Tata Consultancy Services: ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾದ ಜತೆಗೆ ಒಪ್ಪಂದ ವಿಸ್ತರಣೆ ಮಾಡಿಕೊಂಡ ಟಿಸಿಎಸ್​

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದ ಜತೆಗಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಒಪ್ಪಂದವು ಐದು ವರ್ಷಗಳ ಅವಧಿಗೆ ವಿಸ್ತರಣೆ ಆಗಿದೆ ಎಂದು ಕಂಪೆನಿಯು ತಿಳಿಸಿದೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಟಿಸಿಎಸ್​ನಿಂದ ಎಸ್​ಬಿಐಗೆ ಸೇವೆ ಒದಗಿಸಲಾಗುತ್ತಿದೆ.

Tata Consultancy Services: ಸ್ಟೇಟ್ ಬ್ಯಾಂಕ್​ ಆಫ್​ ಇಂಡಿಯಾದ ಜತೆಗೆ ಒಪ್ಪಂದ ವಿಸ್ತರಣೆ ಮಾಡಿಕೊಂಡ ಟಿಸಿಎಸ್​
ಟಿಸಿಎಸ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Srinivas Mata

Updated on: Oct 06, 2021 | 1:57 PM

ಮಾಹಿತಿ ತಂತ್ರಜ್ಞಾನ ಸೇವೆ (Information Technology Service) ಒದಗಿಸುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್​) ಬುಧವಾರದಂದು ಘೋಷಣೆ ಮಾಡಿರುವ ಪ್ರಕಾರ, ಭಾರತದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಜತೆಗಿನ ಸಹಭಾಗಿತ್ವವನ್ನು ಆವಿಷ್ಕಾರ ಮತ್ತು ಟೆಕ್​ ಸಲ್ಯೂಷನ್ಸ್​ಗಾಗಿ ಇನ್ನೂ ಐದು ವರ್ಷಗಳ ಕಾಲ ವಿಸ್ತರಣೆ ಮಾಡಿದೆ. hಒಸ ಒಪ್ಪಂದದ ಪ್ರಕಾರ, ಎಸ್​ಬಿಐನ ಕೋರ್​ ಬ್ಯಾಂಕಿಂಗ್, ವ್ಯಾಪಾರ ಹಣಕಾಸು, ಹಣಕಾಸು ವರದಿ, ಹಣಕಾಸು ಒಳಗೊಳ್ಳುವಿಕೆ ಹೊಸ ವೈಶಿಷ್ಟ್ಯ ಮತ್ತು ಕಾರ್ಯ ನಿರ್ವಹಣೆಯೊಂದಿಗೆ ಬ್ಯಾಂಕ್​ನ ಅಪ್ಲಿಕೇಷನ್​ನ ನಿರ್ವಹಣೆ ಮತ್ತು ವಿಸ್ತರಣೆಯನ್ನು ಮುಂದುವರಿಸುತ್ತದೆ. ಈ ಮೂಲಕವಾಗಿ ಹೊಸ ಆಫರಿಂಗ್ ಮತ್ತು ಉದ್ಯಮಕ್ಕೆ ಸ್ಪಂದನೆ ಹಾಗೂ ನಿಯಂತ್ರಕ ಬದಲಾವಣೆಗಳನ್ನು ಆರಂಭಿಸುವ ಬ್ಯಾಂಕ್​ನ ಸಾಮರ್ಥ್ಯಕ್ಕೆ ಬೆಂಬಲಿಸಿದಂತಾಗುತ್ತದೆ ಎಂದು ಫೈಲಿಂಗ್​ನಲ್ಲಿ ತಿಳಿಸಲಾಗಿದೆ.

