Gold Monetisation Scheme: ಏನಿದು ನಿಮ್ಮ ಚಿನ್ನಕ್ಕೆ ಬಡ್ಡಿ ಸಿಗುವ ಗೋಲ್ಡ್ ಮಾನೆಟೈಸೇಷನ್ ಸ್ಕೀಮ್?

ನಿಮ್ಮ ಬಳಿ ಇರುವ ಚಿನ್ನಕ್ಕೆ ಸರ್ಕಾರದಿಂದ ಬಡ್ಡಿ ದೊರೆಯುವಂಥ ಯೋಜನೆ ಗೋಲ್ಡ್ ಮಾನೈಟೆಸೇಷನ್ ಸ್ಕೀಮ್. ಇದರ ಬಗೆಗಿನ ಸಂಪೂರ್ಣ ವಿವರ ಇಲ್ಲಿದೆ.

Gold Monetisation Scheme: ಏನಿದು ನಿಮ್ಮ ಚಿನ್ನಕ್ಕೆ ಬಡ್ಡಿ ಸಿಗುವ ಗೋಲ್ಡ್ ಮಾನೆಟೈಸೇಷನ್ ಸ್ಕೀಮ್?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Aug 28, 2021 | 2:45 PM

ಸರ್ಕಾರದ ಗೋಲ್ಡ್ ಮಾನೆಟೈಸೇಷನ್ ಸ್ಕೀಮ್ (GMS) ಅಡಿಯಲ್ಲಿ ಗ್ರಾಹಕರ ಬಳಿ ಇರುವ ಬಳಕೆ ಮಾಡದ ಚಿನ್ನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್​ಬಿಐ) ಅಂಗೀಕೃತ ಬ್ಯಾಂಕ್​ನಲ್ಲಿ ಚಿನ್ನವನ್ನು ಠೇವಣಿ ಮಾಡಿ, ಅದಕ್ಕೆ ಬಡ್ಡಿಯನ್ನು ಗಳಿಸಬಹುದು. ಬ್ಯಾಂಕ್​ನ ಎಫ್​.ಡಿ. ರೀತಿಯಲ್ಲೇ ಇದು ಕೂಡ ಕೆಲಸ ಮಾಡುತ್ತದೆ. ಎಷ್ಟು ಅವಧಿಗೆ ಗೋಲ್ಡ್ ಮಾನೆಟೈಸೇಷನ್ ಸ್ಕೀಮ್ ಆಯ್ಕೆ ಮಾಡಿಕೊಳ್ಳಲಾಗುತ್ತದೋ ಅದರ ಆಧಾರದಲ್ಲಿ ವಾರ್ಷಿಕವಾಗಿ ಶೇ 2.5ರ ತನಕ ಬಡ್ಡಿ ಗಳಿಸಬಹುದು. 2015ರಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭಿಸಿತು. ಮನೆಗಳಲ್ಲಿ, ಬ್ಯಾಂಕ್​ ಲಾಕರ್​ಗಳಲ್ಲಿ ಬಳಕೆ ಮಾಡದೆ ಹಾಗೆ ಇಟ್ಟುಕೊಂಡಿರುವಂಥ ಚಿನ್ನವನ್ನು ಉಪಯುಕ್ತವಾಗಿ ಬಳಸುವಂಥ ನಿಟ್ಟಿನಲ್ಲಿ ಈ ಯೋಜನೆ ತರಲಾಯಿತು. ಆದರೆ ಈ ಚಿನ್ನವನ್ನು ಏನು ಮಾಡಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇರದ ಕಾರಣಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ.

