- Kannada News Photo gallery Cricket photos IPL 2021: Amit Mishra ready to take over Lasith Malinga as IPL’s all-time record
IPL 2021: ಐಪಿಎಲ್ ದ್ವಿತಿಯಾರ್ಧದಲ್ಲಿ ಸೃಷ್ಟಿಯಾಗಲಿದೆ ಹೊಸ ದಾಖಲೆ
Amit Mishra: ನಂತರದ ಸ್ಥಾನದಲ್ಲಿ ಡ್ವೇನ್ ಬ್ರಾವೋ (156 ವಿಕೆಟ್) , ಹರ್ಭಜನ್ ಸಿಂಗ್ (150 ವಿಕೆಟ್), ರವಿಚಂದ್ರನ್ ಅಶ್ವಿನ್ (139 ವಿಕೆಟ್), ಸುನಿಲ್ ನರೈನ್ (130 ವಿಕೆಟ್) ಮತ್ತು ಯುಜ್ವೇಂದ್ರ ಚಾಹಲ್ (125 ವಿಕೆಟ್) ಇದ್ದಾರೆ.
Updated on: Sep 16, 2021 | 4:00 PM

ಐಪಿಎಲ್ ದ್ವಿತಿಯಾರ್ಧ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಮೊದಲ ಪಂದ್ಯದಲ್ಲಿಮುಂಬೈ ಇಂಡಿಯನ್ಸ್ ಹಾಗೂ ಸಿಎಸ್ಕೆ ಮುಖಾಮುಖಿಯಾಗಲಿದ್ದು, ಇದರೊಂದಿಗೆ ಉಳಿದ 31 ಪಂದ್ಯಗಳಿಗೆ ಚಾಲನೆ ದೊರೆಯಲಿದೆ.

ಸನ್ರೈಸರ್ಸ್ ಹೈದರಾಬಾದ್ ವಿರುದ್ದ ಪಂದ್ಯದ ಮೂಲಕ ದ್ವಿತಿಯಾರ್ಧ ಆರಂಭಿಸಲಿರುವ ಡೆಲ್ಲಿ ಕ್ಯಾಪಿಟಲ್ಸ್ ಪರ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. ಒಂದು ವೇಳೆ ಅವಕಾಶ ಲಭಿಸಿ ಸ್ಪಿನ್ ಮೋಡಿ ಮಾಡಿದರೆ ಐಪಿಎಲ್ ಇತಿಹಾಸದಲ್ಲೇ ಅತ್ಯುತ್ತಮ ಬೌಲರ್ ಎಂಬ ದಾಖಲೆಯನ್ನು ಅಮಿತ್ ಮಿಶ್ರಾ ಬರೆಯಬಹುದು.

ಏಕೆಂದರೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಜಿ ಮುಂಬೈ ಇಂಡಿಯನ್ಸ್ ವೇಗಿ ಶ್ರೀಲಂಕಾದ ಬೌಲರ್ ಲಸಿತ್ ಮಾಲಿಂಗ ಹೆಸರಿನಲ್ಲಿದೆ. ಮುಂಬೈ ಪರ 122 ಪಂದ್ಯಗಳನ್ನು ಆಡಿರುವ ಮಾಲಿಂಗ ಒಟ್ಟು 170 ವಿಕೆಟ್ ಪಡೆದಿದ್ದಾರೆ. ಇದೀಗ ಲಂಕಾ ವೇಗಿ ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ.

ಇತ್ತ ಐಪಿಎಲ್ನ ಆಲ್-ಟೈಮ್ ದಾಖಲೆಯಾಗಿ ಉಳಿದಿರುವ 170 ವಿಕೆಟ್ಗಳ ರೆಕಾರ್ಡ್ ಅನ್ನು ಮುರಿಯಲು ಅಮಿತ್ ಮಿಶ್ರಾ ಬೇಕಿರುವುದು ಕೇವಲ 5 ವಿಕೆಟ್ಗಳು ಮಾತ್ರ. ಹೌದು, ಐಪಿಎಲ್ನಲ್ಲಿ 166 ವಿಕೆಟ್ ಉರುಳಿಸಿರುವ ಅಮಿತ್ ಮಿಶ್ರಾ ದ್ವಿತಿಯಾರ್ಧದಲ್ಲಿ 4 ವಿಕೆಟ್ ಪಡೆದರೆ ಮಾಲಿಂಗ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಹಾಗೆಯೇ 5 ವಿಕೆಟ್ ಪಡೆದರೆ ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಇನ್ನು ಪ್ರಸ್ತುತ ಆಡುತ್ತಿರುವ ಬೌಲರುಗಳಲ್ಲಿ ಅಮಿತ್ ಮಿಶ್ರಾ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಇದ್ದಾರೆ. ಚಾವ್ಲಾ ಇದುವರೆಗೆ 156 ವಿಕೆಟ್ ಪಡೆದಿದ್ದಾರೆ. ಮುಂದಿನ 7 ಪಂದ್ಯಗಳಲ್ಲಿ ಅವಕಾಶ ಲಭಿಸಿದರೆ ದಾಖಲೆ ಬರೆಯುವ ಚಾನ್ಸ್ ಕೂಡ ಚಾವ್ಲಾ ಮುಂದಿದೆ.

ನಂತರದ ಸ್ಥಾನದಲ್ಲಿ ಡ್ವೇನ್ ಬ್ರಾವೋ (156 ವಿಕೆಟ್) , ಹರ್ಭಜನ್ ಸಿಂಗ್ (150 ವಿಕೆಟ್), ರವಿಚಂದ್ರನ್ ಅಶ್ವಿನ್ (139 ವಿಕೆಟ್), ಸುನಿಲ್ ನರೈನ್ (130 ವಿಕೆಟ್) ಮತ್ತು ಯುಜ್ವೇಂದ್ರ ಚಾಹಲ್ (125 ವಿಕೆಟ್) ಇದ್ದಾರೆ.
