Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಈ ಬಾರಿ ಕರ್ನಾಟಕ ಬಜೆಟ್​​ನಲ್ಲಿ ಯಡಿಯೂರಪ್ಪ ಅವರು ಪೆಟ್ರೋಲ್- ಡೀಸೆಲ್ ಮೇಲಿನ ಸುಂಕ ಇಳಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಇತರ ಮೂಲಗಳಿಂದ ಆದಾಯಕ್ಕಾಗಿ ಪ್ರಸ್ತಾವ ಮಾಡಿರುವ ಅಂಶಗಳು ಇಲ್ಲಿವೆ.

ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Mar 08, 2021 | 6:28 PM

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ಬಜೆಟ್ 2021ರಲ್ಲಿ ಹುಸಿ ಮಾಡಿದ ಅತಿ ದೊಡ್ಡ ನಿರೀಕ್ಷೆ ಏನೆಂದರೆ ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿಲ್ಲ. ಜನಸಾಮಾನ್ಯರಿಗೆ ಈ ಬಗ್ಗೆ ಅಪಾರವಾದ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಕರ್ನಾಟಕ ಮಾರಾಟ ತೆರಿಗೆ (Karnataka State Tax) ಸೇರಿದಂತೆ ಯಾವುದೇ ತೆರಿಗೆಯನ್ನು ಹೆಚ್ಚಿಸದಿರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆಯೇ ವಿನಾ ಇಳಿಕೆ ಕೂಡ ಮಾಡಿಲ್ಲ ಎಂಬುದು ಸದ್ಯಕ್ಕೆ ಉಲ್ಲೇಖ ಮಾಡಬೇಕಾದ ಸಂಗತಿ.

ಕರ್ನಾಟಕದಲ್ಲಿ ಇಂದಿನ ಪೆಟ್ರೋಲ್- ಡೀಸೆಲ್ ದರ ಹೀಗಿದೆ: (ಮಾರ್ಚ್ 8, 2021) ಬಾಗಲಕೋಟೆ: ಪೆಟ್ರೋಲ್- ರೂ. 94.38, ಡೀಸೆಲ್- ರೂ. 86.54 ಬೆಂಗಳೂರು: ಪೆಟ್ರೋಲ್- ರೂ. 94.29, ಡೀಸೆಲ್- ರೂ. 86.42 ಬೆಂಗಳೂರು ಗ್ರಾಮಾಂತರ: ಪೆಟ್ರೋಲ್- ರೂ. 94.29, ಡೀಸೆಲ್- ರೂ. 87 ಬೆಳಗಾವಿ: ಪೆಟ್ರೋಲ್- ರೂ. 94.88, ಡೀಸೆಲ್- ರೂ. 87 ಬಳ್ಳಾರಿ: ಪೆಟ್ರೋಲ್- ರೂ. 95.82, ಡೀಸೆಲ್- ರೂ. 87.85 ಬೀದರ್: ಪೆಟ್ರೋಲ್- ರೂ. 95.28, ಡೀಸೆಲ್- ರೂ. 87.35 ವಿಜಯಪುರ: ಪೆಟ್ರೋಲ್- ರೂ. 94.41, ಡೀಸೆಲ್- ರೂ. 86.56 ಚಾಮರಾಜನಗರ: ಪೆಟ್ರೋಲ್- ರೂ. 94.32, ಡೀಸೆಲ್- ರೂ. 86.46 ಚಿಕ್ಕಬಳ್ಳಾಪುರ: ಪೆಟ್ರೋಲ್- ರೂ. 94.22, ಡೀಸೆಲ್- ರೂ. 86.37 ಚಿಕ್ಕಮಗಳೂರು: ಪೆಟ್ರೋಲ್- ರೂ. 95.60, ಡೀಸೆಲ್- ರೂ. 87.54 ಚಿತ್ರದುರ್ಗ: ಪೆಟ್ರೋಲ್- ರೂ. 95.46, ಡೀಸೆಲ್- ರೂ.87.38 ದಕ್ಷಿಣ ಕನ್ನಡ: ಪೆಟ್ರೋಲ್- ರೂ. 93.48, ಡೀಸೆಲ್- ರೂ. 85.65 ದಾವಣಗೆರೆ: ಪೆಟ್ರೋಲ್- ರೂ. 95.55, ಡೀಸೆಲ್- ರೂ. 87.46 ಧಾರವಾಡ: ಪೆಟ್ರೋಲ್- ರೂ. 94.17, ಡೀಸೆಲ್- ರೂ. 86.34 ಗದಗ: ಪೆಟ್ರೋಲ್- ರೂ. 94.54, ಡೀಸೆಲ್- ರೂ. 86.68 ಕಲ್ಬುರ್ಗಿ: ಪೆಟ್ರೋಲ್- ರೂ. 94.35, ಡೀಸೆಲ್- ರೂ. 86.51 ಹಾಸನ: ಪೆಟ್ರೋಲ್- ರೂ. 94.08, ಡೀಸೆಲ್- ರೂ. 86.12 ಹಾವೇರಿ: ಪೆಟ್ರೋಲ್- ರೂ. 94.89, ಡೀಸೆಲ್- ರೂ. 87 ಕೊಡಗು: ಪೆಟ್ರೋಲ್- ರೂ. 95.22, ಡೀಸೆಲ್- ರೂ. 87.16 ಕೋಲಾರ: ಪೆಟ್ರೋಲ್- ರೂ. 94.40, ಡೀಸೆಲ್- ರೂ. 86.56 ಕೊಪ್ಪಳ: ಪೆಟ್ರೋಲ್- ರೂ. 95.31, ಡೀಸೆಲ್- ರೂ. 87.38 ಮಂಡ್ಯ: ಪೆಟ್ರೋಲ್- ರೂ. 93.92, ಡೀಸೆಲ್- ರೂ. 86.09 ಮೈಸೂರು: ಪೆಟ್ರೋಲ್- ರೂ. 94.31, ಡೀಸೆಲ್- ರೂ. 86.44 ರಾಯಚೂರು: ಪೆಟ್ರೋಲ್- ರೂ. 94.54, ಡೀಸೆಲ್- ರೂ. 86.69 ರಾಮನಗರ: ಪೆಟ್ರೋಲ್- ರೂ. 94.49, ಡೀಸೆಲ್- ರೂ. 86.61 ಶಿವಮೊಗ್ಗ: ಪೆಟ್ರೋಲ್- ರೂ. 95.42, ಡೀಸೆಲ್- ರೂ. 87.39 ತುಮಕೂರು: ಪೆಟ್ರೋಲ್- ರೂ. 95.30, ಡೀಸೆಲ್- ರೂ. 87.35 ಉಡುಪಿ: ಪೆಟ್ರೋಲ್- ರೂ. 93.55, ಡೀಸೆಲ್- ರೂ. 85.71 ಉತ್ತರಕನ್ನಡ: ಪೆಟ್ರೋಲ್- ರೂ. 95.37, ಡೀಸೆಲ್- ರೂ. 87.38 ಯಾದಗಿರಿ: ಪೆಟ್ರೋಲ್- ರೂ. 94.63, ಡೀಸೆಲ್- ರೂ. 86.76