ಜಿಎಂಎಸ್​ ಯೋಜನೆ ಅಡಿ ಠೇವಣಿ ಮಾಡಿದ ಚಿನ್ನ ಏನಾಗುತ್ತದೆ? ನಿಯಮಾವಳಿಯ ಪ್ರಕಾರ, ಚಿನ್ನದ ಆಭರಣ, ಗಟ್ಟಿ, ಒಡವೆಗಳನ್ನು ಠೇವಣಿ ಮಾಡಬೇಕು, ಅದಕ್ಕೆ ಬದಲಿಯಾಗಿ ಶುದ್ಧತೆ ಪರಿಶೀಲನೆ ಮಾಡಲಾಗುತ್ತದೆ. ಒಂದು ಸಲ ಚಿನ್ನದ ಶುದ್ಧತೆ ಪರಿಶೀಲಿಸಿದ ಮೇಲೆ ಅದನ್ನು ಕರಗಿಸಿ, ಚಿನ್ನದ ಗಟ್ಟಿ ಅಥವಾ ಚಿನ್ನದ ನಾಣ್ಯವಾಗಿ ಮಾಡಲಾಗುತ್ತದೆ. ಆದ್ದರಿಂದ ಠೇವಣಿ ಮಾಡುವ ಹೊತ್ತಿಗೆ ಯಾವ ಸ್ವರೂಪದಲ್ಲಿ ಚಿನ್ನವನ್ನು ಇಡಲಾಗಿರುತ್ತದೋ ಮೆಚ್ಯೂರಿಟಿ ಅವಧಿಯಲ್ಲಿ ಅದೇ ರೂಪದಲ್ಲಿ ವಾಪಸ್ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ಹಲವರು ಈ ಯೋಜನೆಯನ್ನು ಆರಿಸಿಕೊಳ್ಳದಿರುವುದಕ್ಕೆ ಇದೇ ಪ್ರಮುಖ ಕಾರಣ. ಏಕೆಂದರೆ, ಭಾರತೀಯರಲ್ಲಿ ಹಲವರಿಗೆ ಚಿನ್ನದ ಆಭರಣದ ಜತೆಗೆ ಭಾವನಾತ್ಮಕ ನಂಟಿರುತ್ತದೆ. ತಾವು ಯಾವ ಸ್ವರೂಪದಲ್ಲಿ ಇಟ್ಟಿರುತ್ತಾರೋ ಅದರಲ್ಲೇ ವಾಪಸ್ ಸಿಗಲ್ಲ. ಆದರೆ ಚಿನ್ನಕ್ಕೆ ಮನೆಗಿಂತ ಹೆಚ್ಚು ಭದ್ರತೆ ಇರುತ್ತದೆ. ಸೆಕೆಂಡರಿ ಮಾರ್ಕೆಟ್​ನಲ್ಲಿ ತುರ್ತಿನ ಸಂದರ್ಭದಲ್ಲಿ ಚಿನ್ನವನ್ನು ಮಾರಾಟ ಮಾಡಬಹುದು. ಇನ್ನು ಹೀಗೆ ಮಾರಾಟ ಮಾಡುವಾಗ ನೋ ಯುವರ್ ಕಸ್ಟಮರ್ (KYC) ಪ್ರಕ್ರಿಯೆ ಅಗತ್ಯ ಇರುವುದಿಲ್ಲ.

ಚಿನ್ನ ಠೇವಣಿ ಯೋಜನೆ ನಿಮಗೆ ಸೂಕ್ತವೆ? ಈ ಮೇಲ್ಕಂಡ ಕಾರಣಗಳಿಗೆ, ತಮ್ಮ ಮಕ್ಕಳ ಮದುವೆ ಸೇರಿದಂತೆ ಇತರ ಉದ್ದೇಶಕ್ಕೆ ಚಿನ್ನವನ್ನು ಖರೀದಿಸಿ ಮತ್ತು ಸಂಗ್ರಹಿಸಲು ಬಯಸುತ್ತಾರೋ ಅಂಥವರು ಜಿಎಂಎಸ್​ ಅಡಿಯಲ್ಲಿ ತೊಡಗಿಸಲು ಬಯಸುವುದಿಲ್ಲ. ಯಾರಾದರೂ ತಮ್ಮ ಬಳಿಯೇ ಚಿನ್ನವನ್ನು ಇಟ್ಟುಕೊಂಡಿದ್ದಲ್ಲಿ ಕಷ್ಟದ ಸಮಯದಲ್ಲಿ ಹಣವನ್ನಾಗಿ ಮಾರ್ಪಡಿಸಿಕೊಳ್ಳಬಹುದು. ಅಂಥವರಿಗೆ ಜಿಎಂಎಸ್ ಸೂಕ್ತವಾಗುವುದಿಲ್ಲ. ಆದರೆ ಯಾರು ಹೂಡಿಕೆ ಉದ್ದೇಶದಿಂದಲೇ ಚಿನ್ನವನ್ನು ಖರೀದಿ ಮಾಡಿದ್ದಲ್ಲಿ ಅಂಥವರಿಗೆ ಜಿಎಂಎಸ್​ ಬಡ್ಡಿ ಸಿಗುತ್ತದೆ. ಇನ್ನು ಭೌತಿಕವಾಗಿ ಚಿನ್ನವನ್ನು ಇರಿಸಿಕೊಳ್ಳುವುದರ ಸವಾಲೇನೆಂದರೆ, ಅದನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವುದು ಹಾಗೂ ಅದಕ್ಕಾಗಿ ಲಾಕರ್ ನಿರ್ವಹಣೆ ಖರ್ಚು ಇತ್ಯಾದಿ ಸೇರಿ ದುಬಾರಿ ಆಗುತ್ತದೆ. ಇದರ ಜತೆಗೆ ಬ್ಯಾಂಕ್​ ಲಾಕರ್​ಗಳಿಗೆ ಯಾವುದೇ ಇನ್ಷೂರೆನ್ಸ್ ಇರುವುದಿಲ್ಲ. ಕೆಲವು ತಜ್ಞರ ಅಭಿಪ್ರಾಯದಂತೆ, ಚಿನ್ನದ ಸಂಗ್ರಹಕ್ಕೆ ಜಿಎಂಎಸ್ ಉತ್ತಮ ಆಯ್ಕೆ. ಈ ಠೇವಣಿ ಮೇಲೆ ಬಡ್ಡಿ ಬರುವ ಜತೆಗೆ ತೆರಿಗೆ ಅನುಕೂಲಗಳೂ ಇವೆ.

