TCS Shares Buyback: ಮಾರ್ಚ್ 9ರಿಂದ 23ರ ಮಧ್ಯೆ 18 ಸಾವಿರ ಕೋಟಿ ರೂ. ಮೊತ್ತದ ಟಿಸಿಎಸ್ ಷೇರು ಮರುಖರೀದಿ
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ನಿಂದ ಷೇರು ಮರುಖರೀದಿ ಬಗ್ಗೆ ದಿನಾಂಕ ಘೋಷಣೆ ಮಾಡಲಾಗಿದೆ. ಮಾರ್ಚ್ 9ರಿಂದ 23ರ ಮಧ್ಯೆ ಈ ಆಫರ್ ಇರುತ್ತದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಮಾರ್ಚ್ 5ನೇ ತಾರೀಕಿನ ಶನಿವಾರದಂದು ರೂ. 18,000 ಕೋಟಿಯ ಷೇರು ಮರುಖರೀದಿ ಆಫರ್ ದಿನಾಂಕಗಳನ್ನು ಬಿಡುಗಡೆ ಮಾಡಿದ್ದು, ಇದನ್ನು ಈ ವರ್ಷದ ಜನವರಿಯಲ್ಲಿ ಘೋಷಿಸಲಾಯಿತು. ಈ ಆಫರ್ ಮಾರ್ಚ್ 9ರಂದು ತೆರೆಯಲಿದ್ದು, ಮಾರ್ಚ್ 23ರಂದು ಸಂಜೆ 5 ಗಂಟೆಗೆ ಮುಕ್ತಾಯ ಆಗುತ್ತದೆ ಎಂದು ಅದು ಹೇಳಿದೆ. ಮರುಖರೀದಿ ಅರ್ಹತೆಯ ವಿವರಗಳನ್ನು ಹಂಚಿಕೊಂಡಿರುವ ಟಿಸಿಎಸ್, ಸಣ್ಣ ಷೇರುದಾರರಿಗೆ ಕಾಯ್ದಿರಿಸಿದ ವರ್ಗದಲ್ಲಿ ಮರುಖರೀದಿಯ ಅನುಪಾತವು “ದಾಖಲೆಯ ದಿನಾಂಕದಂದು ಹೊಂದಿರುವ ಪ್ರತಿ 7 ಈಕ್ವಿಟಿ ಷೇರುಗಳಿಗೆ 1 ಈಕ್ವಿಟಿ ಷೇರು” ಆಗಿರುತ್ತದೆ ಎಂದು ಹೇಳಿದೆ. ಎಲ್ಲ ಇತರ ಅರ್ಹ ಷೇರುದಾರರಿಗೆ ಸಾಮಾನ್ಯ ವರ್ಗದಲ್ಲಿ ಮರುಖರೀದಿ ಅನುಪಾತವು “ರೆಕಾರ್ಡ್ ದಿನಾಂಕದಂದು ಹೊಂದಿರುವ ಪ್ರತಿ 108 ಈಕ್ವಿಟಿ ಷೇರುಗಳಿಗೆ 1 ಈಕ್ವಿಟಿ ಷೇರು” ಆಗಿರುತ್ತದೆ.
