AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ನಲ್ಲಿ ಮದುವೆ ಸಂಭ್ರಮ, ನಡೆಯಲಿದೆ ಸಾಲು-ಸಾಲು ಶುಭ ಕಾರ್ಯ

Sandalwood wedding in February Month: 2025 ರ ಆರಂಭದಲ್ಲಿ ಚಂದನವನದಲ್ಲಿ ಸಾಲು-ಸಾಲು ಶುಭ ಕಾರ್ಯಗಳು ನಡೆಯುತ್ತಿವೆ. ಹಲವು ಸೆಲೆಬ್ರಿಟಿಗಳು ಒಬ್ಬರ ಹಿಂದೊಬ್ಬರಂತೆ ವಿವಾಹ ಆಗುತ್ತಿದ್ದಾರೆ. ಡಾಲಿ ಧನಂಜಯ್ ಸೇರಿದಂತೆ ಇನ್ನೂ ಕೆಲವು ಸೆಲೆಬ್ರಿಟಿಗಳ ಮದುವೆ ಫೆಬ್ರವರಿ ತಿಂಗಳಲ್ಲಿ ನಡೆಯಲಿದೆ. ಇಲ್ಲಿದೆ ನೋಡಿ ಪಟ್ಟಿ.

ಸ್ಯಾಂಡಲ್​ವುಡ್​ನಲ್ಲಿ ಮದುವೆ ಸಂಭ್ರಮ, ನಡೆಯಲಿದೆ ಸಾಲು-ಸಾಲು ಶುಭ ಕಾರ್ಯ
Sandalwood Wedding
ಮಂಜುನಾಥ ಸಿ.
|

Updated on:Jan 19, 2025 | 1:22 PM

Share

2025ರ ಆರಂಭದಲ್ಲಿ ಚಂದನವನದಲ್ಲಿ ಸಾಲು-ಸಾಲು ಕಾರ್ಯಗಳು ನಡೆಯುತ್ತಿವೆ. ಒಂದರ ಹಿಂದೊಂದರಂತೆ ಸೆಲೆಬ್ರಿಟಿಗಳ ವಿವಾಹ ಮಹೋತ್ಸವಗಳು ನಡೆಯುತ್ತಿವೆ. ಈ ವರ್ಷದ ಆರಂಭದಲ್ಲಿ ಕೆಲವು ಸೆಲೆಬ್ರಿಟಿಗಳು ಪೋಷಕರಾಗಿದ್ದಾರೆ. ಶ್ರುತಿ ಸೇರಿದಂತೆ ಇನ್ನೂ ಕೆಲವರು ಹೊಸ ಮನೆಗಳನ್ನು ಖರೀದಿ ಮಾಡಿದ್ದಾರೆ ಅಥವಾ ಕಟ್ಟಿಸಿದ್ದಾರೆ. ಇದೀಗ ಡಾಲಿ ಧನಂಜಯ್ ಸೇರಿದಂತೆ ಇನ್ನೂ ಕೆಲವರು ಮದುವೆ ಆಗುತ್ತಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಸಾಲು-ಸಾಲು ಶುಭ ಕಾರ್ಯ ನಡೆಯುತ್ತಿದೆ.

ಡಾಲಿ ಧನಂಜಯ್ ಮದುವೆ

ನಟರಾಕ್ಷಸ ಎಂದೇ ಹೆಸರುವಾಸಿ ಆಗಿರುವ ಡಾಲಿ ಧನಂಜಯ್ ಅವರ ಮದುವೆ ಕೆಲವೇ ದಿನಗಳಲ್ಲಿ ನಡೆಯಲಿದೆ. ಡಾಲಿ ಧನಂಜಯ್ ಅವರು ವೈದ್ಯೆ ಧನ್ಯತಾ ಅವರನ್ನು ವಿವಾಹವಾಗಲಿದ್ದು ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳು ಸಿನಿಮಾ, ರಾಜಕೀಯ ಗಣ್ಯರುಗಳಿಗೆ ಮದುವೆ ಆಮಂತ್ರಣ ಪತ್ರಿಕೆಗಳನ್ನು ನೀಡಿದ್ದಾರೆ. ಇವರ ವಿವಾಹ ಫೆಬ್ರವರಿ ಹದಿನಾರರಂದು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ನಡೆಯಲಿದೆ.

ನಟ ರಾಣಾ ವಿವಾಹ

ರಕ್ಷಿತಾ ಅವರ ಸಹೋದರ, ‘ಏಕ್ ಲವ್ ಯಾ’ ಸಿನಿಮಾದ ನಾಯಕ ರಾಣಾ ಅವರ ವಿವಾಹವೂ ಫೆಬ್ರವರಿಯಲ್ಲಿಯೇ ನಡೆಯಲಿದೆ. ನಿರ್ದೇಶಕ ಪ್ರೇಮ್ ಮತ್ತು ರಕ್ಷಿತಾ ಅವರುಗಳು ಮುಂದೆ ನಿಂತು ರಾಣಾ ಮದುವೆ ಮಾಡುತ್ತಿದ್ದಾರೆ. ಇವರೇ ಮುಂದೆ ನಿಂತು ಸಿನಿಮಾ ಮತ್ತು ರಾಜಕೀಯ ಗಣ್ಯರಿಗೆ ವಿವಾಹ ಆಮಂತ್ರಣ ಪತ್ರಿಕೆ ವಿತರಣೆ ಮಾಡುತ್ತಿದ್ದಾರೆ. ರಾಣಾ ವಿವಾಹ ಫೆಬ್ರವರಿ 7 ರಂದು ನಡೆಯಲಿದೆ.

ಜಯಮಾಲಾ ಪುತ್ರಿ ಸೌಂದರ್ಯ ವಿವಾಹ

ಕನ್ನಡ ಚಿತ್ರರಂಗದ ಹಿರಿಯ ನಟಿ, ರಾಜಕಾರಣಿಯೂ ಆಗಿರುವ ಜಯಮಾಲಾ ಅವರ ಪುತ್ರಿ ಸೌಂದರ್ಯ ಅವರ ವಿವಾಹ ಸಹ ಫೆಬ್ರವರಿ 7 ರಂದೇ ನಡೆಯಲಿದೆ. ಜಯಮಾಲಾ ಅವರು ಸಹ ಪುತ್ರಿಯ ವಿವಾಹ ಆಮಂತ್ರಣ ಪತ್ರಿಕೆಯನ್ನು ನೀಡುತ್ತಿದ್ದಾರೆ. ಹಿರಿಯ ಐಎಎಸ್ ಅಧಿಕಾರಿ ರಾಮಚಂದ್ರ ರಾವ್ ಪುತ್ರ ರುಷಬ್ ಅನ್ನು ಸೌಂದರ್ಯ ಮದುವೆ ಆಗಲಿದ್ದಾರೆ. ಇಬ್ಬರ ವಿವಾಹ ಪ್ಯಾಲೆಸ್ ಗ್ರೌಂಡ್​ನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Sun, 19 January 25

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