Apple watch | ರಕ್ತದೊತ್ತಡ, ಆಲ್ಕೋಹಾಲ್ ಮಟ್ಟ, ಗ್ಲುಕೋಸ್ ಅಳೆಯುವ ಫೀಚರ್ ಜತೆಗೆ ಬರಲಿದೆ ಆಪಲ್ ವಾಚ್
ಆಪಲ್ ಕಂಪೆನಿಯ ವಾಚ್ನಲ್ಲಿ ರಕ್ತದೊತ್ತಡ, ಗ್ಲುಕೋಸ್, ಆಲ್ಕೋಹಾಲ್ ಮಟ್ಟವನ್ನು ಕಂಡುಹಿಡಿಯುವ ಫೀಚರ್ಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡಬಹುದು.
ಆಪಲ್ ಕಂಪೆನಿಯ ಸ್ಮಾರ್ಟ್ ವಾಚ್ನಲ್ಲಿ ಪ್ರಮುಖವಾದ ಆರೋಗ್ಯಕ್ಕೆ ಸಂಬಂಧಿಸಿದ ಫೀಚರ್ಗಳು ಸೇರ್ಪಡೆ ಆಗುವ ನಿರೀಕ್ಷೆ ಇದೆ. ಹೊಸ ವರದಿಗಳ ಪ್ರಕಾರ, ಭವಿಷ್ಯದ ಆಪಲ್ ವಾಚ್ ಮಾಡೆಲ್ಗಳಲ್ಲಿ ರಕ್ತದೊತ್ತಡ, ಆಲ್ಕೋಹಾಲ್ ಮಟ್ಟವನ್ನು ಅಳೆಯುವಂಥ ಫೀಚರ್ಗಳು ಇರಲಿವೆ. 2021ರಲ್ಲಿ ಗ್ಲುಕೋಸ್ ಮಟ್ಟವನ್ನು ಅಳೆಯುವಂಥ ಸಾಧನ ಕೂಡ ಪರಿಚಯಿಸುವುದಾಗಿ ಕಂಪೆನಿ ಹೇಳಿದೆ. ಯು.ಕೆ. ಮೂಲದ ಟೆಕ್ ಆರೋಗ್ಯ ಸಂಸ್ಥೆ ರಾಕ್ಲೆ ಫೋಟೋನಿಕ್ಸ್ ಎಸ್ಇಸಿ ಫೈಲಿಂಗ್ನಲ್ಲಿ ಈ ಮೇಲ್ಕಂಡ ವೈಶಿಷ್ಟ್ಯಗಳನ್ನು ತೆರೆದಿಟ್ಟಿದೆ. ಟೆಲಿಗ್ರಾಫ್, ಫೋರ್ಬ್ಸ್ ಗಮನಿಸಿರುವಂತೆ, ಲಿಸ್ಟಿಂಗ್ ದಾಖಲಾತಿಯಲ್ಲಿ ಇರುವುದು ಬಹು ಮುಖ್ಯವಾದ ಅಂಶ ತಿಳಿಸಿದೆ.
ಯು.ಕೆ. ಮೂಲದ ಸಂಸ್ಥೆಯ ಅತಿ ದೊಡ್ಡ ಗ್ರಾಹಕ ಕಂಪೆನಿ ಆಪಲ್ ಆಗಿದ್ದು, ಆ ಕಂಪೆನಿಗೆ ಕಳೆದ ಎರಡು ವರ್ಷಗಳಿಂದ ಆಪಲ್ನಿಂದ ದೊಡ್ಡ ಆದಾಯ ಬರುತ್ತಿದೆ. ರಾಕ್ಲೆ ಫೋಟೋನಿಕ್ಸ್ ಸಿಇಒ ಮಾತನಾಡಿ, 2022ರ ಹೊತ್ತಿಗೆ ತಂತ್ರಜ್ಞಾನವು ಗ್ರಾಹಕ ಉತ್ಪನ್ನಗಳಲ್ಲಿ ಇರುತ್ತದೆ ಎಂದಿದ್ದು, ಆದರೆ ಆಪಲ್ ವಾಚ್ನಲ್ಲಿ ಸೆನ್ಸರ್ ಬಳಕೆ ಮಾಡುವ ಬಗ್ಗೆ ಏನನ್ನೂ ತಿಳಿಸಿಲ್ಲ.
2021ರ ಆರಂಭದಲ್ಲಿ ಆಪಲ್ ಪೇಟೆಂಟ್ ಬಹಿರಂಗ ಮಾಡಿದಂತೆ, ಗ್ಲುಕೋಸ್ ಮಟ್ಟವನ್ನು ನಿಗಾ ಮಾಡುವ ಫೀಚರ್ ಅನ್ನು ಆಪಲ್ ವಾಚ್ನಲ್ಲಿ ತರುವುದಕ್ಕೆ ಕೆಲಸ ಮಾಡುತ್ತಿರುವುದಾಗಿ ಹೇಳಿತ್ತು. 2021ರಲ್ಲಿ ಆಪಲ್ ವಾಚ್ ಸಿರೀಸ್ 7 ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಮುಂಬರುವ ಆಪಲ್ ವಾಚ್ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.
2020ನೇ ಇಸವಿಯಲ್ಲಿ ಆಪಲ್ನಿಂದ ಆಪಲ್ ವಾಚ್ ಸಿರೀಸ್ 6, ಆಪಲ್ ವಾಚ್ SE, ಐಫೋನ್ 12ರ ಸರಣಿ ಬಿಡುಗಡೆ ಮಾಡಲಾಗಿತ್ತು. ಆಪಲ್ ವಾಚ್ನಲ್ಲಿ ಆಕ್ಸಿಜನ್ ಪ್ರಮಾಣ ಅಳೆಯುವ ಫೀಚರ್ ಇದೆ. ಅದನ್ನು SpO2 ನಿಗಾ ಮಾಡುವ ಫೀಚರ್ ಎನ್ನಲಾಗುತ್ತದೆ. ಇದರ ಜತೆಗೆ S6 ಚಿಪ್ ಮತ್ತು ವಾಚ್ OS7ನೊಂದಿಗೆ ಬರುತ್ತದೆ.
ಇದನ್ನೂ ಓದಿ: ಆಪಲ್ iOS 14.5 ಅಪ್ಡೇಟ್ ಮಾಡಿಕೊಂಡು ಐಫೋನ್ 12 ಬಳಕೆದಾರರು 5G ನೆಟ್ವರ್ಕ್ ಸಂಪರ್ಕ ಪಡೆಯಿರಿ
(Apple watch expecting to add new features like blood pressure, glucose level and alcohol level monitoring in 2021)
Published On - 8:13 pm, Tue, 4 May 21