಷ ರೂಪಾಯಿಯ ಸಾಲ ಪಡೆದಲ್ಲಿ 8 ಲಕ್ಷ ರೂಪಾಯಿಗೂ ಹೆಚ್ಚು ಉಳಿತಾಯ ಆಗುತ್ತದೆ.

ಇನ್ನು ಸಾಲ ಪಡೆಯುವ ಅರ್ಜಿದಾರರಿಗೆ ಈ ಮೊದಲು ಹೇಗಿತ್ತು ಅಂದರೆ, ವೇತನದಾರರಾದರೆ ಒಂದು ಬಡ್ಡಿ ದರ ಹಾಗೂ ಸ್ವ ಉದ್ಯೋಗಿಗಳಾದರೆ ಮತ್ತೊಂದು ಎಂಬಂತೆ ಇತ್ತು. ವೇತನ ಪಡೆಯುವ ಅರ್ಜಿದಾರರಿಗೆ ವಿಧಿಸುವುದಕ್ಕಿಂತ ಸ್ವ ಉದ್ಯೋಗಿಗಳಿಗೆ 15 ಬಿಪಿಎಸ್​ ಹೆಚ್ಚಿನ ಬಡ್ಡಿ ಹಾಕಲಾಗುತ್ತಿತ್ತು. ಆದರೆ ಈಗ ಬಡ್ಡಿ ದರದಲ್ಲಿ ಆ ವ್ಯತ್ಯಾಸ ಇರುವುದಿಲ್ಲ. ಉದ್ಯೋಗಕ್ಕೆ ಸಂಬಂಧಿಸಿದಂತೆ ಹೋಮ್​ಲೋನ್​ಗೆ ಬಡ್ಡಿ ದರ ಹಾಕುವುದು ಇನ್ನು ಮುಂದೆ ಇರುವುದಿಲ್ಲ. ಇದರಿಂದಾಗಿ ವೇತನದ ಹೊರತಾದ ಆದಾಯ ಮಾತ್ರ ಇರುವ ಗೃಹ ಸಾಲ ಪಡೆಯುವಂಥವರಿಗೆ 15 ಬಿಪಿಎಸ್​ ಬಡ್ಡಿ ಇನ್ನಷ್ಟು ಕಡಿಮೆ ಆಗುತ್ತದೆ.

ಹಬ್ಬಗಳನ್ನು ಸ್ವಾಗತಿಸುವುದಕ್ಕೆ ಮತ್ತು ಮಾರುಕಟ್ಟೆ ಭಾವನೆಗಳನ್ನು ಉತ್ತೇಜಿಸುವುದಕ್ಕೆ ಎಸ್​ಬಿಐನಿಂದ ಪ್ರೊಸೆಸಿಂಗ್ ಫೀ ಸಂಪೂರ್ಣ ಮನ್ನಾ ಮಾಡಲಾಗಿದೆ. ಸಾಲ ಪಡೆಯುವವರ ಕ್ರೆಡಿಟ್ ಸ್ಕೋರ್ ಆಧಾರದಲ್ಲಿ ಬಡ್ಡಿ ದರದ ವಿನಾಯಿತಿ ಸಿಗುತ್ತದೆ. “ನಮ್ಮ ಗೃಹ ಸಾಲ ಗ್ರಾಹಕರಿಗೆ ಹಬ್ಬದ ಆಫರ್ ಆರಂಭಿಸಲು ಸಂತೋಷಿಸುತ್ತೇವೆ. ಸಾಮಾನ್ಯವಾಗಿ ವಿನಾಯಿತಿ ಬಡ್ಡಿ ದರವು ಕೆಲ ಮಿತಿಯನ್ನು ಹೊಂದಿರುತ್ತದೆ ಮತ್ತು ಸಾಲ ಪಡೆಯುವವರ ವೃತ್ತಿಗೆ ಸಂಬಂಧಿಸಿರುತ್ತದೆ. ಬಾಕಿ ವರ್ಗಾವಣೆಯ ಪ್ರಕರಣದಲ್ಲೂ ಶೇ 6.70 ದರ ಅನ್ವಯ ಆಗುತ್ತದೆ. ಶೂನ್ಯ ಪ್ರೊಸೆಸಿಂಗ್ ಶುಲ್ಕ ಮತ್ತು ವಿನಾಯಿತಿ ಬಡ್ಡಿ ದರವು ಹಬ್ಬದ ಋತುವಿನಲ್ಲಿ ಮನೆ ಖರೀದಿಸುವವರಿಗೆ ಕೈಗೆಟುಕುವಂತೆ ಆಗುತ್ತದೆ,” ಎಂದು ಬ್ಯಾಂಕ್​ನ ಕಾರ್ಯ ನಿರ್ವಾಹಕ ನಿರ್ದೇಶಕ (ರೀಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ಸಿ.ಎಸ್​.ಶೆಟ್ಟಿ ಹೇಳಿದ್ದಾರೆ.

ಆಸ್ತಿ, ಠೇವಣಿ, ಶಾಖೆಗಳು, ಗ್ರಾಹಕರು ಮತ್ತು ಸಿಬ್ಬಂದಿ ಸಂಖ್ಯೆ ಹೀಗೆ ಎಲ್ಲ ಬಗೆಯಲ್ಲೂ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್. ಜತೆಗೆ ಅತಿದೊಡ್ಡ ಸಾಲ ನೀಡುವ ಸಂಸ್ಥೆ ಇದು. ಈ ತನಕ 30 ಲಕ್ಷ ಭಾರತೀಯ ಕುಟುಂಬಗಳ ಭಾರತೀಯರ ಕನಸನ್ನು ನನಸು ಮಾಡಿದೆ. ಗೃಹ ಸಾಲದ ಪೋರ್ಟ್​ಫೋಲಿಯೋ 5 ಲಕ್ಷ ಕೋಟಿ ರೂಪಾಯಿ ದಾಟಿದೆ. ಜೂನ್​ 30, 2021ಕ್ಕೆ ಠೇವಣಿ 37 ಲಕ್ಷ ಕೋಟಿ ರೂಪಾಯಿ ಇತ್ತು. CASA ರೇಷಿಯೋ ಇದೆ ಮತ್ತು ಮುಂಗಡ 27 ಲಕ್ಷ ಕೋಟಿ ರೂಪಾಯಿ ಇದೆ. ಎಸ್​ಬಿಐ ಗೃಹ ಸಾಲ ಮಾರುಕಟ್ಟೆ ಪಾಲು ಶೇ 34.77 ಹಾಗೂ ವಾಹನ ಸಾಲ ಶೇ 31.11ರಷ್ಟಿದೆ.

ಇದನ್ನೂ ಓದಿ: SBI Debit Card: ಎಸ್​ಬಿಐ ಡೆಬಿಟ್​ ಕಾರ್ಡ್​ ಮೂಲಕ ಖರೀದಿಸಿದ್ದನ್ನು ಇಎಂಐ ಆಗಿ ಬದಲಿಸಿಕೊಳ್ಳೋದು ಹೇಗೆ?

(State Bank Of India Cut Home Loan Interest Rate And Waive Off Processing Fee Completely)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