ಯೋಜನೆಯ ವೈಶಿಷ್ಟ್ಯಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ವೆಬ್‌ಸೈಟ್ ಪ್ರಕಾರ, GMS ಅಡಿಯಲ್ಲಿ ಮೂರು ಅವಧಿಗಳಿಗೆ ಲಭ್ಯವಿದೆ: ಅಲ್ಪಾವಧಿ ಬ್ಯಾಂಕ್ ಠೇವಣಿ (STBD), ಮಧ್ಯಮ ಅವಧಿಯ ಸರ್ಕಾರಿ ಠೇವಣಿ (MTGD) ಮತ್ತು ದೀರ್ಘಕಾಲೀನ ಸರ್ಕಾರಿ ಠೇವಣಿ (LTGD). ಚಿನ್ನದ ಕನಿಷ್ಠ ಠೇವಣಿ 10 ಗ್ರಾಂನಿಂದ ಆರಂಭವಾಗುತ್ತದೆ. ಗರಿಷ್ಠ ಠೇವಣಿ ಎಂಬ ಯಾವುದೇ ಮಿತಿಯಿಲ್ಲ.

STBD ಅಡಿಯಲ್ಲಿ, 1 ರಿಂದ 3 ವರ್ಷಗಳವರೆಗೆ ಚಿನ್ನದ ಠೇವಣಿಗಳನ್ನು ಇರಿಸಬಹುದು, MTGD ಅಡಿಯಲ್ಲಿ ಠೇವಣಿಗಳನ್ನು 5 ರಿಂದ 7 ವರ್ಷಗಳವರೆಗೆ ಮತ್ತು LTGD ಅಡಿಯಲ್ಲಿ ಅಧಿಕಾರಾವಧಿಯು 12 ರಿಂದ 15 ವರ್ಷಗಳವರೆಗೆ ಇರುತ್ತದೆ. ಎಸ್‌ಬಿಐ ವೆಬ್‌ಸೈಟ್‌ನ ಪ್ರಕಾರ, ಪ್ರಸ್ತುತ ಬಡ್ಡಿದರಗಳು ಹೀಗಿವೆ:

ಠೇವಣಿದಾರರು ವಾರ್ಷಿಕವಾಗಿ ಸರಳ ಬಡ್ಡಿಯನ್ನು ಗಳಿಸುತ್ತಾರೆ ಅಥವಾ ಚಿನ್ನವನ್ನು ಠೇವಣಿ ಮಾಡುವ ಸಮಯದಲ್ಲಿ ಹೂಡಿಕೆಯ ಆಯ್ಕೆಯನ್ನು ಅವಲಂಬಿಸಿ ಕ್ಯುಮುಲೇಟಿವ್ ಬಡ್ಡಿಯನ್ನು ಗಳಿಸುತ್ತಾರೆ.

1. ಎಸ್‌ಟಿಬಿಡಿಯ ಸಂದರ್ಭದಲ್ಲಿ: 1 ವರ್ಷಕ್ಕೆ: ವಾರ್ಷಿಕ ಶೇ 0.50 1 ವರ್ಷದಿಂದ 2 ವರ್ಷಗಳವರೆಗೆ: ವಾರ್ಷಿಕ ಶೇ 0.55 2 ವರ್ಷದಿಂದ 3 ವರ್ಷಗಳವರೆಗೆ: ವಾರ್ಷಿಕ ಶೇ 0.60

