ಐಪಿಎಲ್ 2021 ರ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ. ಕೋವಿಡ್‌ನಿಂದಾಗಿ, ಮೇ ಮೊದಲ ವಾರದಲ್ಲಿ ಈ ಋತುವನ್ನು ಮಧ್ಯದಲ್ಲಿ ನಿಲ್ಲಿಸಲಾಯಿತು. ಈಗ ಮತ್ತೊಮ್ಮೆ ಟಿ 20 ಕ್ರಿಕೆಟ್ನ ರೋಮಾಂಚಕತೆ ಎಲ್ಲರ ಕಣ್ಮನ ಸೆಳೆಯಲಿದೆ. ಲೀಗ್‌ನ ಪ್ರಸಕ್ತ ಆವೃತ್ತಿಯ ಮೊದಲ ಹಂತದಲ್ಲಿ, ಎಂದಿನಂತೆ ಸಾಕಷ್ಟು ರನ್ ಮಳೆಯೇ ಹರಿಯಿತು. ಬ್ಯಾಟ್ಸ್‌ಮನ್‌ಗಳು ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದಿದ್ದಾರೆ. ಐಪಿಎಲ್ 2021 ರಲ್ಲಿ ಮೊದಲ ಹಂತದಲ್ಲಿ ಯಾವ ಬ್ಯಾಟ್ಸ್‌ಮನ್ ಎಷ್ಟು ಸಿಕ್ಸರ್‌ಗಳನ್ನು ಹೊಡೆದರು ಮತ್ತು ಈ ತನಕ ಯಾರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ನಾವು ನಿಮಗೆ ಹೇಳುತ್ತಿದ್ದೇವೆ.