ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತಿಯಾರ್ಧ ಕಾವೇರುತ್ತಿದೆ. ಈಗಾಗಲೇ ಎಲ್ಲಾ ತಂಡಗಳು ಯುಎಇನಲ್ಲಿ ಅಭ್ಯಾಸವನ್ನೂ ಆರಂಭಿಸಿದೆ. ಸೆಪ್ಟೆಂಬರ್ 19 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಈ ಪಂದ್ಯದ ಮೂಲಕ ದ್ವಿತಿಯಾರ್ಧಕ್ಕೆ ಚಾಲನೆ ಸಿಗಲಿದೆ.
ಇತ್ತ ಯುಎಇ ಪಿಚ್ನಲ್ಲಿ ಯಾರು ಬಲಿಷ್ಠ ಎಂಬ ಲೆಕ್ಕಾಚಾರಗಳು ಕೂಡ ಶುರುವಾಗಿದೆ. ಈ ಬಗ್ಗೆ ಮಾತನಾಡಿರುವ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ, ಕೆಕೆಆರ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್, ಆರ್ಸಿಬಿ ತಂಡದ ಎಬಿ ಡಿವಿಲಿಯರ್ಸ್ ಈಗಲೂ ಬಲಿಷ್ಠ ಬ್ಯಾಟ್ಸ್ಮನ್ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಬಿಡಿ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡದೇ ಇರಬಹುದು. ಆದರೆ ಚುಟುಕು ಕ್ರಿಕೆಟ್ನಲ್ಲಿ ಅತ್ಯಂತ ಬೇಡಿಕೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಆರ್ಸಿಬಿ ತಂಡದಲ್ಲಿ ಡಿವಿಲಿಯರ್ಸ್ ಇರುವುದು ನಾಯಕ ವಿರಾಟ್ ಕೊಹ್ಲಿ ಪ್ಲಸ್ ಪಾಯಿಂಟ್ ಎಂದು ಗಂಭೀರ್ ತಿಳಿಸಿದ್ದಾರೆ.
ನನ್ನ ಪ್ರಕಾರ ಪ್ರಸ್ತುತ ಅತ್ಯುತ್ತಮ ಬೌಲರುಗಳಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ ಅವರಂತಹ ವೇಗಿಗಳನ್ನು ಎದುರಿಸುವ ತಾಕತ್ತು ಎಬಿಡಿ ಮಾತ್ರ ಹೊಂದಿದ್ದಾರೆ. ಅವರಲ್ಲಿ ಬುಮ್ರಾ ಅವರಂತಹ ವೇಗಿಗಳನ್ನು ನಿರಾಯಾಸವಾಗಿ ಎದುರಿಸುವ ಸಾಮರ್ಥ್ಯವಿದೆ.
ಬುಮ್ರಾ ಅವರ ಎಸೆತಗಳಿಗೆ ಭರ್ಜರಿ ಪ್ರತ್ಯುತ್ತರ ನೀಡಲು ಏಕೈಕ ವ್ಯಕ್ತಿಗೆ ಮಾತ್ರ ಸಾಧ್ಯ. ಅದು ಎಬಿ ಡಿವಿಲಿಯರ್ಸ್. ಅವರು ಅಂತಹ ಒಬ್ಬ ಬ್ಯಾಟ್ಸ್ಮನ್. ಅವರಂತೆ ಬ್ಯಾಟಿಂಗ್ ಮಾಡಿದ ಮತ್ಯಾರನ್ನೂ ನಾನು ನೋಡಿಲ್ಲ ಎಂದು ಗಂಭೀರ್ ಹೇಳಿದರು.
ಪ್ರಸ್ತುತ ಆರ್ಸಿಬಿ ತಂಡ ಬಲಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಗಂಭೀರ್, ತಂಡದಲ್ಲಿ ಮ್ಯಾಕ್ಸ್‌ವೆಲ್ ಮತ್ತು ಡಿವಿಲಿಯರ್ಸ್ ಜೊತೆಗೆ, ವಿರಾಟ್ ಕೊಹ್ಲಿ ಇರುವುದು ಬ್ಯಾಟಿಂಗ್ ವಿಭಾಗವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ ಎಂದು ಕೆಕೆಆರ್ ತಂಡದ ಮಾಜಿ ನಾಯಕ ತಿಳಿಸಿದರು.
ಇನ್ನು ಸ್ಪಿನ್ ಆಲ್ ರೌಂಡರ್ ಆಗಿ ಶಹಬಾಜ್ ಅಹ್ಮದ್ ಮತ್ತು ನ್ಯೂಜಿಲ್ಯಾಂಡ್ ವೇಗಿ ಕೈಲ್ ಜೇಮೀಸನ್ ಅವರನ್ನು ಕ್ರಮವಾಗಿ ನಂ .6 ಮತ್ತು ನಂ .7 ರಲ್ಲಿ ಆಯ್ಕೆ ಮಾಡಿದ್ದಾರೆ. ಹಾಗೆಯೇ ಬೌಲರುಗಳಾಗಿ ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್ ಹಾಗೂ ದುಷ್ಮಂತ ಚಮೀರಾಗೆ ಸ್ಥಾನ ನೀಡಿದ್ದಾರೆ. ಇದಾಗ್ಯೂ 11ನೇ ಆಟಗಾರ ಯಾರು ಎಂಬುದನ್ನು ಹೆಸರಿಸಲು ಚೋಪ್ರಾ ಮರೆತಿದ್ದು, ಹೀಗಾಗಿ ಟೀಮ್ ಇಂಡಿಯಾ ಮಾಜಿ ಆಟಗಾರರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
Published On - 3:31 pm, Thu, 16 September 21