Sign In

By signing in or creating an account, you agree with Associated Broadcasting Company's Terms & Conditions and Privacy Policy.

Electric Vehicle Charging Stations: ಎಚ್​ಪಿಸಿಎಲ್​ನಿಂದ ಮುಂದಿನ ಮೂರು ವರ್ಷದಲ್ಲಿ 5000 ಇ.ವಿ. ಚಾರ್ಜಿಂಗ್ ಸ್ಟೇಷನ್​

ಮುಂದಿನ 5 ವರ್ಷದಲ್ಲಿ ಎಚ್​ಪಿಸಿಎಲ್​ನಿಂದ 5000 ಎಲೆಕ್ಟ್ರಿಕಲ್ ವಾಹನ ಚಾರ್ಜಿಂಗ್ ಸ್ಟೇಷನ್​ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.

Electric Vehicle Charging Stations: ಎಚ್​ಪಿಸಿಎಲ್​ನಿಂದ ಮುಂದಿನ ಮೂರು ವರ್ಷದಲ್ಲಿ 5000 ಇ.ವಿ. ಚಾರ್ಜಿಂಗ್ ಸ್ಟೇಷನ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Sep 17, 2021 | 5:23 PM

ಮುಂಬೈ: ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಮುಂದಿನ ಮೂರು ವರ್ಷಗಳಲ್ಲಿ 5,000 ಎಲೆಕ್ಟ್ರಿಕ್ ವಾಹನ (EV) ಚಾರ್ಜಿಂಗ್ ಸ್ಟೇಷನ್​ಗಳನ್ನು ಆರಂಭಿಸಲು ಯೋಜನೆ ರೂಪಿಸಿದೆ ಎಂದು ಕಂಪೆನಿ ಶುಕ್ರವಾರ ಹೇಳಿದೆ. ಸದ್ಯಕ್ಕೆ ಎಚ್​ಪಿಸಿಎಲ್​ 84 ಎಲೆಕ್ಟ್ರಿಕಲ್ ಚಾರ್ಜಿಂಗ್ ಕೇಂದ್ರಗಳನ್ನು ಹೊಂದಿದೆ. ಕಳೆದ ಕೆಲವು ತಿಂಗಳಲ್ಲಿ ಎಚ್​ಪಿಸಿಎಲ್ ತನ್ನ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸಲು ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (CESL), ಟಾಟಾ ಪವರ್ ಮತ್ತು ಮಜೆಂಟಾ ಇವಿ ಸಿಸ್ಟಮ್ಸ್ ಎಂಬ ಮೂರು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

“ಗ್ರೀನ್ ಎನರ್ಜಿ ಮತ್ತು ಗ್ರೀನ್ ಹೈಡ್ರೋಜನ್ ಅವಕಾಶಗಳನ್ನು ಎಚ್​ಪಿಸಿಎಲ್ ಸಕ್ರಿಯವಾಗಿ ಪರಿಶೀಲಿಸುತ್ತಿದೆ,” ಎಂದು ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ HPCLನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ.ಸುರಾನ ಹೇಳಿದ್ದಾರೆ. ಇದು ಮುಂದಿನ ಐದು ವರ್ಷಗಳಲ್ಲಿ ವಿವಿಧ ಯೋಜನೆಗಳಿಗಾಗಿ ಸುಮಾರು 65,000 ಕೋಟಿ ರೂಪಾಯಿ ಬಂಡವಾಳ ವೆಚ್ಚವನ್ನು ಕಲ್ಪಿಸಿದೆ. ಮಾರ್ಚ್‌ನಲ್ಲಿ ಎಚ್​ಪಿಸಿಎಲ್ ತನ್ನ ಆರಂಭದ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಮಜೆಂಟಾ ಇವಿ ಸಿಸ್ಟಮ್ಸ್ ಸಹಯೋಗದೊಂದಿಗೆ ಮೊದಲ EV (ಎಲೆಕ್ಟ್ರಿಕ್ ವಾಹನ) ಚಾರ್ಜರ್ ಅನ್ನು ಬಿಡುಗಡೆ ಮಾಡಿತು.

