Apple Company: ಆಪಲ್ ಕಂಪೆನಿಯ ಸಿಇಒ ಟಿಮ್​ ಕುಕ್ ಅಂತಿಮ ವೇತನ ಎಷ್ಟು ಸಾವಿರ ಕೋಟಿ ಗೊತ್ತೆ?

ಆಪಲ್ ಇಂಕ್ ಸಿಇಒ ಟಿಮ್ ಕುಕ್ ಅಂತಿಮ ವೇತನ ಭಾರತದ ರೂಪಾಯಿ ಲೆಕ್ಕದಲ್ಲಿ 5500 ಕೋಟಿ ಬಂದಿದೆ. ಆ ಬಗೆಗಿನ ಲೆಕ್ಕಾಚಾರ ಇಲ್ಲಿದೆ.

Apple Company: ಆಪಲ್ ಕಂಪೆನಿಯ ಸಿಇಒ ಟಿಮ್​ ಕುಕ್ ಅಂತಿಮ ವೇತನ ಎಷ್ಟು ಸಾವಿರ ಕೋಟಿ ಗೊತ್ತೆ?
ಆಪಲ್ ಕಂಪೆನಿ ಸಿಇಒ ಟಿಮ್ ಕುಕ್ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Aug 28, 2021 | 10:57 AM

ಜಗದ್ವಿಖ್ಯಾತ ಕಂಪೆನಿ ಆಪಲ್ ಇಂಕ್​ನ ಸಿಇಒ ಟಿಮ್​ ಕುಕ್​ಗೆ ಸಿಕ್ಕಿರುವ ಅಂತಿಮ ವೇತನ ಎಷ್ಟು ಗೊತ್ತಾ? 750 ಮಿಲಿಯನ್ ಅಮೆರಿಕನ್ ಡಾಲರ್. ಅಂದರೆ, 75 ಕೋಟಿ ಅಮೆರಿಕನ್ ಡಾಲರ್. ಈ ಮೊತ್ತವನ್ನು ಭಾರತದ ರೂಪಾಯಿ ಲೆಕ್ಕಕ್ಕೆ ಪರಿವರ್ತಿಸಿ ಹೇಳುವುದಾದರೆ, 5512 ಕೋಟಿ ಆಗುತ್ತದೆ. ಅಂದಹಾಗೆ ಹತ್ತು ವರ್ಷಗಳ ಹಿಂದೆ ಕಂಪೆನಿಯ ಸಹ ಸಂಸ್ಥಾಪಕ ಸ್ಟೀವ್​ ಜಾಬ್​ರಿಂದ ಈ ಮಹತ್ವದ ಹುದ್ದೆಯ ಜವಾಬ್ದಾರಿಯನ್ನು ಟಿಮ್​ ಕುಕ್ ವಹಿಸಿಕೊಂಡರು. ಯುಎಸ್​ ಸೆಕ್ಯೂರಿಟೀಸ್ ಎಕ್ಸ್​ಚೇಂಜ್ ಕಮಿಷನ್ (SEC) ದತ್ತಾಂಶದ ಪ್ರಕಾರ, ಕುಕ್ ಅವರಿಗೆ ಬೋನಸ್​ ಆಗಿ ಅಂದಾಜು 5 ಮಿಲಿಯನ್ ಆಪಲ್ ಷೇರುಗಳನ್ನು ವಿತರಿಸಲಾಗಿದೆ. ಅವುಗಳನ್ನು ನಂತರ ನಗದಾಗಿ ಪರಿವರ್ತಿಸಲಾಗಿದೆ. ಬ್ಲೂಮ್​ಬರ್ಗ್​ ಬಿಲಿಯನೇರ್ ಸೂಚ್ಯಂಕದ ಪ್ರಕಾರ, ಕುಕ್ ಸದ್ಯದ ನಿವ್ವಳ ಮೌಲ್ಯ 150 ಕೋಟಿ ಅಮೆರಿಕನ್ ಡಾಲರ್ ಆಗುತ್ತದೆ.

