Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ

ಭಾರತದ ಪ್ರಮುಖ ಐ.ಟಿ. ಕಂಪೆನಿಗಳಾದ ವಿಪ್ರೋ, ಇನ್ಫೋಸಿಸ್ ಹಾಗೂ ಟಿಸಿಎಸ್​ನಂಥ ಕಂಪೆನಿಗಳಿಂದ ಹೊಸದಾಗಿ ನೇಮಕ ಆದವರಿಗೆ ಶೇ 120ರಷ್ಟು ಸಂಬಳ ಏರಿಕೆ ಮಾಡಲಾಗುತ್ತಿದೆ.

Salary Hike: ಹೊಸ ಉದ್ಯೋಗಿಗಳಿಗೆ ಶೇ 120ರಷ್ಟು ವೇತನ ಹೆಚ್ಚಳಕ್ಕೆ ಟಿಸಿಎಸ್, ವಿಪ್ರೋ, ಇನ್ಫೋಸಿಸ್ ಯೋಜನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 17, 2021 | 8:40 PM

ಆರೋಗ್ಯ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೊವಿಡ್-19 ತಂದಿತು. ಜತೆಗೆ ಕಾರ್ಪೊರೇಟ್ ವಲಯಕ್ಕೂ ತೊಂದರೆಗಳು ಎದುರಾಯಿರು. ಕೊರೊನಾ ಸಮಯದಲ್ಲಿ ಕಂಪೆನಿಗಳು ತಮ್ಮ ಉದ್ಯೋಗಿಗಳನ್ನು ಗಣನೀಯವಾಗಿ ಕಡಿತಗೊಳಿಸಬೇಕಾಯಿತು. ಆದರೆ ಕಂಪೆನಿಗಳು ನೇಮಕಾತಿಗಾಗಿ, ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಜ್ಞಾನ (ಐ.ಟಿ.) ಕಂಪೆನಿಗಳ ನೇಮಕಾತಿಗೆ ಸಿದ್ಧವಾಗುತ್ತಿದ್ದಂತೆ ಎಲ್ಲವೂ ಬದಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಅನಿಶ್ಚಿತ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ನೇಮಕಾತಿ ಮಾಡಿಕೊಳ್ಳುವವರು ಕಾದುನೋಡುವ ತಂತ್ರ ಅಳವಡಿಸಿಕೊಂಡರು. ಕೊವಿಡ್ -19 ಸೋಂಕಿನ ಮೊದಲ ಅಲೆಯ ಗರಿಷ್ಠ ಹಂತ ತಲುಪುವ ಮುಂಚೆಯೇ ನೇಮಕಾತಿ ಶೇಕಡಾ 50ರಷ್ಟು ಇಳಿಮುಖವಾಗಿತ್ತು. ಲಾಕ್‌ಡೌನ್‌ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ (ವರ್ಕ್​ ಫ್ರಮ್​ ಹೋಮ್) ಮಾದರಿಯಿಂದ ಪ್ರತಿ ವಲಯದಲ್ಲೂ ತಾಂತ್ರಿಕ ಬದಲಾವಣೆ ಆಗಿರುವುದರಿಂದ ನೇಮಕಾತಿಯಲ್ಲಿ ಕೊವಿಡ್ ಮುಂಚಿನ ಸ್ಥಿತಿ ಮರಳುತ್ತಿದೆ.