ಇಲ್ಲಿ ಗಮನಿಸಿದ ಬೇಕಾದ ಸಂಗತಿ ಏನೆಂದರೆ, ಇದು ಟಿಸಿಎಸ್ನ ನಾಲ್ಕನೇ ಮರುಖರೀದಿ ಆಗಲಿದೆ ಮತ್ತು ಹಿಂದಿನ ಮೂರು ಮರುಖರೀದಿಗಳಲ್ಲಿ ಟಾಟಾ ಸನ್ಸ್ ಅತಿ ದೊಡ್ಡ ಫಲಾನುಭವಿಯಾಗಿತ್ತು. 2021ರಲ್ಲಿ ಟಿಸಿಎಸ್ ಒಂದು ಷೇರಿಗೆ ರೂ. 3,000ರಂತೆ 53 ಮಿಲಿಯನ್ ಷೇರುಗಳನ್ನು ಮರಳಿ ಖರೀದಿಸಿತು ಮತ್ತು 33.33 ಮಿಲಿಯನ್ ಷೇರುಗಳನ್ನು ಆಫರ್ ಅಡಿಯಲ್ಲಿ ಸ್ವೀಕರಿಸಲಾಯಿತು. 2017 ಮತ್ತು 2018ರಲ್ಲಿಯೂ ಇದು ಎರಡು ಮರುಖರೀದಿಗಳನ್ನು ಕೈಗೊಂಡಿತು. ಆ ಗಾತ್ರವು ಸುಮಾರು ತಲಾ 16,000 ಕೋಟಿ ರೂಪಾಯಿ ಆಗಿತ್ತು. 2021ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಟಿಸಿಎಸ್ ನಗದು ಮತ್ತು ನಗದಿಗೆ ಸಮಾನವಾದದ್ದು 51,950 ಕೋಟಿ ರೂಪಾಯಿಗಳಷ್ಟನ್ನು ಹೊಂದಿದೆ.
ಏರ್ ಇಂಡಿಯಾವನ್ನು ಟಾಟಾ ಸನ್ಸ್ ಸರ್ಕಾರದಿಂದ 18,000 ಕೋಟಿ ರೂಪಾಯಿಗೆ ಖರೀದಿಸಿದ ನಂತರ ಇತ್ತೀಚಿನ ನಡೆಯು ತೆಗೆದುಕೊಳ್ಳಲಾಗಿದೆ. ಸಂಸ್ಥೆಯು 2,700 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಲಿದೆ ಮತ್ತು ಉಳಿದವು ಸಾಲವನ್ನು ಪಾವತಿಸಲು ಹೋಗುತ್ತದೆ. ಟಾಟಾ ಸನ್ಸ್ ಪ್ರಸ್ತುತ ಟಿಸಿಎಸ್ನಲ್ಲಿ ಶೇ 72ರಷ್ಟು ಪಾಲನ್ನು ಹೊಂದಿದೆ. 2021ರ ಸೆಪ್ಟೆಂಬರ್ನಲ್ಲಿ ಇನ್ಫೋಸಿಸ್ ರೂ. 9,200 ಕೋಟಿಗಳ ಮರುಖರೀದಿಯನ್ನು ಘೋಷಿಸಿತು. ಆದರೆ 2021ರ ಜನವರಿಯಲ್ಲಿ ವಿಪ್ರೋ ರೂ. 9,500 ಕೋಟಿಗಳ ಮರುಖರೀದಿಯನ್ನು ಮಾಡಿತು. 2018ರಲ್ಲಿ ಎಚ್ಸಿಎಲ್ ಟೆಕ್ 4000 ಕೋಟಿ ರೂಪಾಯಿ ಮರುಖರೀದಿ ಕೈಗೊಂಡಿತ್ತು.
ಷೇರು ಮರುಖರೀದಿಗಳು ಸಾಮಾನ್ಯವಾಗಿ ಪ್ರತಿ ಷೇರಿನ ಗಳಿಕೆಯನ್ನು ಸುಧಾರಿಸುತ್ತದೆ. ಮತ್ತು ಷೇರುದಾರರಿಗೆ ಹೆಚ್ಚುವರಿ ಹಣವನ್ನು ಹಿಂತಿರುಗಿಸುತ್ತದೆ. ಜತೆಗೆ ನಿಧಾನಗತಿ ಮಾರುಕಟ್ಟೆ ಪರಿಸ್ಥಿತಿಗಳಲ್ಲಿ ಸ್ಟಾಕ್ ಅನ್ನು ಬೆಂಬಲಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಇದನ್ನೂ ಓದಿ: Tata Consultancy Services: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆಗೆ ಒಪ್ಪಂದ ವಿಸ್ತರಣೆ ಮಾಡಿಕೊಂಡ ಟಿಸಿಎಸ್