Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಗುಡ್​ ಬೈ; ಮತ್ತೊಮ್ಮೆ ಖಚಿತಪಡಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಅವರು 11 ಸೀಸನ್​ಗಳ ಕಾಲ ಬಿಗ್ ಬಾಸ್ ಕನ್ನಡವನ್ನು ನಿರೂಪಿಸಿದ ನಂತರ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ಇದು ಅವರ ಅಂತಿಮ ನಿರ್ಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಲರ್ಸ್ ಕನ್ನಡದವರು ಅವರ ರಾಜೀನಾಮೆಯನ್ನು ಒಪ್ಪಿಕೊಂಡಿಲ್ಲವಾದರೂ, ಸುದೀಪ್ ಅವರು ತಮ್ಮ ನಿರ್ಧಾರದಲ್ಲಿ ದೃಢವಾಗಿದ್ದಾರೆ.

ಬಿಗ್ ಬಾಸ್​ಗೆ ಗುಡ್​ ಬೈ; ಮತ್ತೊಮ್ಮೆ ಖಚಿತಪಡಿಸಿದ ಕಿಚ್ಚ ಸುದೀಪ್
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 20, 2025 | 8:43 AM

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ದ ಹೋಸ್ಟ್ ಆಗಿ 11 ಸೀಸನ್​ಗಳನ್ನು ನಡೆಸಿಕೊಟ್ಟಿದ್ದಾರೆ. ಇದು ಅವರ ಕೊನೆಯ ಸೀಸನ್ ಎಂದು ಈ ಮೊದಲು ಹೇಳಿದ್ದರು. ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಸುದೀಪ್ ಅವರು, ‘ಕಲರ್ಸ್ ಕನ್ನಡದವರು ನನ್ನ ರೆಸಿಗ್ನೇಶನ್​ ಲೆಟರ್​ನ ಸ್ವೀಕರಿಸಿಲ್ಲ’ ಎಂದಿದ್ದರು. ಈಗ ಅವರು ಬಿಗ್ ಬಾಸ್ ತೊರೆಯುವ ಬಗ್ಗೆ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಈ ಮೂಲಕ ಅವರು ಗಟ್ಟಿ ನಿರ್ಧಾರವನ್ನು ಸ್ಪಷ್ಟಪಡಿಸಿದ್ದಾರೆ.

ಈ ಮೊದಲು ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಸುದೀಪ್ ಅವರು, ‘ಮುಂದೆ ಯಾರು ಬಿಗ್ ಬಾಸ್ ನಡೆಸಿಕೊಡುತ್ತಾರೆ ಅಥವಾ ಯಾರು ನಡೆಸಿಕೊಡಬೇಕು ಎಂದು ನಾನು ಹೇಳುವುದಿಲ್ಲ. ಕಲರ್ಸ್​ನವರು ನಾನು ಬಿಡುವುದನ್ನು ಒಪ್ಪುತ್ತಿಲ್ಲ. ಮುಂದೆ ಮತ್ತೆ ನಾನೇ ಹೋಸ್ಟ್ ಮಾಡಬೇಕು ಎಂದು ಬಂದರೆ ಈ ಮೊದಲು ಟ್ವೀಟ್ ಮಾಡಿದ್ದೆ ಎಂದೆಲ್ಲ ಹಿಂಜರಿಯುವುದಿಲ್ಲ’ ಎಂದು ಹೇಳಿದ್ದರು.

ಆದರೆ, ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ಬಗ್ಗೆ ಗಟ್ಟಿ ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ಬಿಗ್ ಬಾಸ್​ನ ಕಳೆದ 11 ಸೀಸನ್‌ಗಳಿಂದ ನಾನು ಆನಂದಿಸಿದ್ದೇನೆ.  ನೀವು ತೋರಿದ ಎಲ್ಲಾ ಪ್ರೀತಿಗಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು. ಮುಂಬರುವ ಫಿನಾಲೆ, ಹೋಸ್ಟ್ ಆಗಿ ನನ್ನ ಕೊನೆಯ ಸೀಸನ್. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ಇದೊಂದು ಅವಿಸ್ಮರಣೀಯ ಪಯಣ. ಅದನ್ನು ನನ್ನ ಕೈಲಾದಷ್ಟು ನಿಭಾಯಿಸಿದ್ದಕ್ಕೆ ನನಗೆ ಖುಷಿ ಇದೆ. ಈ ಅವಕಾಶಕ್ಕಾಗಿ ಕಲರ್ಸ್​ ಕನ್ನಡಕ್ಕೆ ಧನ್ಯವಾದ’ ಎಂದಿದ್ದಾರೆ.

ಇದನ್ನೂ ಓದಿ: ‘ನಿಮ್ಮ ಸಹವಾಸ ಸಾಕಾಗಿದೆ’; ಸ್ಪರ್ಧಿಗಳಿಗೆ ನೇರವಾಗಿ ಹೇಳಿದ ಸುದೀಪ್

‘ಬಿಗ್ ಬಾಸ್​ ಸೀಸನ್ 11’ ಆರಂಭ ಆಗಿ ಕೆಲವೇ ವಾರಗಳಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು. ಈಗ ಸುದೀಪ್ ಅವರು ಮತ್ತೊಮ್ಮೆ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ವಿಚಾರವನ್ನು ಮತ್ತೊಮ್ಮೆ ಖಚಿತಪಡಿಸಿದ್ದಾರೆ. ಅವರು ಬಿಗ್ ಬಾಸ್ ತೊರೆಯೋದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Mon, 20 January 25

ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು
ಕಳ್ಳರ ಹಾವಳಿ‌ ತಡೆಯಲು ಮಹಿಳೆಯರ ರಾತ್ರಿ ಗಸ್ತು