Home Loan: ಭಾರತದ ಯಾವ ಬ್ಯಾಂಕ್​ನಲ್ಲಿ ಹೋಮ್​ ಲೋನ್​ಗೆ ಕಡಿಮೆ ಬಡ್ಡಿ ದರ? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಪ್ರಮುಖ ಬ್ಯಾಂಕ್​ಗಳ ಪೈಕಿ ಗೃಹ ಸಾಲದ ಬಡ್ಡಿ ದರ ಎಷ್ಟಿದೆ ಎಂಬ ಮಾಹಿತಿ ಇದೆ. ಬಹುತೇಕ ಬ್ಯಾಂಕ್​ಗಳಲ್ಲಿ ಬಡ್ಡಿ ದರ ಶೇ 7ಕ್ಕಿಂತ ಕಡಿಮೆ ಇದೆ.

1/11
ಭಾರತದ ಅತಿ ದೊಡ್ಡ ಬ್ಯಾಂಕ್​ ಆದ ಎಸ್​ಬಿಐ (ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ) ಹಬ್ಬದ ಋತುವಿಗಾಗಿ ಭಾರೀ ಆಫರ್​ಗಳನ್ನು ಘೋಷಿಸಿದೆ. ಸಾಲ ಪಡೆಯಬೇಕು ಎಂದಿರುವ ಹಾಗೂ ಬೇರೆ ಬ್ಯಾಂಕ್​ಗಳಲ್ಲಿ ಇರುವ ಗೃಹ ಸಾಲಗಳನ್ನು ವರ್ಗಾವಣೆ ಮಾಡಬೇಕು ಅಂತಿರುವವರಿಗೆ ಇದು ಶುಭ ಸುದ್ದಿ. ಉತ್ತಮವಾದ ಕ್ರೆಡಿಟ್​ ಸ್ಕೋರ್​ ಹೊಂದಿರುವವರಿಗೆ ಈಗ ಶೇ 6.7ರ ಬಡ್ಡಿ ದರದಲ್ಲೇ ಗೃಹ ಸಾಲ (Home loan) ಸಿಗುತ್ತದೆ. ಇನ್ನೊಂದು ಮಾತು, ಸಾಲದ ಮೊತ್ತ ಎಷ್ಟೇ ಆದರೂ ಬಡ್ಡಿ ದರ ಮಾತ್ರ ಇಷ್ಟೇ ಇರುತ್ತದೆ. ಅಷ್ಟೇ ಅಲ್ಲ, ಪ್ರೊಸೆಸಿಂಗ್ ಫೀ ಮನ್ನಾ ಮಾಡಲಾಗಿದೆ ಮತ್ತು ವೇತನಯೇತರ ಆದಾಯ ಹೊಂದಿದವರಿಗೆ ಈ ಹಿಂದೆ ವಿಧಿಸುತ್ತಿದ್ದ ಹೆಚ್ಚುವರಿ ಬಡ್ಡಿ ದರವನ್ನು ಸಹ ತೆಗೆಯಲಾಗಿದೆ.

2/11
ಸಾಲ ಪಡೆದವರ ಪೈಕಿ ಹಲವರು ಈಗಲೂ ಬೇಸ್ ರೇಟ್ ಅಥವಾ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್ಸ್ (MCLR) ಜೋಡಣೆ ಆದಂತೆ ಮುಂದುವರಿಸಿದ್ದಾರೆ. ಹೊಸ ಸಾಲವು ಎಕ್ಸ್​ಟರ್ನಲ್ ಬೆಂಚ್​ಮಾರ್ಕ್​ಗೆ ಜೋಡಣೆ ಆಗಿದ್ದು, ಹಲವು ಬ್ಯಾಂಕ್​ಗಳಿಗೆ ಇದು ಆರ್​ಬಿಐ ರೆಪೋ ದರಕ್ಕೆ ತಕ್ಕಂತೆ ಇರುತ್ತದೆ.

