ರಿಷಭ್ ಪಂತ್- ಈ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಭಾರತೀಯ ಕ್ರಿಕೆಟ್‌ನ ಭವಿಷ್ಯ ಎಂದು ಪರಿಗಣಿಸಲಾಗಿದೆ. ತನ್ನ ವೇಗದ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ರಿಷಭ್ ಪಂತ್, ತನ್ನ ಅಂತಾರಾಷ್ಟ್ರೀಯ ವೃತ್ತಿಜೀವನದ ಆರಂಭದ ದಿನಗಳಲ್ಲಿ ಸ್ವಲ್ಪ ಹಿಂಜರಿಕೆಯಿಂದ ಆರಂಭಿಸಿದರು ಆದರೆ ಈಗ ಅವರು ಅದ್ಭುತ ಫಾರ್ಮ್ನಲ್ಲಿದ್ದಾರೆ. 2018 ರಲ್ಲಿ ಅವರು ಹಿಂದಿರುಗಿದಾಗಿನಿಂದ, ಅವರು ಯಶಸ್ಸಿನ ಮೆಟ್ಟಿಲನ್ನು ವೇಗವಾಗಿ ಏರಿದ್ದಾರೆ. ಅವರು ಭಾರತದ ಟೆಸ್ಟ್, ಏಕದಿನ ಮತ್ತು ಟಿ 20 ತಂಡಗಳ ಭಾಗವಾಗಿದ್ದಾರೆ. ಅಲ್ಲದೆ, ಅವರು ಐಪಿಎಲ್‌ನಲ್ಲೂ ಉತ್ತಮವಾಗಿ ಆಡುತ್ತಿದ್ದಾರೆ. ಐಪಿಎಲ್ 2021 ರಲ್ಲಿ, ಅವರು ದೆಹಲಿ ಕ್ಯಾಪಿಟಲ್ಸ್‌ನ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ, ದೆಹಲಿ ಎಂಟು ಪಂದ್ಯಗಳಲ್ಲಿ ಆರು ಗೆದ್ದಿದೆ. ಈಗ ಉಳಿದ ಪಂದ್ಯಗಳಲ್ಲೂ ನಾಯಕರಾಗಿ ಮುಂದುವರಿಯಲಿದ್ದಾರೆ. ದೇಶೀಯ ಕ್ರಿಕೆಟ್ ನಲ್ಲಿ ಪಂತ್ ದೆಹಲಿಯ ನಾಯಕತ್ವ ವಹಿಸಿದ್ದಾರೆ. ಭವಿಷ್ಯವನ್ನು ನೋಡುತ್ತಾ, ಅವರ ಮೇಲೆ ನಾಯಕತ್ವದ ಜವಬ್ದಾರಿ ನೀಡಬಹುದು. 2007 ರಲ್ಲಿ ಧೋನಿ ನಾಯಕನಾದಾಗ, ಅವರಿಗೆ ಅನೇಕ ಹಿರಿಯರಿಗಿಂತ ಆದ್ಯತೆ ನೀಡಲಾಯಿತು.