60 ವರ್ಷ ವಯಸ್ಸಿನ ಸಿಇಒ ಟಿಮ್​ ಕುಕ್​ ಆಪಲ್ ಕಂಪೆನಿ ಸೇರ್ಪಡೆ ಆಗಿದ್ದು 1990ರ ದಶಕದ ಕೊನೆಯ ಭಾಗದಲ್ಲಿ. ಅದಕ್ಕೂ ಮುನ್ನ ಕಾಂಪ್ಯಾಕ್ ಹಾಗೂ ಐಬಿಎಂನಲ್ಲಿ ಕಾರ್ಯ ನಿರ್ವಹಿಸಿದ್ದರು. ಆ ನಂತರ ಬಹಳ ವೇಗವಾಗಿ ಆಪಲ್​ ಕಂಪೆನಿಯಲ್ಲಿ ಪ್ರಮುಖ ಕಾರ್ಯ ನಿರ್ವಹಣಾಧಿಕಾರಿ ಆದರು ಹಾಗೂ ಸ್ಟೀವ್ ಜಾಬ್ಸ್ ನಂತರದ ಎರಡನೇ ಸ್ಥಾನ ಕುಕ್ ಪಾಲಿಗೆ ದೊರೆಯಿತು. ಕಂಪೆನಿಯ ಸಹ ಸಂಸ್ಥಾಪಕರೂ ಆಗಿದ್ದ ಸ್ಟೀವ್ ಜಾಬ್ಸ್ 2011ರಲ್ಲಿ ನಿಧನ4ರಾಗುವುದಕ್ಕೂ ಕೆಲ ಸಮಯದ ಮುನ್ನ ಕುಕ್ ಸಿಇಒ ಆದರು. ಸ್ಟೀವ್​ ಜಾಬ್ಸ್​ ಸ್ಟಾರ್​ಗಿರಿಯನ್ನು ಕುಕ್ ತುಂಬಲಾರರು ಎಂಬ ಅನುಮಾನವೇ ಬಹುತೇಕರಿಗೆ ಇತ್ತು. ಆದರೆ ಅವರ ಅಧಿಕಾರಾವಧಿಯಲ್ಲೇ ಆಪಲ್ ಕಂಪೆನಿಯ ಮಾರುಕಟ್ಟೆ ಮೌಲ್ಯ ಗಗನಕ್ಕೇರಿ, 2.4 ಲಕ್ಷ ಕೋಟಿ ಅಮೆರಿಕನ್ ಡಾಲರ್ ತಲುಪಿತು (ಭಾರತದ ರೂಪಾಯಿ ಲೆಕ್ಕದಲ್ಲಿ 146 ಲಕ್ಷ ಕೋಟಿಗೂ ಹೆಚ್ಚು).

ಆದರೆ, ಕುಕ್ ಅವಧಿಯಲ್ಲಿ ಆಪಲ್ ಕಂಪೆನಿಯು ಕೆಲವು ಹಿನ್ನಡೆಯನ್ನೂ ಅನುಭವಿಸಿದೆ. ಕಂಪೆನಿಯ ಸ್ವಂತ ಮ್ಯಾಪ್ ಆ್ಯಪ್ ಅನ್ನು ಬಿಡುಗಡೆ ಮಾಡುವಲ್ಲಿ 2012ನೇ ಇಸವಿಯಲ್ಲಿ ವಿಫಲವಾಯಿತು. ಇದರಿಂದ ಭಾರೀ ಅವಮಾನ ಆಯಿತು. ಐರ್​ಲೆಂಡ್​ ಜತೆಗಿನ ತೆರಿಗೆ ವ್ಯವಹಾರ ಹಾಗೂ ಪಾವತಿಗೆ ಸಂಬಂಧಿಸಿದಂತೆ ಟೀಕೆ ಮತ್ತು ಸ್ಮಾರ್ಟ್​ಫೋನ್​ನ ಎನ್​ಕ್ರಿಪ್ಷನ್ ವಿಚಾರವಾಗಿ ಅಮೆರಿಕ ಸರ್ಕಾರದ ಜತೆ ತಿಕ್ಕಾಟ ನಡೆಯಿತು. ಕಂಪೆನಿಯ ಥರ್ಡ್ ಪಾರ್ಟಿ ಆ್ಯಪ್ ಸ್ಟೋರ್ ಅನ್ನು ಡೆವಲಪರ್ ಹಾಗೂ ಸರ್ಕಾರದ ಕಣ್ಗಾವಲಿನಿಂದ ರಕ್ಷಿಸುವುದು ಕುಕ್ ಕೆಲಸ ಆಗಿದೆ. ಸದ್ಯಕ್ಕೆ ಕುಕ್ ಬಳಿ 32 ಲಕ್ಷ ಆಪಲ್ ಕಂಪೆನಿಯ ಷೇರುಗಳಿವೆ. ಅವುಗಳ ಇವತ್ತಿನ ಮೌಲ್ಯ 48.3 ಕೋಟಿ ಅಮೆರಿಕನ್ ಡಾಲರ್ ಆಗಿದೆ.

ಇದನ್ನೂ ಓದಿ: Apple watch | ರಕ್ತದೊತ್ತಡ, ಆಲ್ಕೋಹಾಲ್ ಮಟ್ಟ, ಗ್ಲುಕೋಸ್ ಅಳೆಯುವ ಫೀಚರ್ ಜತೆಗೆ ಬರಲಿದೆ ಆಪಲ್ ವಾಚ್

(Final Pay Out Of Apple Company CEO Tim Cook Amounted To Rs 5500 Crore)

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