ಇವಿ ಚಾರ್ಜರ್, “ಚಾರ್ಜ್‌ಗ್ರೀಡ್ ಫ್ಲೇರ್” ಎಂದು ಬ್ರ್ಯಾಂಡ್ ಮಾಡಲಾಗಿದ್ದು, ಇಂಧನ ದಕ್ಷತೆಯ ಬೀದಿ ದೀಪದ ಕಂಬಗಳಲ್ಲಿ ಅಳವಡಿಸಲಾಗಿದೆ. ಇದು ಹೊಂದಿಕೊಳ್ಳುವ ಮತ್ತು ಕಡಿಮೆ ಬೆಲೆಯ ಚಾರ್ಜಿಂಗ್ ಪರಿಹಾರಗಳಿಗಾಗಿ ಇವಿ ಅಳವಡಿಕೆಯನ್ನು ಪ್ರೋತ್ಸಾಹಿಸುತ್ತದೆ. ಭಾರತದಲ್ಲಿ ಚಾರ್ಜ್ ಗ್ರಿಡ್ ಫ್ಲೇರ್ ಶ್ರೇಣಿಯ ಚಾರ್ಜರ್‌ಗಳನ್ನು ಆಯ್ದ ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಸ್ಥಾಪಿಸಲು ಎಚ್​ಪಿಸಿಎಲ್​ ಯೋಜಿಸಿದೆ. ಇ-ಮೊಬಿಲಿಟಿ ಇನಿಷಿಯೇಟಿವ್ ಮೇಲೆ ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವ ಗುರಿಯನ್ನು ಹೊಂದಿರುವ ವೈಯಕ್ತಿಕ ಮೊಬಿಲಿಟಿ ವಿಭಾಗದಲ್ಲಿ ಎರಡು-ಮೂರು ಚಕ್ರದ ವಾಹನಗಳು/ಕ್ಯಾಬ್ ಅಗ್ರಿಗ್ರೇಟರ್‌ಗಳು/ಕಾರ್ ಮಾಲೀಕರ ಬ್ಯಾಟರಿ ಚಾರ್ಜಿಂಗ್ ಅಗತ್ಯಗಳನ್ನು ಪೂರೈಸಲು ಇದು ಮೂಲಸೌಕರ್ಯವನ್ನು ಅಪ್​ಗ್ರೇಡ್ ಮಾಡುತ್ತಿದೆ.

ಇಂಧನ ದಕ್ಷತೆ ಸೇವೆಗಳ ಲಿಮಿಟೆಡ್ (ಇಇಎಸ್ಎಲ್)ನ ಸಂಪೂರ್ಣ ಒಡೆತನದ ಸಿಇಎಸ್ಎಲ್​ನೊಂದಿಗೆ ಎಚ್​ಪಿಸಿಎಲ್ ಒಪ್ಪಂದವು ಮುಂಬೈ, ದೆಹಲಿ ಎನ್​ಸಿಆರ್, ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಪುಣೆ ಸೇರಿದಂತೆ ಇತರ ನಗರಗಳಲ್ಲಿ ಆಯ್ದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ವಿದ್ಯುತ್ ಚಾರ್ಜಿಂಗ್ ಮೂಲಸೌಕರ್ಯವನ್ನು ಮುಂದಿನ 10 ವರ್ಷಗಳಲ್ಲಿ ಆರಂಭಿಸುತ್ತದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಚಾರ್ಜ್ ಚಿಂತೆ ಬಿಟ್ಟು ಬಿಡಿ: ಮನೆ ಬಾಗಿಲಿಗೆ ಬರಲಿದೆ ಚಾರ್ಜಿಂಗ್ ವ್ಯಾನ್

(Hindustan Petroleum Will Set Up 5000 EV Charging Stations In Next 5 Years)