AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Price Today: ಮತ್ತಷ್ಟು ಏರಿಕೆಯಾಯ್ತು ಪೆಟ್ರೋಲ್​, ಡೀಸೆಲ್​ ಬೆಲೆ; ಇಂದು ಸಹ ಇಂಧನ ದರದಲ್ಲಿ ಹೆಚ್ಚಳ!

Petrol Rate Today: ಇಂದು ಸಹ ಪೆಟ್ರೋಲ್​, ಡೀಸೆಲ್​ ದರ ಏರಿಕೆ ಕಂಡಿದೆ. ಸತತ ಎರಡನೇ ದಿನವೂ ಇಂಧನ ದರದಲ್ಲಿ ಹೆಚ್ಚಳವಾಗಿದೆ. ಆ ಮೂಲಕ ಪ್ರಮುಖ ನಗರಗಳಲ್ಲಿ ಲೀಟರ್​ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಾಗಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

Petrol Price Today: ಮತ್ತಷ್ಟು ಏರಿಕೆಯಾಯ್ತು ಪೆಟ್ರೋಲ್​, ಡೀಸೆಲ್​ ಬೆಲೆ; ಇಂದು ಸಹ ಇಂಧನ ದರದಲ್ಲಿ ಹೆಚ್ಚಳ!
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on:Oct 06, 2021 | 8:03 AM

Petrol Diesel Price Today | ದೆಹಲಿ: ಒಂದು ದಿನದ ವಿರಾದ ಬಳಿಕ ನಿನ್ನೆ ಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಮಾಡಲಾಯಿತು. ಆ ಬಳಿಕ ಇಂದು (ಅಕ್ಟೋಬರ್ 6, ಬುಧವಾರ) ಪೆಟ್ರೋಲ್ (Petrol Price), ಡೀಸೆಲ್ ಬೆಲೆಯಲ್ಲಿ (Diesel Price) ಮತ್ತೆ ಏರಿಕೆ ಕಂಡು ಬಂದಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆಯನ್ನು 30 ಪೈಸೆ ಹೆಚ್ಚಳ ಮಾಡಲಾಗಿದೆ. ಬಳಿಕ ಲೀಟರ್ ಪೆಟ್ರೋಲ್ ಬೆಲೆ 102.94 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಲೀಟರ್ ಡೀಸೆಲ್ ದರ 91.42 ರೂಪಾಯಿಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 108.96 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 99.17 ರೂಪಾಯಿಗೆ ಏರಿಕೆ ಆಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 100.49 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.93 ರೂಪಾಯಿಗೆ ಏರಿಕೆ ಆಗಿದೆ. ಇನ್ನು ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 103.65 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆ 94.53 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html

Published On - 7:56 am, Wed, 6 October 21

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