ನಟನಾಗಿ ಮಿಂಚಬೇಕು ಎಂಬ ಆಸಕ್ತಿ ಇದೆಯೇ? ಮಂಡ್ಯ ರಮೇಶ್ ಕೊಟ್ಟಿದ್ದಾರೆ ಟಿಪ್ಸ್

ಮಂಡ್ಯ ರಮೇಶ್ ಅವರು ನಟನಾಗಲು ಬೇಕಾದ ಗುಣಗಳು, ರಂಗಭೂಮಿಯ ಪ್ರಾಮುಖ್ಯತೆ ಮತ್ತು ‘ನಟನ’ ಶಾಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇಚ್ಛಾಶಕ್ತಿ, ಜೀವನದ ಅರಿವು ಮತ್ತು ನಿರಂತರ ಕಲಿಕೆ ನಟನಿಗೆ ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ರಂಗಭೂಮಿ ಸೇರಿದರೆ ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದೂ ಅವರು ತಿಳಿಸಿದ್ದಾರೆ.

ನಟನಾಗಿ ಮಿಂಚಬೇಕು ಎಂಬ ಆಸಕ್ತಿ ಇದೆಯೇ? ಮಂಡ್ಯ ರಮೇಶ್ ಕೊಟ್ಟಿದ್ದಾರೆ ಟಿಪ್ಸ್
ಮಂಡ್ಯ ರಮೇಶ್
Follow us
ರಾಜೇಶ್ ದುಗ್ಗುಮನೆ
|

Updated on:Jan 18, 2025 | 3:14 PM

ನಟನಾಗಬೇಕು ಎಂಬುದು ಅನೇಕರ ಕನಸು. ಆದರೆ, ಸರಿಯಾದ ವೇದಿಕೆ ಸಿಗದೆ, ಬೇರೆ ಬೇರೆ ಒತ್ತಡಗಳ ಕಾರಣದಿಂದ ಅದು ಸಾಧ್ಯವಾಗಿರುವುದಿಲ್ಲ. ರಂಗಭೂಮಿ ಸೇರದೆಯೂ ಉತ್ತಮ ನಟನಾಗಬಹುದು. ಅದು ಹೇಗೆ? ರಂಗಭೂಮಿ ಸೇರಿದರೆ ಆಗುವ ಪ್ರಯೋಜನಗಳು ಏನು ಎಂಬಿತ್ಯಾದಿ ವಿಚಾರಗಳನ್ನು ಹಿರಿಯ ನಟ, ‘ನಟನ’ ರಂಗಶಾಲೆಯ ಸ್ಥಾಪಕ ಮಂಡ್ಯ ರಮೇಶ್ ಹೇಳಿದ್ದಾರೆ.

ನಟನಾಗಬೇಕು ಎಂಬುವವರಿಗೆ ಕೆಲವು ವಿಚಾರಗಳು ಮುಖ್ಯವಾಗಿ ಬೇಕು ಎಂಬುದು ರಮೇಶ್ ಅಭಿಪ್ರಾಯ. ‘ನಟನಾಗಬೇಕು ಎಂಬುವವನಿಗೆ ಇಚ್ಛಾಶಕ್ತಿ ಬೇಕು. ಅದರ ಕೊರತೆ ಎಲ್ಲ ಕಡೆಗಳಲ್ಲೂ ಕಾಣುತ್ತಿದೆ. ಜೀವನದ ಗೃಹಿಕೆ. ಮುಖ್ಯವಾಗಿ ಇರಬೇಕು. ಯಾವುದೇ ನಟ ತನ್ನ ನೆಲ, ಭಾಷೆ, ಪರಿಸರ ದಟ್ಟವಾಗಿ ಜನಾಂಗೀಯ ಅಧ್ಯಯನ ಮಾಡಿಕೊಳ್ಳಬೇಕು. ಸಂವೇದನಾಶೀಲನಾಗಿರಬೇಕು. ನಟನಾಗುವವನಿಗೆ ಬದುಕಿರುವವರೆಗೂ ವಿಶ್ರಾಂತಿ ಇಲ್ಲ. ಆತ ದಿನವೂ ಆಧುನಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ನಾನು ನಟನಾಗಿದ್ದೆ, ಈಗ ಅಲ್ಲ ಎಂಬಂತಿಲ್ಲ’ ಎಂದಿದ್ದಾರೆ ರಮೇಶ್.

‘ನಟನೆ ಮಾಡುವ ವ್ಯಕ್ತಿ ಬಡವನಾಗಿರಲ್ಲ, ಶ್ರೀಮಂತನೂ ಆಗಿರಲ್ಲ. ಆತ ರಾಮನಲ್ಲ, ಕೃಷ್ಣ ಅಲ್ಲ. ಆದರೆ, ಬಡವನ ಪಾತ್ರ ಮಾಡುವ ಮೂಲಕ ಬಡತನದ ನೋವನ್ನು ಅನಾವರಣ ಮಾಡುತ್ತಾನೆ.  ಪ್ರತಿದಿನ ಕಲಿಕೆ ಇರುತ್ತದೆ. ತುಂಬಾ ತಾಳ್ಮೆ ಅಗತ್ಯ. ನಿಜವಾದ ನಟ ಹುಟ್ಟುವುದು 40 ವರ್ಷಗಳ ಮೇಲೆ. ಅವನ ಅನುಭವಗಳ ಮೂಲಕ’ ಎಂದಿದ್ದಾರೆ ರಮೇಶ್.