2. MTGD ಮೇಲಿನ ಬಡ್ಡಿ ದರ: ವಾರ್ಷಿಕ ಶೇ 2.25

3. LTGD ಮೇಲಿನ ಬಡ್ಡಿ ದರ: ವಾರ್ಷಿಕ ಶೇ 2.50

ಮೆಚ್ಯೂರಿಟಿ ನಂತರ, ಮರುಪಾವತಿಯನ್ನು ಚಿನ್ನದಲ್ಲಿ ಅಥವಾ ಅದಕ್ಕೆ ಸಮನಾದ ಹಣದಲ್ಲಿ ತೆಗೆದುಕೊಳ್ಳಬಹುದು. “ಆದರೂ ಶೇ 0.20ರಷ್ಟು ಆಡಳಿತಾತ್ಮಕ ಶುಲ್ಕವಾಗಿ ಚಿನ್ನದ ಮೇಲೆ ರಿಡೆಂಪ್ಷನ್ ಸಂದರ್ಭದಲ್ಲಿ ವಿಧಿಸಲಾಗುತ್ತದೆ,” ಎಂದು ಎಸ್‌ಬಿಐ ವೆಬ್‌ಸೈಟ್ ತಿಳಿಸಿದೆ.

ಮೆಚ್ಯೂರಿಟಿ ಮುಂಚಿತವಾಗಿ ಠೇವಣಿ ಮುರಿದರೆ ದಂಡ ಅನ್ವಯ. ಅಕಾಲಿಕ ಪಾವತಿ ನಿಯಮಗಳು: STBD: 1 ವರ್ಷದ ಲಾಕ್-ಇನ್ ಅವಧಿಯ ನಂತರ ಅನ್ವಯವಾಗುವ ಬಡ್ಡಿದರದ ಮೇಲೆ ದಂಡದೊಂದಿಗೆ ಅನುಮತಿಸಲಾಗುತ್ತದೆ MTGD: 3 ವರ್ಷಗಳ ನಂತರ ಯಾವುದೇ ಸಮಯದಲ್ಲಿ ಹಿಂಪಡೆಯಲು ಬಡ್ಡಿಯ ಮೇಲೆ ದಂಡದೊಂದಿಗೆ ಅನುಮತಿಸಲಾಗಿದೆ LTGD: 5 ವರ್ಷಗಳ ನಂತರ ಯಾವುದೇ ಸಮಯದಲ್ಲಿ ಹಿಂಪಡೆಯಲು ಬಡ್ಡಿಯ ಮೇಲೆ ದಂಡದೊಂದಿಗೆ ಅನುಮತಿಸಲಾಗಿದೆ

ಗಳಿಸಿದ ಬಡ್ಡಿಗೆ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ, ಸಂಪತ್ತು ತೆರಿಗೆ ಮತ್ತು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಆರ್‌ಬಿಐ ಗೊತ್ತುಪಡಿಸಿದ ಬ್ಯಾಂಕ್‌ಗಳಲ್ಲಿ ಅಂದರೆ, ಐಸಿಐಸಿಐ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್ ಬ್ಯಾಂಕ್, ದೇನಾ ಬ್ಯಾಂಕ್, ಬ್ಯಾಂಕ್​ ಆಫ್ ಬರೋಡಾ ಸೇರಿವೆ.

ಆದರೆ, ಚಿನ್ನದ ಠೇವಣಿಗಳ ಮೇಲಿನ ಬಡ್ಡಿಯನ್ನು ಚಿನ್ನಕ್ಕಿಂತ ಹಣದ ಮೌಲ್ಯದಲ್ಲಿ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಇದರರ್ಥ, ನಿಮ್ಮ ಠೇವಣಿಗಳಿಗೆ ಯಾವುದೇ ಹೆಚ್ಚುವರಿ ಚಿನ್ನವನ್ನು ಸೇರಿಸಲಾಗುವುದಿಲ್ಲ. ಅದರ ಬದಲಿಗೆ ಠೇವಣಿಯ ಸಮಯದಲ್ಲಿ ಚಿನ್ನದ ಮೌಲ್ಯವನ್ನು ಉಲ್ಲೇಖಿಸಿ, ಹಣದ ರೂಪದಲ್ಲಿ ಪಾವತಿಸಲಾಗುತ್ತದೆ. ಬಡ್ಡಿ ಲೆಕ್ಕಾಚಾರದಲ್ಲಿ ಈ ಬದಲಾವಣೆಯನ್ನು 2021ರ ಏಪ್ರಿಲ್​ನಲ್ಲಿ ಮಾಡಲಾಗಿದೆ.

ಇದನ್ನೂ ಓದಿ: Gold Price: 1950ರಲ್ಲಿ 10 ಗ್ರಾಮ್​ಗೆ 99 ರೂಪಾಯಿ ಇದ್ದ ಚಿನ್ನದ ದರ ಪ್ರತಿ ಹತ್ತು ವರ್ಷದಂತೆ ಎಷ್ಟು ಏರಿಕೆ ಆಗಿದೆ ಗೊತ್ತಾ?

(What Is Gold Monetisation Scheme Features Benefits And Other Details About Scheme)

Published On - 2:42 pm, Sat, 28 August 21

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್