TDS: ಬ್ಯಾಂಕ್​ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್​ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ

ಪರಿಶಿಷ್ಟ ಪಂಗಡದ ಅಡಿಯಲ್ಲಿ ಬರುವವರಿಗೆ ಬ್ಯಾಂಕ್​ ಠೇವಣಿ ಮೇಲೆ ಪಡೆಯುವ ಬಡ್ಡಿಗೆ ಟಿಡಿಎಸ್​ ಕಡಿತ ಮಾಡುವುದಿಲ್ಲ ಎಂದು ಕೇಂದ್ರದಿಂದ ಅಧಿಸೂಚನೆ ಹೊರಡಿಸಲಾಗಿದೆ.

TDS: ಬ್ಯಾಂಕ್​ ಠೇವಣಿ ಮೇಲೆ ಬರುವ ಬಡ್ಡಿಗೆ ಪರಿಶಿಷ್ಟ ಪಂಗಡವರಿಗೆ ಟಿಡಿಎಸ್​ ಕಡಿತವಿಲ್ಲ; ಕೇಂದ್ರದ ಅಧಿಸೂಚನೆ
ಪ್ರಾತಿನಿಧಿಕ ಚಿತ್ರ

ಕೇಂದ್ರ ಹಣಕಾಸು ಸಚಿವಾಲಯವು ಸೆಪ್ಟೆಂಬರ್​ 17ನೇ ತಾರೀಕಿನ ಶುಕ್ರವಾರದಂದು ಪ್ರಮುಖ ಘೋಷಣೆಯೊಂದನ್ನು ಮಾಡಿದೆ. ಅದರ ಪ್ರಕಾರ, ಶೆಡ್ಯೂಲ್ಡ್​ ಬ್ಯಾಂಕ್​ಗಳಲ್ಲಿ ಮಾಡಿರುವ ಠೇವಣಿ ಮೇಲೆ ಬಡ್ಡಿಯನ್ನು ಸ್ವೀಕರಿಸವವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಅಂಥವರಿಗೆ ಬ್ಯಾಂಕ್ ಠೇವಣಿ ಬಡ್ಡಿಯ ಮೇಲೆ ತೆರಿಗೆ ಕಡಿತವಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆ ಮೂಲಕವಾಗಿ ಮಾಹಿತಿಯನ್ನು ನೀಡಿದೆ.

“ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 197A (“ಕಾಯ್ದೆ”)ದ ಸಬ್​- ಸೆಕ್ಷನ್​(1F) ನಿಂದ ನೀಡಲಾದ ಅಧಿಕಾರವನ್ನು ಬಳಸಿರುವ ಕೇಂದ್ರ ಸರ್ಕಾರವು ಸೆಕ್ಷನ್ 194A ಅಡಿಯಲ್ಲಿ ಈ ಕೆಳಗಿನ ಪಾವತಿಗೆ ಯಾವುದೇ ತೆರಿಗೆ ಕಡಿತವನ್ನು ಮಾಡಲಾಗುವುದಿಲ್ಲ ಎಂದು ಸೂಚಿಸಿದೆ. ಕಾಯ್ದೆಯ ಪ್ರಕಾರ, ಸೆಕ್ಯೂರಿಟೀಸ್ ಮೇಲಿನ ಬಡ್ಡಿಯನ್ನು ಹೊರತುಪಡಿಸಿ, ಮುಖ್ಯವಾಗಿ ಬಡ್ಡಿಯ ಸ್ವರೂಪದ ಪಾವತಿಯನ್ನು ಶೆಡ್ಯೂಲ್ಡ್ ಬ್ಯಾಂಕ್ (ಇಲ್ಲಿ “ಪಾವತಿದಾರ” ನಂತರ) ಮಾಡಿರುವುದು ನಿರ್ದಿಷ್ಟ ಪ್ರದೇಶದಲ್ಲಿರುವ ಪರಿಶಿಷ್ಟ ಪಂಗಡದ (ಇಲ್ಲಿ “ಸ್ವೀಕರಿಸುವವರ” ನಂತರ) ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ವಾಸವಿರಲಿ ಎಂಬುದನ್ನು ಕಾಯ್ದೆಯ ಸೆಕ್ಷನ್ 10(26)ರಲ್ಲಿ ಉಲ್ಲೇಖಿಸಲಾಗಿದೆ,” ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಚಿವಾಲಯದ ಪ್ರಕಾರ, ಸ್ವೀಕರಿಸುವವರು ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಸದಸ್ಯರಾಗಿದ್ದಾರೆ ಎಂದು ಪಾವತಿಸುವವರಿಗೆ ಸಮಾಧಾನ ತಂದರೆ ಮಾತ್ರ ಸಡಿಲಿಕೆ ಅನ್ವಯವಾಗುತ್ತದೆ. ಅಲ್ಲದೆ, ಪಾವತಿಸುವವರು ಮೇಲಿನ ಕಡಿತವನ್ನು ತೆರಿಗೆ ಕಡಿತದ ಹೇಳಿಕೆಗಳಲ್ಲಿ ವರದಿ ಮಾಡಿದರೆ-ಕಾಯ್ದೆಯ ಸೆಕ್ಷನ್ 200ರ ಸಬ್-ಸೆಕ್ಷನ್ (3)ರ ಅಡಿಯಲ್ಲಿ-ನಂತರ ಸಡಿಲಿಕೆ ನೀಡಲಾಗುತ್ತದೆ. ಹಿಂದಿನ ವರ್ಷದಲ್ಲಿ ಮಾಡಿದ ಪಾವತಿ ಅಥವಾ ಒಟ್ಟು ಮೊತ್ತವು ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮೀರಬಾರದು ಎಂಬುದು ಅತ್ಯಂತ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ: GST: ಸದ್ಯ ಪೆಟ್ರೋಲ್ ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ತರುವುದಿಲ್ಲ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

(No TDS Deduction On Bank Deposits Who Comes Under Category Of Scheduled Tribe )

Read Full Article

Click on your DTH Provider to Add TV9 Kannada