‘ನಟನಿಗೆ ಮುಗ್ಧತೆ ಬೇಕೆ ಬೇಕು. ರಾಜ್​ಕುಮಾರ್ ಅವರ ಕಣ್ಣಲ್ಲಿ, ಚಾರ್ಲಿ ಚಾಪ್ಲಿನ್ ಕಣ್ಣಲ್ಲಿ ಆ ಮುಗ್ಧತೆ ನೋಡಿದ್ದೇನೆ. ಕಲಾವಿದನಿಗೆ ನೀರಿನ ಗುಣ ಬೇಕು. ಯಾವ ಬಣ್ಣ ಹಾಕಿದರೂ ಆ ಬಣ್ಣಕ್ಕೆ ತಿರುಗಬೇಕು. ಬಣ್ಣದ ನೀರಿಗೆ ಬಣ್ಣ ಹಾಕೋದು ಕಷ್ಟ. ತಿಳಿ ನೀರಿಗೆ ಬಣ್ಣ ಹಾಕುವುದು ಸುಲಭ. ಓದಿನ ಮೂಲಕ, ಪ್ರವಾಸದ ಮೂಲಕ ಹೀಗೆ ಹಲವು ವಿವಿಧಗಳ ಹಂತದಲ್ಲಿ ನಟನೆ ಕಲಿಯಬೇಕು’ ಎಂದಿದ್ದಾರೆ ಅವರು.

‘ಎಲ್ಲಿಯೋ ಆಗುವ ಘಟನೆಗೆ ಕಲಾವಿದ ಸ್ಪಂದಿಸಬೇಕು. ಸುತ್ತಲು ಇರುವ ಸಮಾಜವೇ ಅವನ ಶಾಲೆ ಆಗಬೇಕು. ರಂಗಭೂಮಿಗೆ ಬರದೆಯೂ ಉತ್ತಮ ನಟನಾಗಬಹುದು. ಆದರೆ, ಜೀವನ ಗೃಹಿಕೆ ಎಷ್ಟು ಆಳಕ್ಕೆ ಹೋಗಿದೆ ಎಂಬುದು ಮುಖ್ಯವಾಗುತ್ತದೆ. ರಂಗಭೂಮಿಯಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ’ ಎಂದಿದ್ದಾರೆ ಮಂಡ್ಯ ರಮೇಶ್.

ನಟಗೆ ವಿದ್ಯಾರ್ಹತೆ ಮುಖ್ಯವೇ? ಈ ಬಗ್ಗೆ ಮಂಡ್ಯ ರಮೇಶ್ ಹೇಳೋದೇ ಬೇರೆ. ‘ರಾಜ್​ಕುಮಾರ್ ಅವರು ಹೆಚ್ಚು ಕಲಿತಿಲ್ಲ. ಆದರೆ, ಅವರು ರಾಮಾಯಣ, ಮಹಾಭಾರತದ ಕೇಳುವ ಮೂಲಕ ಅವರು ಎಲ್ಲವನ್ನೂ ತಿಳಿದುಕೊಂಡಿದ್ದರು. ಅವರು ಜೀವನದಿಂದ ಸಾಕಷ್ಟು ಕಲಿಕೆ ಮಾಡಿದ್ದರು. ನಟನಾದವನಿಗೆ ಸಾತ್ವಿಕನಾಗಿರಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ರಂಗಭೂಮಿಯಿಂದ ಸಿನಿಮಾಕ್ಕೆ ಬಂದ ಮಂಡ್ಯ ರಮೇಶ್​ಗೆ ಮೊದಲು ಸಿಕ್ಕ ಸಂಭಾವನೆ ಎಷ್ಟು? ಶಿವಣ್ಣ ಹೇಳಿದ್ದೇನು?

ನಟನ ಶಾಲೆಯ ಬಗ್ಗೆ..

‘ನಟನ’ ಶಾಲೆ ಮೂಲಕ ಮಂಡ್ಯ ರಮೇಶ್ ಅವರು ಅನೇಕರಿಗೆ ನಟನೆ ಕಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮೇಶ್, ‘ನಾವು ಅವರಿಗೆ ಕಲಿಸುತ್ತಿದ್ದೇವೆ ಎಂಬುದಕ್ಕಿಂತ ಕಲಿಯುತ್ತಿದ್ದೇವೆ. ನಮ್ಮ ಶಾಲೆಯ ಮೂಲಕ ಏಕಾಗೃತೆ, ಗ್ರಹಣ ಶಕ್ತಿ, ಎಲ್ಲ ಪಂಥಗಳನ್ನು ಗೌರವಿಸಬೇಕು, ದೇಹ ಫ್ಲಿಕ್ಸಿಬೆಲ್ ಆಗಿ ಹೇಗೆ ಇಟ್ಟುಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಕಲಿಸಿಕೊಡುತ್ತೇವೆ. ರಂಗಭೂಮಿಗೆ ಸಂಬಂಧಿಸಿದ 15 ಸಾವಿರ ಪುಸ್ತಕ ಇದೆ. ಕಾಸ್ಟ್ಯೂಮ್ ಮಾಡೋದು ಗೇ್ಎ ಎಂದು ಹೇಳಿಕೊಡುತ್ತೇವೆ. ಸಂಗೀತದ ಬಗ್ಗೆ ತಿಳಿಸುತ್ತೇವೆಸೆಟ್ ಡಿಸೈನ್ ಹೇಳಿಕೊಡುತ್ತೇವೆ. ಬಣ್ಣಗಳ ಬಳಕೆ ಬಗ್ಗೆ ಹೇಳಿಕೊಡುತ್ತೇವೆ’ ಎನ್ನುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:08 pm, Sat, 18 January 25

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