ಎರಡು ದಶಕಗಳ ಸುದೀರ್ಘ ಸಂಬಂಧದ ಆಧಾರದಲ್ಲಿ ಈ ವಿಸ್ತೃತವಾದ ಸಹಭಾಗಿತ್ವವು ನಿರ್ಮಿಸಲಾಗಿದೆ. ಅದು TCS BaNCS ಕೋರ್​ ಬ್ಯಾಂಕಿಂಗ್​ ಸಲ್ಯೂಷನ್​ನೊಂದಿಗೆ 2001ರಲ್ಲಿ ಆರಂಭವಾಯಿತು. ಆ ಕಾಲಘಟ್ಟದಲ್ಲಿ ಅದು ಬಹಳ ದೊಡ್ಡ ಬದಲಾವಣೆಯ ಕಾರ್ಯಕ್ರಮ ಆಗಿತ್ತು ಎಂದು ಟಿಸಿಎಸ್​ ಹೇಳಿದೆ. ಇದರ ಜತೆಗೆ ದೊಡ್ಡ ಬದಲಾವಣೆ ಕಾರ್ಯಕ್ರಮಗಳಲ್ಲಿ ಎಸ್​ಬಿಐಗೆ ಟಿಸಿಎಸ್ ನೆರವಾಗಿದೆ. ಇತ್ತೀಚಿನ ಅಂಥ ಕಾರ್ಯಕ್ರಮಗಳ ಪೈಕಿ ಒಂದರಲ್ಲಿ ಟಿಸಿಎಸ್​ನಿಂದ ಭಾರತ್ ಕ್ರಾಫ್ಟ್​ ನಿರ್ಮಾಣಕ್ಕೆ ಸಹಾಯ ಮಾಡಲಾಗುತ್ತಿದೆ. ಇದು B2B (Business To Business) ಇ-ಕಾಮರ್ಸ್ ಪ್ಲಾಟ್​ಫಾರ್ಮ್. ಇದು ಎಂಎಸ್​ಎಂಇ (ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆ)ಗಳಿಗೆ ಮಾರ್ಕೆಟ್​ಪ್ಲೇಸ್​ನಂತೆ ಸೇವೆ ಒದಗಿಸುತ್ತದೆ. ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತ ಸರ್ಕಾರದ ಸಹಯೋಗದಲ್ಲಿ ಇದನ್ನು ಕೈಗೊಳ್ಳಲಾಗಿದೆ, ಎಂದು ಟಿಸಿಎಸ್​ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದಕ್ಕೂ ಮುನ್ನ, ಏಕಕಾಲಕ್ಕೆ ಐದು ಸಹವರ್ತಿ ಬ್ಯಾಂಕ್​ಗಳು ಹಾಗೂ ಭಾರತೀಯ ಮಹಿಳಾ ಬ್ಯಾಂಕ್ ವಿಲೀನಕ್ಕಾಗಿ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಜತೆ ಟಿಸಿಎಸ್ ಸಹಯೋಗ ವಹಿಸಿತ್ತು. 200 ಬಿಜಿನೆಸ್​ ಪ್ರೊಸೆಸ್​ಗಳು, 43 ಐ.ಟಿ. ಅಪ್ಲಿಕೇಷನ್​ಗಳು, 17,500 ಉತ್ಪನ್ನಗಳು ಮತ್ತು 5000 ಕೋಟಿ ಡೇಟಾಬೇಸ್​ ದಾಖಲೆಗಳು, ಮತ್ತು ಪರಿಣಾಮ ಬೀರುವ 7000 ಶಾಖೆಗಳ 50,000 ಟೆಲ್ಲರ್​ಗಳು ಇಂಟಿಗ್ರೇಟ್​ ಮಾಡುವುದರಲ್ಲಿ ಇಷ್ಟೆಲ್ಲ ಒಳಗೊಂಡಿತ್ತು. ಸೇವೆಗಳಿಗೆ ಯಾವುದೇ ಅಡೆತಡೆ ಆಗದಂತೆ ಕೇವಲ ಆರು ವಾರಗಳಲ್ಲಿ ಯೋಜನೆ ಮತ್ತು ಅನುಷ್ಠಾನವನ್ನು ಟಿಸಿಎಸ್​ ಪೂರ್ಣಗೊಳಿತ್ತು. ​

ಇದನ್ನೂ ಓದಿ: Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

Salary Hike: 2022ರಲ್ಲಿ ಎಷ್ಟು ಪರ್ಸೆಂಟ್ ವೇತನ ಹೆಚ್ಚಳ ನಿರೀಕ್ಷೆ ಮಾಡಬಹುದು? ಇಲ್ಲಿದೆ ಇಂಟೆರೆಸ್ಟಿಂಗ್ ಡೀಟೇಲ್ಸ್