- Kannada News Photo gallery Cricket photos IPL 2021 Mumbai Indians Hardik Pandya and family enjoy a fun outing at the beach
IPL 2021: ದುಬೈ ಬೀಚ್ನಲ್ಲಿ ಪತ್ನಿ ನತಾಶ, ಮಗ ಅಗಸ್ತ್ಯ ಜೊತೆ ಹಾರ್ದಿಕ್ ಪಾಂಡ್ಯ: ಇಲ್ಲಿವೆ ಫೋಟೋ
Hardik Pandya: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಗ ಅಗಸ್ತ್ಯ ಮತ್ತು ಪತ್ನಿ ನತಾಶ ಜೊತೆ ಸಮಯ ಕಳೆಯುತ್ತಿದ್ದಾರೆ.
Updated on: Sep 17, 2021 | 10:01 AM

ಐಪಿಎಲ್ 2021 ಎರಡನೇ ಚರಣಕ್ಕೆ ಆರಂಭಕ್ಕೆ ಇನ್ನೇನು ಎರಡು ದಿನಗಳಷ್ಟೆ ಬಾಕಿಯಿದೆ. ಇದರ ನಡುವೆ ಆಟಗಾರರು ಬಿಡುವಿನ ವೇಳೆ ಎಂಜಾಯ್ ಮಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮಗ ಅಗಸ್ತ್ಯ ಮತ್ತು ಪತ್ನಿ ನತಾಶ ಜೊತೆ ಸಮಯ ಕಳೆಯುತ್ತಿದ್ದಾರೆ.

ದುಬೈ ಬೀಚ್ಗೆ ಬೇಟಿ ನೀಡಿದ ಈ ಜೋಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಹಾರ್ದಿಕ್ ಪಾಂಡ್ಯ ಜೊತೆ ಮಗ ಅಗಸ್ತ್ಯ ಮತ್ತು ಪತ್ನಿ ನತಾಶ.

ಕೆರಿಬಿಯನ್ ಪ್ರೀಮಿಯರ್ ಲೀಗ್ ಮುಗಿಸಿ ಕಿರೊನ್ ಪೊಲಾರ್ಡ್ ಗುರುವಾರ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡರು.

14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಐಪಿಎಲ್ ಪಂದ್ಯಾವಳಿಗಳು ಸೆಪ್ಟೆಂಬರ್ 19ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿದೆ.

ಪ್ರಸ್ತುತ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ಗೆಲುವಿನೊಂದಿಗೆ ದ್ವಿತಿಯಾರ್ಧ ಆರಂಭಿಸುವ ಇರಾದೆಯಲ್ಲಿದೆ. ಮುಂಬೈ ತಂಡವು ಪ್ಲೇ ಆಫ್ ಪ್ರವೇಶಿಸಲು 7 ರಲ್ಲಿ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಿದೆ.
