ಆಪಲ್ iOS 14.5 ಅಪ್ಡೇಟ್ ಮಾಡಿಕೊಂಡು ಐಫೋನ್ 12 ಬಳಕೆದಾರರು 5G ನೆಟ್ವರ್ಕ್ ಸಂಪರ್ಕ ಪಡೆಯಿರಿ
ಆಪಲ್ನಿಂದ iOS 14.5 ಅಪ್ಡೇಟ್ ಬಿಡುಗಡೆ ಮಾಡಲಾಗಿದ್ದು, ಇದನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಐಫೋನ್ 12 ಬಳಕೆದಾರರು 5G ನೆಟ್ವರ್ಕ್ ಸಂಪರ್ಕ ಪಡೆಯಬಹುದು.
ಆಪಲ್ ಕಂಪೆನಿಯಿಂದ ಎಲ್ಲ ಐಫೋನ್ಗಳಿಗೆ iOS 14.5 ಅಪ್ಡೇಟ್ ಬಿಡುಗಡೆ ಮಾಡಲಾಗಿದೆ. ಇದರಿಂದ 5G ನೆಟ್ವರ್ಕ್ಗೆ ಬದಲಾಗುವ ಸಾಮರ್ಥ್ಯ ಫೋನ್ಗೆ ಬರುತ್ತದೆ. ಅಂದ ಹಾಗೆ iOS 14.5 ಅಪ್ಡೇಟ್ ಮಾಡಿಕೊಳ್ಳುವ ಐಫೋನ್ 12 ಬಳಕೆದಾರರು ಈ ಹೊಸ ಫೀಚರ್ ಬಳಕೆಯನ್ನು ಶುರು ಮಾಡಬಹುದು. ಈ ಹೊಸ ಅಪ್ಡೇಟ್ನೊಂದಿಗೆ ಹೊಸ ತಲೆಮಾರಿನ ಐಫೋನ್ 12ರ ಇ-ಸಿಮ್ ಹಾಗೂ ಭೌತಿಕವಾದ SIM ಎರಡರ ಮೂಲಕವೂ 5G ನೆಟ್ವರ್ಕ್ ಸಂಪರ್ಕವನ್ನು ಪಡೆಯಬಹುದು. ಈ ಹಿಂದೆ, ಎರಡು ಐಫೋನ್ 12ರಲ್ಲಿ ಎರಡು ಸಂಖ್ಯೆಯನ್ನು ಬಳಸುವ ಗ್ರಾಹಕರಿಗೆ LTE ಸೇವೆಗೆ ಲಾಕ್ ಆಗುತ್ತಿತ್ತು.
ಐಫೋನ್ XS ಮ್ಯಾಕ್ಸ್, XR ಈ ಎರಡು ಫೋನ್ಗಳಲ್ಲಿ ಮೊದಲ ಬಾರಿಗೆ ಒಂದೇ ಸಾಧನದಲ್ಲಿ ಎರಡು ಸಂಖ್ಯೆಯನ್ನು ಬಳಸುವ ವೈಶಿಷ್ಟ್ಯದೊಂದಿಗೆ ಬಂದಿತು. ಇದರೊಂದಿಗೆ ಕೆಲಸ ಹಾಗೂ ವೈಯಕ್ತಿಕ ಹೀಗೆ ಎರಡು ಉದ್ದೇಶಗಳಿಗೆ ಸಿಮ್ಗಳನ್ನು ಬಳಸಲು ಅನುಕೂಲ ಆಯಿತು. ಇನ್ನು ಆಪಲ್ನಿಂದ ಐಫೋನ್ 12ರಲ್ಲಿ ಸ್ಮಾರ್ಟ್ ಡೇಟಾ ಮೋಡ್ ಅನ್ನು ಉತ್ತಮಪಡಿಸಲಾಯಿತು. ಇದು ಸೆಟ್ಟಿಂಗ್ ಮೆನುದಲ್ಲಿರುವ ಸೆಲ್ಯುಲಾರ್ ಸೆಕ್ಷನ್ನಲ್ಲಿ ಹಿಡನ್ ಆಯ್ಕೆಯಾಗಿರುತ್ತದೆ. ಇದು ತಾನಾಗಿಯೇ 5G ಮತ್ತು LTE ಆಯ್ಕೆಗಳಿಗೆ ತಾನಾಗಿಯೇ ಫೋನ್ ಬದಲಾಗುವಂತೆ ಮಾಡುತ್ತದೆ. ಅದು ಕೂಡ ಆಯಾ ಸಮಯದಲ್ಲಿ ಸಿಗುವ ಸೇವೆಯನ್ನು ಅವಲಂಬಿಸಿ, ಬದಲಾವಣೆ ಆಗುತ್ತದೆ. ಇದೀಗ iOS 14.5ರೊಂದಿಗೆ ಈ ಹಿಂದಿಗಿಂತ ಉತ್ತಮ ಬ್ಯಾಟರಿ ಲೈಫ್, ಪರ್ಫಾಮೆನ್ಸ್ ನೀಡಲಿದೆ.
ಮ್ಯಾಕ್ರೂಮರ್ಸ್ ವರದಿ ಪ್ರಕಾರ, iOS 14.5 ಡೌನ್ಲೋಡ್ ಮಾಡಿದಲ್ಲಿ T-Mobile ಬಳಕೆದಾರರು 5G ನೆಟ್ವರ್ಕ್ ಬಳಸಬಹುದು. ಮೆನುವಿನಲ್ಲಿ ಸ್ಮಾರ್ಟ್ ಡೇಟಾ ಮೋಡ್ನಲ್ಲಿ T-Mobile ಬಳಕೆದಾರರು ಹೊಸ ಹಾಗೂ ವೇಗವಾದ 5G ಸ್ಟ್ಯಾಂಡ್ ಅಲೋನ್ ಮೋಡ್ಗೆ ಈಗ ಬದಲಾಗಬಹುದು. ಇದಕ್ಕೂ ಮೊದಲು T-Mobile ಬಳಕೆದಾರರು, ಸ್ವಲ್ಪವಾದರೂ LTE ಅನ್ನು ಬಳಸದೆ 5G ಉಪಯೋಗಿಸಲು ಸಾಧ್ಯವಿಲ್ಲ.
ಇದನ್ನೂ ಓದಿ: Apple products: ಆಪಲ್ನಿಂದ ಹೊಸ ಐಪ್ಯಾಡ್ ಪ್ರೋ ಸೇರಿ ಇನ್ನಷ್ಟು ಪ್ರಾಡಕ್ಟ್ ಬಿಡುಗಡೆ; ಭಾರತದಲ್ಲಿ ಯಾವುದರ ಬೆಲೆ ಎಷ್ಟು?
(Apple company rolled out iOS 14.5. iPhone 12 users by updating to this version, can access to 5G network. Here is the details)