3/11
ರೆಪೋ ದರ ಕಡಿತದ ಅನುಕೂಲ ಗ್ರಾಹಕರಿಗೆ
ರೆಪೋ ದರ ಕಡಿತದ ಅನುಕೂಲ ಗ್ರಾಹಕರಿಗೆ
ಎಕ್ಸ್​ಟರ್ನಲ್ ಬೆಂಚ್​ಮಾರ್ಕ್​ ಜೋಡಣೆಯಾದ ಸಾಲಗಳನ್ನು ಅರ್ಥ ಮಾಡಿಕೊಳ್ಳುವುದು ಸಲೀಸು. ನೀತಿ ದರಗಳ ಬದಲಾವಣೆ ಪಾರದರ್ಶಕವಾಗಿ ಆಗುತ್ತದೆ. ರೆಪೋ ದರ ಕಡಿತದ ಅನುಕೂಲವನ್ನು ಗ್ರಾಹಕರಿಗೆ ವರ್ಗಾವಣೆ ಮಾಡದೆ ಬ್ಯಾಂಕ್​ಗಳಿಗೆ ಬೇರೆ ದಾರಿ ಇಲ್ಲ. ಇದರರ್ಥ ಸಾಲಗಾರರಿಗೆ ಕಡಿಮೆ ಬಡ್ಡಿ ದರದಲ್ಲಿ ದೊರೆಯುತ್ತದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಬ್ಯಾಂಕ್​ಗಳು ಹಾಗೂ ಎನ್​ಬಿಎಫ್​ಸಿಗಳ ಮಾಹಿತಿ ಇದೆ. ಈ ಮಾಹಿತಿಯನ್ನು ಮನಿಕಂಟ್ರೋಲ್.ಕಾಮ್​ ಹಾಗೂ ಬ್ಯಾಂಕ್​ಬಜಾರ್​ನಿಂದ ಒಗ್ಗೂಡಿಸಲಾಗಿದೆ.
4/11
ಕೊಟಕ್ ಮಹೀಂದ್ರಾ ಬ್ಯಾಂಕ್
ಕೊಟಕ್ ಮಹೀಂದ್ರಾ ಬ್ಯಾಂಕ್
ಖಾಸಗಿ ಬ್ಯಾಂಕ್​ ಆದ ಕೊಟಕ್​ ಮಹೀಂದ್ರಾ ಬ್ಯಾಂಕ್​ನಿಂದ ಅತ್ಯಂತ ಅಗ್ಗದ ಹೋಮ್​ ಲೋನ್​ ನೀಡುತ್ತಿದೆ. ವಾರ್ಷಿಕವಾಗಿ ಶೇ 6.5ರಷ್ಟು ಬಡ್ಡಿ ದರ ಹಾಕಲಾಗುತ್ತದೆ. 75 ಲಕ್ಷ ರೂಪಾಯಿ ಮೊತ್ತಕ್ಕೆ, 20 ವರ್ಷದ ಅವಧಿಗೆ ಇಎಂಐ 55,918 ರೂಪಾಯಿ ಬರುತ್ತದೆ.
5/11
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
ಪಂಜಾಬ್ ಅಂಡ್ ಸಿಂದ್​ ಬ್ಯಾಂಕ್​​ನಲ್ಲಿಯೂ ಗೃಹ ಸಾಲದ ಬಡ್ಡಿ ದರ ಕೊಟಕ್​ ಮಹೀಂದ್ರಾ ಬ್ಯಾಂಕ್​ ಸಮೀಪದಲ್ಲಿದೆ. ಇತರ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳಿಗಿಂತ ಇಲ್ಲಿನ ಬಡ್ಡಿ ದರ ಕಡಿಮೆ ಇದ್ದು, ಶೇ 6.65 ಇದೆ.
6/11
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಿಂದ ಹಬ್ಬದ ಋತುವಿಗೆ ಆಕರ್ಷಕ ಆಫರ್ ನೀಡಲಾಗಿದೆ. ಇತರ ಬ್ಯಾಂಕ್​ಗಳಿಂದ ಸಾಲ ವರ್ಗಾವಣೆ ಮಾಡುವುದಕ್ಕೆ ಬಯಸುವವರಿಗೆ ಇದು ಬಹಳ ಸೂಕ್ತ ಸಮಯ. ಯಾವುದೇ ಮೊತ್ತದ ಸಾಲ ಇರಲಿ, ಕ್ರೆಡಿಟ್ ಸ್ಕೋರ್ 800 ಮೇಲ್ಪಟ್ಟಿದ್ದರೆ ಶೇ 6.7ರ ಬಡ್ಡಿ ದರ ಆಗುತ್ತದೆ.