ಐ.ಟಿ. ವೃತ್ತಿಪರರ ಬೇಡಿಕೆಯು ಶೇಕಡಾ 400ರಷ್ಟು ಬೆಳೆದಿದೆ ಎಂದು ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಕೊವಿಡ್-19 ಪರಿಣಾಮವನ್ನು ವಿಶ್ಲೇಷಿಸುವ ವರದಿಯಲ್ಲಿ ಜಾಬ್​ ಸರ್ಚ್ ಪೋರ್ಟಲ್ ಇನ್​ಡೀಡ್ ಇಂಡಿಯಾ ಹೇಳಿದೆ. ಜನವರಿ 2020 ಮತ್ತು ಫೆಬ್ರವರಿ 2021ರ ನಡುವೆ ಅಪ್ಲಿಕೇಷನ್ ಡೆವಲಪರ್, ಲೀಡ್ ಕನ್ಸಲ್ಟೆಂಟ್, ಸೇಲ್ಸ್‌ಫೋರ್ಸ್ ಡೆವಲಪರ್ ಮತ್ತು ಸೈಟ್ ರಿಲಯಬಿಲಿಟಿ ಎಂಜಿನಿಯರ್ ಸೇರಿದಂತೆ ಅನುಭವಿ ತಾಂತ್ರಿಕ ವೃತ್ತಿಪರರ ಬೇಡಿಕೆ ಶೇಕಡಾ 150ರಿಂದ 300ರಷ್ಟು ಹೆಚ್ಚಾಗಿದೆ. ತಮ್ಮ ಸಂಸ್ಥೆಗೆ ಸಿಬ್ಬಂದಿಯಾಗಿ ಹೊಸ ಪ್ರತಿಭೆಗಳನ್ನು ಸೇರಿಸುವುದರ ಹೊರತಾಗಿ ಕಂಪೆನಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಬಳವನ್ನು ನೀಡುತ್ತಿವೆ. ಇನ್​ಡೀಡ್ ಇಂಡಿಯಾ ವರದಿಯ ಪ್ರಕಾರ, ಐ.ಟಿ. ಕಂಪೆನಿಗಳು ಪೂರ್ಣ ಪ್ರಮಾಣದ ಸ್ಟಾಕ್ ಎಂಜಿನಿಯರ್‌ಗಳಿಗೆ ಶೇಕಡಾ 70ರಿಂದ 120ರಷ್ಟು ವೇತನ ಹೆಚ್ಚಾಗಿ ನೀಡುತ್ತಿವೆ. ಹಿಂದಿನ ವರ್ಷಗಳಲ್ಲಿ ಈ ಸಂಬಳ ಹೆಚ್ಚಳವು ಶೇಕಡಾ 20ರಿಂದ 30ರ ಮಧ್ಯೆ ಇತ್ತು.

ವೇತನ ಹೆಚ್ಚಳದ ಹೊರತಾಗಿ ಭಾರತೀಯ ಮಾಹಿತಿ ತಂತ್ರಜ್ಞಾನ ಪ್ರಮುಖ ಕಂಪೆನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್), ವಿಪ್ರೋ ಮತ್ತು ಇನ್ಫೋಸಿಸ್ ಭಾರತದಾದ್ಯಂತ ಆಕ್ರಮಣಕಾರಿಯಾಗಿ ನೇಮಕ ಮಾಡಲು ಯೋಜಿಸುತ್ತಿವೆ. ಟಿಸಿಎಸ್ ಇತ್ತೀಚೆಗೆ ಮಹಿಳೆಯರಿಗಾಗಿ ತನ್ನ ಅತಿದೊಡ್ಡ ನೇಮಕಾತಿ ಅಭಿಯಾನವನ್ನು ಆರಂಭಿಸಿತು. ವಿರಾಮದ ನಂತರ ಉದ್ಯೋಗ ಅವಕಾಶಗಳನ್ನು ಹುಡುಕುತ್ತಿರುವ ಮಹಿಳಾ ವೃತ್ತಿಪರರಿಗೆ ಈ ನೇಮಕಾತಿ ಎಂದು ಘೋಷಿಸಿತು. “ಪ್ರತಿಭೆ ಮತ್ತು ಸಾಮರ್ಥ್ಯವು ಯಾವಾಗಲೂ ಉಳಿಯುತ್ತದೆ, ಮತ್ತು ಪ್ರತಿಭಾವಂತ ಅನುಭವಿ ಮಹಿಳಾ ವೃತ್ತಿಪರರಿಗೆ ಸ್ಫೂರ್ತಿ ನೀಡಲು, ಮರುಶೋಧಿಸಲು ಮತ್ತು ತಮ್ಮನ್ನು ಗುರುತಿಸಿಕೊಳ್ಳಲು ಸವಾಲು ಹಾಕಲು ಇದು ಒಂದು ಅವಕಾಶವಾಗಿದೆ,” ಎಂದು ಟಿಸಿಎಸ್ ಹೇಳಿದೆ. ಇಡೀ ಐ.ಟಿ. ವಲಯದ ವೇತನ ಬಿಲ್ FY22ರಲ್ಲಿ 1.6-1.7 ಬಿಲಿಯನ್‌ ಡಾಲರ್​ಗಳಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಈ ಕಂಪೆನಿಯಲ್ಲಿ ಫಿಟ್​ ಆಗಿದ್ರೆ ಸಿಗುತ್ತೆ ಹೆಚ್ಚುವರಿ ವೇತನ ಹಾಗೂ 10 ಲಕ್ಷ ರೂ..!

Apple Company: ಆಪಲ್ ಕಂಪೆನಿಯ ಸಿಇಒ ಟಿಮ್​ ಕುಕ್ ಅಂತಿಮ ವೇತನ ಎಷ್ಟು ಸಾವಿರ ಕೋಟಿ ಗೊತ್ತೆ?

(India’s Major T Companies Like TCS Infosys Wipro Planning Salary Hike Of 120 Percent For New Recruits)

Published On - 8:38 pm, Fri, 17 September 21