ಇನ್ನು ಜಿಎಸ್​ಟಿ ಪುರ್ವ ಲೆಕ್ಕ ಪರಿಶೋಧನೆಗಳನ್ನು (ಆಡಿಟ್) ಪೂರ್ಣಗೊಳಿಸುವ ಹಾಗೂ ಶೀರ್ಘವಾಗಿ ತೆರಿಗೆ ಬಾಕಿಯನ್ನು ವಸೂಲಿ ನಾಡುವ ಉದ್ದೇಶದಿಂದ ಜಿಎಸ್​ಟಿ ಪೂರ್ವದ ಕಾಯ್ದೆಗಳಿಗೆ ಸಂಬಂಧಿಸಿದಂತೆ “ಕರ ಸಮಾಧಾನ ಯೋಜನೆ- 2021” ಜಾರಿ ಮಾಡುವ ಪ್ರಸ್ತಾವ ಮಾಡಲಾಗಿದೆ. ಇನ್ನು 2021-22ನೇ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 76,473 ಕೋಟಿ ರೂಪಾಯಿಗಳ ತೆರಿಗೆ ಸಂಗ್ರಹಣ ಗುರಿಯನ್ನು ನಿಗದಿ ಮಾಡಲಾಗಿದೆ.

ಇನ್ನು ಕೈಗೆಟುಕುವ ದರಗಳ ಮನೆಗಳ ಮಾರಾಟ ಹೆಚ್ಚಾಗಲಿ ಎಂಬ ಕಾರಣಕ್ಕೆ 35 ಲಕ್ಷದಿಂದ 45 ಲಕ್ಷ ರೂಪಾಯಿ ತನಕದ ಮೌಲ್ಯದ ಅಪಾರ್ಟ್​ಮೆಂಟ್​ಗಳ ಮೊದಲ ನೋಂದಣಿಗೆ ಮುದ್ರಾಂಕ ಶುಲ್ಕವನ್ನು ಶೇಕಡಾ 5ರಿಂದ 3ಕ್ಕೆ ಇಳಿಸಲಾಗಿದೆ. ಮತ್ತೊಂದು ಪ್ರಮುಖ ಇಲಾಖೆಯಾದ ಅಬಕಾರಿ ಇಲಾಖೆಗೆ ಪ್ರಸಕ್ತ ಹಣಕಾಸು ವರ್ಷಕ್ಕೆ 24,580 ಕೋಟಿ ರೂ. ಸಂಗ್ರಹದ ಗುರಿ ಇದ್ದು, ಸಾರಿಗೆ ಇಲಾಖೆಯಿಂದ 7,515 ಕೋಟಿ ಸಂಗ್ರಹಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: Karnataka Budget 2021: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ; ಯಡಿಯೂರಪ್ಪ ಅಳಿಲು ಸೇವೆ

ಇದನ್ನೂ ಓದಿ: Karnataka Budget 2021 LIVE: ಕರ್ನಾಟಕ ಬಜೆಟ್ 2021-22; ಇದೊಂದು ಟೊಳ್ಳು ಬಜೆಟ್​ -​ ಸಿದ್ದರಾಮಯ್ಯ ಕಟು ಟೀಕೆ

Published On - 6:06 pm, Mon, 8 March 21