7/11
ಟಾಟಾ ಕ್ಯಾಪಿಟಲ್
ಟಾಟಾ ಕ್ಯಾಪಿಟಲ್
ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ಒದಗಿಸುವ ಸಂಸ್ಥೆಯ ಪಟ್ಟಿಗೆ ಹೊಸ ಸೇರ್ಪಡೆ ಅಂದರೆ, ಅದು ಟಾಟಾ ಕ್ಯಾಪಿಟಲ್. ಬಡ್ಡಿ ದರ ಶೇ 6.7 ಇದೆ. 75 ಲಕ್ಷ ರೂಪಾಯಿ ಸಾಲಕ್ಕೆ 20 ವರ್ಷಗಳ ಅವಧಿಗೆ 56,805 ರೂಪಾಯಿ ಇಎಂಐ ಬರುತ್ತದೆ.
8/11
ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ
ಆ ನಂತರದ ಸ್ಥಾನದಲ್ಲಿ ಬ್ಯಾಂಕ್ ಆಫ್ ಬರೋಡಾ ಇದೆ. ಇಲ್ಲಿ ಗೃಹ ಸಾಲ ಬಡ್ಡಿ ದರ ಶೇ 6.75 ಇದೆ. ಇದು ಕೂಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್. ಹಬ್ಬಕ್ಕೆ ಆಫರ್ ಘೋಷಣೆ ಮಾಡಲಾಗಿದೆ. ಅದರಲ್ಲಿ ಪ್ರೊಸೆಸಿಂಗ್ ಫೀ ಮನ್ನಾ ಕೂಡ ಒಳಗೊಂಡಿದೆ. 75 ಲಕ್ಷ ರೂಪಾಯಿ ಸಾಲವನ್ನು 20 ವರ್ಷಗಳ ಅವಧಿಗೆ ತೆಗೆದುಕೊಳ್ಳುವುದಾದರೆ 57,027 ರೂಪಾಯಿ ಇಎಂಐ ಬರುತ್ತದೆ.
9/11
ಬಜಾಜ್​ ಫಿನ್​ಸರ್ವ್
ಬಜಾಜ್​ ಫಿನ್​ಸರ್ವ್
ಬಜಾಜ್​ ಫಿನ್​ಸರ್ವ್​ನಲ್ಲಿ ಭಾರತದ ಅತಿ ದೊಡ್ಡ ಖಾಸಗಿ ಬ್ಯಾಂಕ್​ ಆದ ಎಚ್​ಡಿಎಫ್​ಸಿಯಲ್ಲಿ ಇರುವ ಶೇ 7ರ ಬಡ್ಡಿ ದರಕ್ಕಿಂತಲೂ ಕಡಿಮೆ ಇದ. ಅಂದರೆ ಶೇ 6.80 ದರ ಇದೆ.
10/11
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್
ಇಂಡಿಯನ್ ಬ್ಯಾಂಕ್​ ಕೂಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಗಿದ್ದು, ಹೌಸಿಂಗ್​ ಲೋನ್​ಗೆ ಕಡಿಮೆ ಬಡ್ಡಿ ದರ ಇರುವ ಬ್ಯಾಂಕ್​ಗಳಲ್ಲಿ ಇದು ಕೂಡ ಒಂದಾಗಿದೆ. ಬಡ್ಡಿ ದರ ಶೇ 6.8 ಇದ್ದು, 75 ಲಕ್ಷದ ಮೊತ್ತ 20 ವರ್ಷದ ಅವಧಿಗೆ 57,250 ರೂಪಾಯಿ ಇಎಂಐ ಬರುತ್ತದೆ.
11/11
ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಂಜಾಬ್ ನ್ಯಾಷನಲ್ ಬ್ಯಾಂಕ್
ಕಡಿಮೆ ಬಡ್ಡಿ ದರಕ್ಕೆ ಗೃಹ ಸಾಲ ನೀಡುವ ಪಟ್ಟಿಯಲ್ಲಿ ಪಂಜಾಬ್​ ನ್ಯಾಷನಲ್ ಬ್ಯಾಂಕ್ ಟಾಪ್ ಐದರೊಳಗೆ ಬರುತ್ತದೆ. ಸದ್ಯಕ್ಕೆ ಬಡ್ಡಿ ದರ ಶೇ 6.8 ಇದೆ. 75 ಲಕ್ಷ ರೂಪಾಯಿ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಇಎಂಐ 57,250 ರೂಪಾಯಿ ಬರುತ್ತದೆ.

Click on your DTH Provider to Add TV9 Kannada